Categories
ಸ್ಪೋರ್ಟ್ಸ್

ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ದೀಪಾವಳಿಗೆ ಹೊಸ ಬಟ್ಟೆ ಉಡುಗೊರೆ

ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ,
ಪ್ರತಿವರ್ಷದಂತೆ ಈ ಬಾರಿಯೂ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನ ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ,ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು.
ಹೊಸ ಬಟ್ಟೆ ವಿತರಿಸಿ ಮಾತನಾಡಿದ ವೆಂಕಟರಮಣ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್ ರವರು “ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭ ವೆಂಕಟರಮಣ ಸಂಸ್ಥೆಯ ಸದಸ್ಯರು  ಪಟಾಕಿಗೆ ಖರ್ಚು ಮಾಡುವ ಹಣವನ್ನು ಉಳಿಸಿ,ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ” ಎಂದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್,ಕಾರ್ಯದರ್ಶಿ ಪ್ರವೀಣ್ ಕುಮಾರ್,ಕೋಶಾಧಿಕಾರಿ ಲೋಕೇಶ್ ಸುವರ್ಣ,ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ್ ಮೈಂದನ್,ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ,ಮಹಿಳಾ ಮಂಡಳಿ ಅಧ್ಯಕ್ಷೆ ರಾಜೀವಿ ಉಮೇಶ್,ಜಿತೇಂದ್ರ ಶೆಟ್ಟಿ, ಸತೀಶ್ ಕುಂದರ್,ಉಮೇಶ್ ಕರ್ಕೇರ,ಪ್ರಕಾಶ್ ಶೆಟ್ಟಿ, ಕಿರಣ್,ಹರಿಶ್ಚಂದ್ರ,ಸುರೇಶ್,ಸುರಭಿ ರತನ್,ಅನ್ನುರಾಜ್ ಮೊದಲಾದವರಿದ್ದರು.
Categories
ಸಂತಾಪ

ವೆಂಕಟರಮಣ ಪಿತ್ರೋಡಿ ಸಂಸ್ಥೆಯ ಮಾಜಿ ಅಧ್ಯಕ್ಷ,ಕ್ರಿಕೆಟ್ ಪಟು CA ಮಲ್ಲೇಶ್ ಕುಮಾರ್ ನಿಧನ

ಉಡುಪಿ-ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ಇದರ ಮಾಜಿ ಅಧ್ಯಕ್ಷರು,CA ಅಸೋಸಿಯೇಷನ್ ಕಾರ್ಯದರ್ಶಿಯಾಗಿದ್ದ ಮಲ್ಲೇಶ್ ಕುಮಾರ್ ಪಿತ್ರೋಡಿ(40) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅತ್ಯಂತ ಸರಳ ಸಜ್ಜನಿಕೆಯ ಸ್ವಭಾವದ ಮಲ್ಲೇಶ್ ಕುಮಾರ್ ಪಿತ್ರೋಡಿ ಇವರು ವೆಂಕಟರಮಣ ಪಿತ್ರೋಡಿ ತಂಡದ ಪ್ರಮುಖ ಆಟಗಾರರಾಗಿ ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿ ತನ್ನ ತಂಡಕ್ಕೆ ಪ್ರಶಸ್ತಿಯ ಗರಿ ಮೂಡಿಸಿದ್ದರು.ರಾಜ್ಯದ ಅತ್ಯಂತ ಶಿಸ್ತುಬದ್ಧ ತಂಡವಾಗಿ ಗುರುತಿಸಿಕೊಂಡ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡ ಮಲ್ಲೇಶ್ ರವರು ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನ ಸಂಘದ ಸದಸ್ಯರಾಗಿ ಹಲವು ಬಾರಿ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದ್ದರು.
ಮಲ್ಲೇಶ್ ರವರು ಸಿ.ಎ ಉದ್ಯೋಗಿಯಾಗಿದ್ದು ಉಡುಪಿಯ ಬನ್ನಂಜೆಯಲ್ಲಿ ಕಛೇರಿಯನ್ನು ಹೊಂದಿದ್ದರು.ಸಿ.ಎ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ಮೃತರು ತಂದೆ,ತಾಯಿ,ಸೋದರಿ,ಪತ್ನಿ,ಪುತ್ರ ಹಾಗೂ ಇಬ್ಬರು ಪುಟ್ಟ ಮಕ್ಕಳ‌ ಸಹಿತ ಅಪಾರ ಬಂಧುಬಳಗ ಮತ್ತು ಸ್ನೇಹಿತ ವರ್ಗವನ್ನು ಅಗಲಿದ್ದಾರೆ.
ಅಗಲಿದ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬ ವರ್ಗಕ್ಕೆ ಅಗಲಿಕೆಯ ನೋವನ್ನು ಮರೆಸುವ ಶಕ್ತಿ ನೀಡಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಪ್ರಾರ್ಥಿಸುತ್ತೇವೆ…
Categories
ಸ್ಪೋರ್ಟ್ಸ್

ವೆಂಕಟರಮಣ ಪಿತ್ರೋಡಿ-ಆಜಾದಿ ಕೀ ಅಮೃತ್ ಮಹೋತ್ಸವ- ಕ್ರೀಡಾಕೂಟ ಉದ್ಘಾಟನೆ

ಉದ್ಯಾವರ-75 ನೇ ಸ್ವಾತಂತ್ರ್ಯ ದಿನಾಚರಣೆ(ಆಜಾದಿ ಕೀ ಅಮೃತ್ ಮಹೋತ್ಸವ) ಪ್ರಯುಕ್ತ ,ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂದಿರ,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಮತ್ತು ಮಹಿಳಾ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಕ್ರೀಡಾಕೂಟ ಜರುಗಿತು.
 
ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ ಮತ್ತು ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ ನ ಅಧ್ಯಕ್ಷ ನವೀನ್ ಸಾಲ್ಯಾನ್ ಜಂಟಿಯಾಗಿ ಚಾಲನೆಯನ್ನು ನೀಡಿದರು.ಆಯ್ದ ವಿವಿಧ ವಿಭಾಗಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ 100ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದರು.
 
ಈ ಸಂದರ್ಭ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತೀ ಚಂದ್ರ ಬಂಗೇರ,ಮಾಜಿ ಅಧ್ಯಕ್ಷೆ ರಾಜೀವಿ ಉಮೇಶ್ ಕರ್ಕೇರ,ಭಜನಾ ಮಂದಿರದ ಕಾರ್ಯದರ್ಶಿ ವಸಂತ್ ಸಾಲ್ಯಾನ್,ವೆಂಕಟರಮಣ ಸಂಸ್ಥೆಯ
ಉಪಾಧ್ಯಕ್ಷ ವಿಜಯ್ ಕೋಟ್ಯಾನ್,
ಕಾರ್ಯದರ್ಶಿ ಪ್ರವೀಣ್ ಕುಮಾರ್ ಪಿತ್ರೋಡಿ,ಉಮೇಶ್ ಕರ್ಕೇರ,
ಉಮಾನಾಥ ಕರ್ಕೇರ,ಲೋಕೇಶ್ ಸುವರ್ಣ,ನಾಗೇಶ್ ತಿಂಗಳಾಯ,ಮೋಹಿನಿ,ಸಬಿತಾ,ಪೂರ್ಣಿಮಾ,ರೇಖಾ
ಕರ್ಕೇರ,ಸಂಗೀತ ಮತ್ತಿತರರು ಉಪಸ್ಥಿತರಿದ್ದರು
Categories
ಕ್ರಿಕೆಟ್

ಉದ್ಯಾವರ-ವೆಂಕಟರಮಣ ಪಿತ್ರೋಡಿ ಮಡಿಲಿಗೆ “ಸಮಾಗಮ ಟ್ರೋಫಿ-2021”

90 ರ ದಶಕದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉದ್ಯಾವರ ಪರಿಸರದ ಹಿರಿಯ ಆಟಗಾರರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ,ಉದ್ಯಾವರದ ಕ್ರೀಡಾ ಪ್ರೋತ್ಸಾಹಕರು,ಕುತ್ಪಾಡಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಶ್ರೀ.ವಸಂತ್ ಕುತ್ಪಾಡಿ ಇವರ ಸಾರಥ್ಯದಲ್ಲಿ,90 ರ ದಶಕದಲ್ಲಿ ಗತವೈಭವ ಮೆರೆದ ಉದ್ಯಾವರ ಪರಿಸರದ ಆಹ್ವಾನಿತ 10 ತಂಡಗಳ ನಡುವೆ ಆಯೋಜಿಸಲಾಗಿದ್ದ “ಸಮಾಗಮ ಟ್ರೋಫಿ-2021″ಯನ್ನು ವೆಂಕಟರಮಣ ಪಿತ್ರೋಡಿ ತಂಡ ಜಯಿಸಿದೆ.
ಮಾರ್ಚ್ 7 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಈ ಪ‌ಂದ್ಯಾಟ ನಡೆದಿತ್ತು.ಲೀಗ್ ಹಂತದ ರೋಚಕ‌ ಸೆಣಸಾಟಗಳ ಬಳಿಕ ಫೈನಲ್ ನಲ್ಲಿ ವೆಂಕಟರಮಣ ಪಿತ್ರೋಡಿ ತಂಡ ಜನಪ್ರಿಯ ಉದ್ಯಾವರ ತಂಡವನ್ನು ಸೋಲಿಸಿ ಸಮಾಗಮ ಟ್ರೋಫಿ-2021 ಜಯಿಸಿತ್ತು‌.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸಂದೀಪ್ ಕುಮಾರ್ ಪಿತ್ರೋಡಿ, ಬೆಸ್ಟ್ ಬೌಲರ್ ರಕ್ಷಿತ್ ವಿ‌.ಸಿ‌.ಸಿ ,ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪ್ರಸಾದ್ ಜನಪ್ರಿಯ ಹಾಗೂ ಸರಣಿಶ್ರೇಷ್ಟ  ಪ್ರಶಸ್ತಿಯನ್ನು ಜಯರಾಮ್ ವಿ‌.ಸಿ‌.ಸಿ ಪಡೆದರೆ,ಕರಾವಳಿ ಪಿತ್ರೋಡಿ ಶಿಸ್ತುಬದ್ಧ ತಂಡ ಗೌರವಕ್ಕೆ ಪಾತ್ರವಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಣ್ಯರಾದ
ಶರತ್ ಶೆಟ್ಟಿ ಪಡುಬಿದ್ರಿ,ರಾಧಾಕೃಷ್ಣ ಶ್ರೀಯಾನ್,ಜಿತೇಂದ್ರ ಶೆಟ್ಟಿ ಉದ್ಯಾವರ,ರಿಯಾಜ್ ಪಳ್ಳಿ,ಲೋಹಿತ್ ಕುಮಾರ್ ಪಿತ್ರೋಡಿ,ಶ್ರೀಮತಿ ಮಾಲತಿ.ಎಸ್.ಸಾಲ್ಯಾನ್,ಕೋಟ ರಾಮಕೃಷ್ಣ ಆಚಾರ್,ಸತೀಶ್ ಕುಂದರ್,ಶ್ರೀಮತಿ ಫ್ರೀಡಾ ಡಿಸೋಜ,ಸದಾಶಿವ ಅಮೀನ್,ಮಿಥೇಶ್ ಸುವರ್ಣ,ಆಬಿದ್ ಆಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶರತ್ ಶೆಟ್ಟಿ ಪಡುಬಿದ್ರಿ,ನಿವೃತ್ತ ಯೋಧರು ಬಾಲಚಂದ್ರ ಪಿತ್ರೋಡಿ,ರಾಜ್ಯಮಟ್ಟದ ಆಟಗಾರರಾದ ಪ್ರವೀಣ್ ಪಿತ್ರೋಡಿ, ಅಪ್ಪು ಉದ್ಯಾವರ,ಹಿರಿಯ ವೀಕ್ಷಕ ವಿವರಣೆಕಾರರು ವಿನಯ್ ಉದ್ಯಾವರ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪ್ರವರ್ತಕ ಕೋಟ ರಾಮಕೃಷ್ಣ ಆಚಾರ್ ಈ 6 ಮಂದಿ ಸಾಧಕರನ್ನು ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು.
ಹಾಗೂ ಉದ್ಯಾವರ ಪರಿಸರದ ಹಿರಿಯ ತಂಡಗಳಾದ ಸಭಾ ಕ್ರಿಕೆಟರ್ಸ್,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್,ಕುತ್ಪಾಡಿ ಕ್ರಿಕೆಟರ್ಸ್,11 ಸ್ಟಾರ್ ಕ್ರಿಕೆಟರ್ಸ್, ಕರಾವಳಿ ಪಿತ್ರೋಡಿ, ಬೊಳ್ಜೆ ಉದ್ಯಾವರ,ಜನಪ್ರಿಯ ಕ್ರಿಕೆಟರ್ಸ್, ಆಜಾದ್ ಕ್ರಿಕೆಟರ್ಸ್,ಸಂಪಿಗೆ ನಗರ(ಮಿತ್ರ ವೃಂದ),ಕೇದಾರ್ ಫ್ರೆಂಡ್ಸ್ ತಂಡಗಳನ್ನು ಅಭಿನಂದಿಸಲಾಯಿತು.
ವೀಕ್ಷಕ ವಿವರಣೆಯಲ್ಲಿ ಹಿರಿಯ ವೀಕ್ಷಕ ವಿವರಣೆಕಾರರಾದ ಉಮೇಶ್ ಪೂಜಾರಿ ಬ್ರಹ್ಮಾವರ ಹಾಗೂ ವಿನಯ್ ಉದ್ಯಾವರ ಸಹಕರಿಸಿದರು…
Categories
ಕ್ರಿಕೆಟ್

ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ಮೂಡಿಸುವತ್ತ ವೆಂಕಟರಮಣ ಪಿತ್ರೋಡಿ ಸಂಸ್ಥೆ ವಿಶಿಷ್ಟ ಪ್ರಯತ್ನ-ಭಾಂಧವ್ಯ ಟ್ರೋಫಿ-2021

ಕಳೆದ ಮೂರು ದಶಕಗಳಿಂದ
ಕ್ರೀಡೆಯ ಜೊತೆ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಪ್ರತಿ ವರ್ಷವೂ ಈ ಸಂಸ್ಥೆ ಸಂಘಟಿಸುವ ಪ್ರತಿಯೊಂದು ಕ್ರೀಡಾ ಚಟುವಟಿಕೆಗಳಲ್ಲಿ ಹೊಸತನ,ಸಮಾಜಕ್ಕೆ ಸಂದೇಶ,ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ವೆಂಕಟರಮಣ ಸಂಸ್ಥೆಯ ಜ್ಯೂನಿಯರ್ ತಂಡ ಈ ಬಾರಿ ಹಿರಿಯ ಕ್ರಿಕೆಟಿಗರ ಸಲಹೆ,ಸಹಕಾರದೊಂದಿಗೆ ಉದ್ಯಾವರ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಯುವ ಜನಾಂಗಕ್ಕೆ ಮನೆ ಜವಾಬ್ದಾರಿ ಮೂಡಿಸುವ ಸಲುವಾಗಿ ವಿಶಿಷ್ಟ ಪ್ರಯತ್ನದ ರೂಪದಲ್ಲಿ  ಜನವರಿ 16 ಮತ್ತು 17 ರಂದು ಉದ್ಯಾವರ
ಗ್ರಾಮಪಂಚಾಯತ್ ಮೈದಾನದಲ್ಲಿ
ಭಾಂದವ್ಯ ಟ್ರೋಫಿ-2021 ಆಯೋಜಿಸಿದ್ದಾರೆ.
ಉದ್ಯಾವರ ಪರಿಸರದ 15 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸುತ್ತಿದ್ದು,
ವಿಜೇತ ತಂಡಗಳಿಗೆ ನಗದು ಬಹುಮಾನದ  ಬದಲಾಗಿ ಅಕ್ಕಿಯನ್ನು ನೀಡಲಾಗುತ್ತಿದೆ.
ಪ್ರಥಮ ಸ್ಥಾನಿ ತಂಡಕ್ಕೆ 600 ಕೆ‌.ಜಿ.ಅಕ್ಕಿ( ತಂಡದ ಎಲ್ಲಾ ಆಟಗಾರರಿಗೆ ತಲಾ 50 ಕೆ.ಜಿ ಅಕ್ಕಿ),ದ್ವಿತೀಯ ಸ್ಥಾನಿ ತಂಡಕ್ಕೆ 300
ಕೆ.ಜಿ ಅಕ್ಕಿ(ತಂಡದ ಎಲ್ಲಾ ಆಟಗಾರರಿಗೆ 25 ಕೆ.ಜಿ ಅಕ್ಕಿ),ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ 5 ಕೆ‌.ಜಿ ಅಕ್ಕಿ,ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ 25 ಕೆ‌.ಜಿ ಅಕ್ಕಿಯನ್ನು ನೀಡಲಾಗುತ್ತಿದೆ.
ಬಹುತೇಕ ಯುವಕರು ಗೆದ್ದ ನಗದು ಕೈಗೆ ಸಿಕ್ಕಾಗ ದಾರಿ ತಪ್ಪುವುದನ್ನು ಮನಗಂಡ ವೆಂಕಟರಮಣ ಸಂಸ್ಥೆ ಕಳೆದ ವರ್ಷವೂ ಕೂಡ ವಿಜೇತರಿಗೆ ನಗದು ಬಹುಮಾನದ ಬದಲಾಗಿ, ಕೆ‌.ಜಿ.ಗಟ್ಟಲೆ ಅಕ್ಕಿ ಬಹುಮಾನವನ್ನು ನೀಡಿ,ಆಟಗಾರರ ಪೋಷಕರ  ಮನದಲ್ಲಿ ಸಾರ್ಥಕ್ಯ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿತ್ತು.
ಈ ಬಾರಿಯೂ ಕೂಡ ಟನ್ ಗಟ್ಟಲೆ ಅಕ್ಕಿ ಗ್ರಾಮೀಣ ಭಾಗದ ಯುವ ಕ್ರಿಕೆಟಿಗರ ಮನೆಗಳನ್ನು ತಲುಪಲಿದೆ….
Categories
ಕ್ರಿಕೆಟ್

ವೆಂಕಟರಮಣ ಪಿತ್ರೋಡಿ- ವಿ‌.ಎಸ್.ಸಿ ಚಾಂಪಿಯನ್ಸ್ ಮಡಿಲಿಗೆ ಪಿ.ಪಿ.ಎಲ್-3 ಪ್ರಶಸ್ತಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ರವಿವಾರ ಉದ್ಯಾವರ ಗ್ರಾಮ‌ ಪಂಚಾಯತ್ ಮೈದಾನದಲ್ಲಿ ಆಯೋಜಿಸಿದ್ದ ಪಿ.ಪಿ.ಎಲ್-13 ಟ್ರೋಫಿಯನ್ನು ಲೋಹಿತ್ ಕುಮಾರ್ ಪಿತ್ರೋಡಿ ಸಾರಥ್ಯದ ವಿ‌.ಎಸ್.ಸಿ.ಚಾಂಪಿಯನ್ಸ್ ಜಯಿಸಿದೆ.
ವೆಂಕಟರಮಣ ಪಿತ್ರೋಡಿ ತಂಡದ ಸದಸ್ಯರಿಂದ ಕೂಡಿದ 6 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಫೈನಲ್ ನಲ್ಲಿ ವಿ.ಎಸ್‌‌.ಸಿ ಸನ್ ರೈಸರ್ಸ್ ತಂಡವನ್ನು ಸೋಲಿಸುವುದರ ಮೂಲಕ ವಿ‌.ಎಸ್.ಸಿ ಚಾಂಪಿಯನ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬೆಸ್ಟ್ ಬ್ಯಾಟ್ಸ್‌ಮನ್ ರಾಕೇಶ್,ಸರಣಿ ಶ್ರೇಷ್ಠ ಡೆರಿನ್,ಎಮರ್ಜಿಂಗ್ ಪ್ಲೇಯರ್ ಇತೇಶ್ ಹಾಗೂ ವಿ.ಎಸ್.ಸಿ ಸನ್ ರೈಸರ್ಸ್ ಶಿಸ್ತುಬದ್ಧ ತಂಡ ಪ್ರಶಸ್ತಿ ಪಡೆದುಕೊಂಡರು.
ಬೆಳಿಗ್ಗೆ ನಡೆದ ಪಿ.ಪಿ.ಎಲ್ ನ ಉದ್ಘಾಟನಾ ಸಮಾರಂಭದಲ್ಲಿ
ವಿಶೇಷ ಚೇತನ ಚಿತ್ರಕಲಾವಿದ ಶಿರ್ವದ ಗಣೇಶ್ ಪಂಜಿಮಾರು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ತನುಶ್ರೀ ಪಿತ್ರೋಡಿ, ವಿ.ಎಸ್.ಸಿ ಬ್ಲಡ್ ಗ್ರೂಪ್ ನ‌ ಸದಸ್ಯರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು  ಸನ್ಮಾನಿಸಲಾಯಿತು.
“ತನ್ನ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನಿಂದ ಸನ್ಮಾನ ಸ್ವೀಕರಿಸಿರುವುದು ಹೆಮ್ಮೆಯ ವಿಚಾರ”ವೆಂದು ಗಣೇಶ್ ಪಂಜಿಮಾರು ಅಭಿಪ್ರಾಯ ತಿಳಿಸಿದರು.
ಈ ಸಂದರ್ಭ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಪ್ರಕೃತಿ ಉಳಿಸುವ ಸಲುವಾಗಿ ಗಿಡ ವಿತರಣೆ,ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ,ತಂಡದ ವತಿಯಿಂದ ನಡೆಯುವ ಆನ್ಲೈನ್ ಸ್ಪರ್ಧೆ(ಚಿತ್ರಕಲೆ,ನೃತ್ಯ, ಸಂಗೀತ) ಬಹುಮಾನ ವಿತರಣೆ,ಅಭೂತಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ,ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನಿ ಸದಸ್ಯರಿಗೆ ಜೀವರಕ್ಷಕ ಗೌರವ ಪ್ರಶಸ್ತಿ,ಹಿರಿಯ ಸಕ್ರಿಯ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಧ್ಯಮುಕ್ತ ಸಮಾಜ,ರಕ್ತದಾನದ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್,ಮಾಜಿ ಅಧ್ಯಕ್ಷರು ಗೋಪಾಲ್ ಅಮೀನ್,ಜಿತೇಂದ್ರ ಶೆಟ್ಟಿ,ಉದ್ಯಮಿ ಲೋಹಿತ್ ಕುಮಾರ್ ಪಿತ್ರೋಡಿ,ಮಾಜಿ ಸೈನಿಕರಾದ ಬಾಲಚಂದ್ರ ಪಿತ್ರೋಡಿ,ಹಿರಿಯರಾದ ಸುಂದರ್ ಕೋಟ್ಯಾನ್,ವಿಜಯ್ ಕೋಟ್ಯಾನ್,ಮಲ್ಲೇಶ್ ಕುಮಾರ್,ಉದಯ್ ಕುಮಾರ್,ಪ್ರವೀಣ್ ಪಿತ್ರೋಡಿ, ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು….