ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ರವಿವಾರ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸಿದ್ದ ಪಿ.ಪಿ.ಎಲ್-13 ಟ್ರೋಫಿಯನ್ನು ಲೋಹಿತ್ ಕುಮಾರ್ ಪಿತ್ರೋಡಿ ಸಾರಥ್ಯದ ವಿ.ಎಸ್.ಸಿ.ಚಾಂಪಿಯನ್ಸ್ ಜಯಿಸಿದೆ.
ವೆಂಕಟರಮಣ ಪಿತ್ರೋಡಿ ತಂಡದ ಸದಸ್ಯರಿಂದ ಕೂಡಿದ 6 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಫೈನಲ್ ನಲ್ಲಿ ವಿ.ಎಸ್.ಸಿ ಸನ್ ರೈಸರ್ಸ್ ತಂಡವನ್ನು ಸೋಲಿಸುವುದರ ಮೂಲಕ ವಿ.ಎಸ್.ಸಿ ಚಾಂಪಿಯನ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬೆಸ್ಟ್ ಬ್ಯಾಟ್ಸ್‌ಮನ್ ರಾಕೇಶ್,ಸರಣಿ ಶ್ರೇಷ್ಠ ಡೆರಿನ್,ಎಮರ್ಜಿಂಗ್ ಪ್ಲೇಯರ್ ಇತೇಶ್ ಹಾಗೂ ವಿ.ಎಸ್.ಸಿ ಸನ್ ರೈಸರ್ಸ್ ಶಿಸ್ತುಬದ್ಧ ತಂಡ ಪ್ರಶಸ್ತಿ ಪಡೆದುಕೊಂಡರು.
ಬೆಳಿಗ್ಗೆ ನಡೆದ ಪಿ.ಪಿ.ಎಲ್ ನ ಉದ್ಘಾಟನಾ ಸಮಾರಂಭದಲ್ಲಿ
ವಿಶೇಷ ಚೇತನ ಚಿತ್ರಕಲಾವಿದ ಶಿರ್ವದ ಗಣೇಶ್ ಪಂಜಿಮಾರು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ತನುಶ್ರೀ ಪಿತ್ರೋಡಿ, ವಿ.ಎಸ್.ಸಿ ಬ್ಲಡ್ ಗ್ರೂಪ್ ನ ಸದಸ್ಯರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
“ತನ್ನ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನಿಂದ ಸನ್ಮಾನ ಸ್ವೀಕರಿಸಿರುವುದು ಹೆಮ್ಮೆಯ ವಿಚಾರ”ವೆಂದು ಗಣೇಶ್ ಪಂಜಿಮಾರು ಅಭಿಪ್ರಾಯ ತಿಳಿಸಿದರು.
ಈ ಸಂದರ್ಭ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಪ್ರಕೃತಿ ಉಳಿಸುವ ಸಲುವಾಗಿ ಗಿಡ ವಿತರಣೆ,ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ,ತಂಡದ ವತಿಯಿಂದ ನಡೆಯುವ ಆನ್ಲೈನ್ ಸ್ಪರ್ಧೆ(ಚಿತ್ರಕಲೆ,ನೃತ್ಯ, ಸಂಗೀತ) ಬಹುಮಾನ ವಿತರಣೆ,ಅಭೂತಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ,ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನಿ ಸದಸ್ಯರಿಗೆ ಜೀವರಕ್ಷಕ ಗೌರವ ಪ್ರಶಸ್ತಿ,ಹಿರಿಯ ಸಕ್ರಿಯ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಧ್ಯಮುಕ್ತ ಸಮಾಜ,ರಕ್ತದಾನದ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್,ಮಾಜಿ ಅಧ್ಯಕ್ಷರು ಗೋಪಾಲ್ ಅಮೀನ್,ಜಿತೇಂದ್ರ ಶೆಟ್ಟಿ,ಉದ್ಯಮಿ ಲೋಹಿತ್ ಕುಮಾರ್ ಪಿತ್ರೋಡಿ,ಮಾಜಿ ಸೈನಿಕರಾದ ಬಾಲಚಂದ್ರ ಪಿತ್ರೋಡಿ,ಹಿರಿಯರಾದ ಸುಂದರ್ ಕೋಟ್ಯಾನ್,ವಿಜಯ್ ಕೋಟ್ಯಾನ್,ಮಲ್ಲೇಶ್ ಕುಮಾರ್,ಉದಯ್ ಕುಮಾರ್,ಪ್ರವೀಣ್ ಪಿತ್ರೋಡಿ, ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು….