ಕಳೆದ ಮೂರು ದಶಕಗಳಿಂದಕ್ರೀಡೆಯ ಜೊತೆ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಪ್ರತಿ ವರ್ಷವೂ ಈ ಸಂಸ್ಥೆ ಸಂಘಟಿಸುವ ಪ್ರತಿಯೊಂದು ಕ್ರೀಡಾ ಚಟುವಟಿಕೆಗಳಲ್ಲಿ ಹೊಸತನ,ಸಮಾಜಕ್ಕೆ ಸಂದೇಶ,ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ವೆಂಕಟರಮಣ ಸಂಸ್ಥೆಯ ಜ್ಯೂನಿಯರ್ ತಂಡ ಈ ಬಾರಿ ಹಿರಿಯ ಕ್ರಿಕೆಟಿಗರ ಸಲಹೆ,ಸಹಕಾರದೊಂದಿಗೆ ಉದ್ಯಾವರ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಯುವ ಜನಾಂಗಕ್ಕೆ ಮನೆ ಜವಾಬ್ದಾರಿ ಮೂಡಿಸುವ ಸಲುವಾಗಿ ವಿಶಿಷ್ಟ ಪ್ರಯತ್ನದ ರೂಪದಲ್ಲಿ ಜನವರಿ 16 ಮತ್ತು 17 ರಂದು ಉದ್ಯಾವರ
ಗ್ರಾಮಪಂಚಾಯತ್ ಮೈದಾನದಲ್ಲಿ
ಭಾಂದವ್ಯ ಟ್ರೋಫಿ-2021 ಆಯೋಜಿಸಿದ್ದಾರೆ.
ಉದ್ಯಾವರ ಪರಿಸರದ 15 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸುತ್ತಿದ್ದು,
ವಿಜೇತ ತಂಡಗಳಿಗೆ ನಗದು ಬಹುಮಾನದ ಬದಲಾಗಿ ಅಕ್ಕಿಯನ್ನು ನೀಡಲಾಗುತ್ತಿದೆ.
ಪ್ರಥಮ ಸ್ಥಾನಿ ತಂಡಕ್ಕೆ 600 ಕೆ.ಜಿ.ಅಕ್ಕಿ( ತಂಡದ ಎಲ್ಲಾ ಆಟಗಾರರಿಗೆ ತಲಾ 50 ಕೆ.ಜಿ ಅಕ್ಕಿ),ದ್ವಿತೀಯ ಸ್ಥಾನಿ ತಂಡಕ್ಕೆ 300
ಕೆ.ಜಿ ಅಕ್ಕಿ(ತಂಡದ ಎಲ್ಲಾ ಆಟಗಾರರಿಗೆ 25 ಕೆ.ಜಿ ಅಕ್ಕಿ),ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ 5 ಕೆ.ಜಿ ಅಕ್ಕಿ,ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ 25 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ.
ಬಹುತೇಕ ಯುವಕರು ಗೆದ್ದ ನಗದು ಕೈಗೆ ಸಿಕ್ಕಾಗ ದಾರಿ ತಪ್ಪುವುದನ್ನು ಮನಗಂಡ ವೆಂಕಟರಮಣ ಸಂಸ್ಥೆ ಕಳೆದ ವರ್ಷವೂ ಕೂಡ ವಿಜೇತರಿಗೆ ನಗದು ಬಹುಮಾನದ ಬದಲಾಗಿ, ಕೆ.ಜಿ.ಗಟ್ಟಲೆ ಅಕ್ಕಿ ಬಹುಮಾನವನ್ನು ನೀಡಿ,ಆಟಗಾರರ ಪೋಷಕರ ಮನದಲ್ಲಿ ಸಾರ್ಥಕ್ಯ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿತ್ತು.
ಈ ಬಾರಿಯೂ ಕೂಡ ಟನ್ ಗಟ್ಟಲೆ ಅಕ್ಕಿ ಗ್ರಾಮೀಣ ಭಾಗದ ಯುವ ಕ್ರಿಕೆಟಿಗರ ಮನೆಗಳನ್ನು ತಲುಪಲಿದೆ….