Categories
ಅಥ್ಲೆಟಿಕ್ಸ್

ಅಂತರಾಷ್ಟ್ರೀಯ ಕರಾಟೆಯಲ್ಲಿ ಉಡುಪಿಯ ಆದಿತ್ಯ.ಜೆ.ಬಿ ಇವರಿಗೆ ಪ್ರಶಸ್ತಿ

ಉಡುಪಿಯ ಆದಿತ್ಯ ಜೆ. ಬಿ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಉಡುಪಿ : ರಾಜ್ಯ ಕರಾಟೆ ಸಂಸ್ಥೆ  ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಶಿವಮೊಗ್ಗ ಆಶ್ರಯದಲ್ಲಿ ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ 3ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಪಂದ್ಯಾಟದಲ್ಲಿ ಭಾಗವಹಿಸಿದ ಉಡುಪಿಯ ಆದಿತ್ಯ ಜೆ. ಬಿ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಇವರು ಎಂ.ಜಿ.ಎಂ ಕಾಲೇಜು,ಉಡುಪಿ ಇಲ್ಲಿ  ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದು ಜಯಕರ ಬೈಲೂರು ಹಾಗೂ ಭಾರತಿ ಜಯಕರ ದಂಪತಿಯ ಪುತ್ರ. ಕರಾಟೆಯಲ್ಲಿ ಇವರು “ಬ್ಲ್ಯಾಕ್ ಬೆಲ್ಟ್” ಪದವಿಯನ್ನು ಹೊಂದಿದ್ದು ಮಾರ್ಪಳ್ಳಿಯ ದಯಾನಂದ ಆಚಾರ್ಯ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
Categories
ಭರವಸೆಯ ಬೆಳಕು

ಉಡುಪಿಯ ವೆಂಟನ ಫೌಂಡೇಶನ್- ಕರಾಟೆ ಪಟುಗಳಿಗೆ ಸಹಾಯ ಹಸ್ತ

ಕುಂದಾಪುರ ಭಂರ್ಡಾಕಾರ್ಸ  ಕಾಲೇಜಿನ ನಾಲ್ಕು ಕರಾಟೆ ಪಟುಗಳಾದ ಚೇತನ ಗಾಣಿಗ, ಪವನ ಪೂಜಾರಿ, ಭರತ ದೇವಾಡಿಗ, ಅಜಯ ದೇವಾಡಿಗ  ಉಡುಪಿಯ ವೆಂಟನ ಫೌಂಡೇಶನ್ ವತಿಯಿಂದ ಅಗೋಸ್ಟ 19 ರಿಂದ 23 ರ ತನಕ ಥೈಲ್ಯಾಂಡಿನಲ್ಲಿ ನಡೆಯುವ ಕರಾಟೆ ಡೂ ಚಾಂಪಿಯನ್ ಶಿಪ್ ಗೆ ಸಹಾಯಧನ‌ ನೀಡುವ ಕಾರ್ಯಕ್ರಮ ನಡೆಯಿತು.
ವೆಂಟನ ಫೌಂಡೇಶನ್ ವತಿಯಿಂದ ಸದಸ್ಯ ಷಣ್ಮುಖರಾಜ ನಾಲ್ಕು ಕ್ರೀಡಾಪಟುಗಳಿಗೆ ತಲಾ ಐವತ್ತೂ ಸಾವಿರ ರೂಪಾಯಿಯ ಚೆಕ್ಕನ್ನು ಹಸ್ತಾಂತರಿಸಿದರು.
ನಂತರ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ನಮ್ಮ ವೆಂಟನ ಫೌಂಡೇಶನ್ ಸಹಾಯಹಸ್ತ ವತಿಯಿಂದ ನೀಡಲಾಗಿದೆ. ಈ ಭಾಗದಿಂದ ಅಂತರಾಷ್ಠೀಯ ಮಟ್ಟದ ಪಂದ್ಯಾಟಕ್ಕೆ  ಆಯ್ಕೆಯಾಗುವುದು ಹೆಮ್ಮೆಯ ವಿಷಯ. ಇದರ ಹಿಂದೆ ಅವರ ಹಲವಾರು ವರ್ಷದ ಪರಿಶ್ರಮವಿದೆ. ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನದ ನಂತರ ಈ ಸಹಾಯ ನೀಡಲಾಗಿದೆ. ಇವರ ಈ ಭಾಗವಹಿಸುವಕೆ ಇತರರಿಗೂ ಪ್ರೇರೆಪಣೆಯಾಗಲಿ ಅಲ್ಲದೇ ಮುಂದಿನ ದಿನಗಳಲ್ಲಿ ಬೇರೆಯ ಸ್ಪರ್ಧಾಳುಗಳಿಗೆ ಹೀಗೆಯೇ ಧನಸಹಾಯ ನೀಡಲಿದ್ಧೇವೆ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಕೆ.ಪಿ. ಭಟ್ ಮಾತನಾಡುತ್ತಾ  ಶೈಕ್ಷಣಿಕವಲ್ಲದೇ ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಸಮಗ್ರ ವ್ಯಕ್ತಿವ್ಯ ನಿರ್ಮಾಣ ಸಾದ್ಯ ಎಂದರು.
ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರಕಾಶ ಸೋನ್ಸ್ ಮಾತನಾಡುತ್ತಾ ಕ್ರೀಡಾಳುಗಳಿಗೆ ಶುಭ ಹಾರೈಸುತ್ತಾ ತಾವು ಇಂದಿಗೂ ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಕುರಿತು ವಿಧ್ಯಾರ್ಥಿಗಳಿಗೆ ತಿಳಿಸುತ್ತಾ. ಆಟೋಟಗಳಿಂದ ಜೀವನದಲ್ಲಿ ಸದಾ ಉತ್ಸಾಹ, ಸಕಾರಾತ್ಮಕ‌ ಚಿಂತನೆಯಿಂದ ಕೂಡಿರುತ್ತದೆ. ಎಲ್ಲಾ ಪ್ರಕಾರದ ಕ್ರೀಡೆಗಳಿಗೆ ತಮ್ಮ ಸದಾ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ, ಕಾಲೇಜಿನ  ವಿಶ್ವಸ್ಥ ಮಂಡಳಿಯ ಸದಸ್ಯರಾದ  ದೇವದಾಸ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಕ ಶಂಕರನಾರಾಯಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Categories
ಭರವಸೆಯ ಬೆಳಕು

ರಾಷ್ಟ್ರೀಯ ಮಟ್ಟದ ಶಾಟ್ ಪುಟ್ ಪಂದ್ಯಾಟದಲ್ಲಿ ಉಡುಪಿಯ ಸಿಂಚನಾ ಆಚಾರ್ಯ ಪ್ರಥಮ

ಮಹಾರಾಷ್ಟ್ರ-ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಾಟ್ ಪುಟ್ ಪಂದ್ಯಾಟದಲ್ಲಿ ಉಡುಪಿಯ ಸಿಂಚನಾ ಆಚಾರ್ಯ ಪ್ರಥಮ ಸ್ಥಾನವನ್ನು ಮುಡಿಗೇರಿಸಿ
ಕೊಂಡಿದ್ದಾಳೆ.
 
ಉಡುಪಿ ಸರಕಾರಿ ಪಿ‌.ಯು‌.ಕಾಲೇಜಿನ ಗರ್ಲ್ಸ್
ಹೈಸ್ಕೂಲಿನ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿಂಚನಾ,ಅಲೆವೂರು ದುರ್ಗಾ ನಗರ ಶ್ರೀ ರಾಜು ಆಚಾರ್ಯ ಮತ್ತು ಸರಸ್ವತಿ ಆಚಾರ್ಯ ದಂಪತಿಗಳ ಪುತ್ರಿ.
 
ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ 
ಸಾಧನೆ ನಿನ್ನದಾಗಲೆಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ‌ ಶುಭ ಹಾರೈಕೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿ-ಕ್ರೌನ್ ಪ್ರೀಮಿಯರ್‌ ಲೀಗ್-ಟ್ರೋಫಿ ಮತ್ತು ಜೆರ್ಸಿ ಅನಾವರಣ-ಸಾಧಕರಿಗೆ ಸನ್ಮಾನ

ಕ್ರೌನ್ ಕ್ರಿಕೆಟರ್ಸ್ ಕಂಗಣಬೆಟ್ಟು. ಇದರ ರಜತ ಮಹೋತ್ಸವ ದ ಅಂಗವಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಕ್ರೌನ್ ಪ್ರೀಮಿಯರ್ ಲೀಗ್  2022 ಇದರ ಟ್ರೋಫಿ ಮತ್ತು ಆರು ತಂಡಗಳ ಜೆರ್ಸಿ ಯನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಗೋಪಾಲ ಸಿ. ಬಂಗೇರ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
 ಈ ಸಂದರ್ಭದಲ್ಲಿ ಶ್ರೀ ದಿನೇಶ್ ಶೆಟ್ಟಿಗಾರ್, ಶ್ರೀ ಕರುಣಾಕರ ಸನಿಲ್, ಶ್ರೀ ವಿನೇಶ್ ಕುಂದರ್, ಶ್ರೀ ಅಜಿತ್ ಮಲ್ಪೆ, ಶ್ರೀ ದೀಪಕ್ ಮಲ್ಪೆ, ಶ್ರೀ ಅಜಿತ್, ಶ್ರೀ ಜ್ಞಾನೇಶ್ ಕೋಟ್ಯಾನ್, ಶ್ರೀ ದಿಲೀಪ್ ಕುಮಾರ್, ಶ್ರೀ ರವಿ ಕುಮಾರ್, ಶ್ರೀ ಪ್ರಮೋದ್, ಶ್ರೀ ಮಿಥುನ್, ಶ್ರೀ ಅನಿಲ್, ಶ್ರೀ ವಿಕೇಶ್, ಶ್ರೀ ಮನೋಜ್ ಮೊದಲಾದವರು ಉಪಸ್ಥಿತರಿದ್ದರು.
ಏಪ್ರಿಲ್ 17 ಭಾನುವಾರದಂದು ಉಡುಪಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಹಿಂಭಾಗದ ಮೈದಾನದಲ್ಲಿ ಕ್ರೌನ್ ಪ್ರೀಮಿಯರ್‌ ಲೀಗ್-2022 ಪಂದ್ಯಾಟ ನಡೆಯಲಿದೆ.6 ಫ್ರಾಂಚೈಸಿಗಳ ನಡುವೆ,ಲೀಗ್ ಕಮ್ ನಾಕೌಟ್ ಮಾದರಿಯ ರೋಚಕ ಹಣಾಹಣಿ ನಡೆಯಲಿದ್ದು,ಪ್ರಥಮ ಬಹುಮಾನ 25,555 ಮತ್ತು ದ್ವಿತೀಯ ಬಹುಮಾನ 12,222 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.
Categories
ಭರವಸೆಯ ಬೆಳಕು

ಉಡುಪಿ-“ಸಮಾಜಸೇವೆ ಚಿಂತನೆಯ ವಿಶ್ವಕರ್ಮ-ಹುಮ್ಯಾನಿಟಿ ಪಂದ್ಯಾಟದ ಆಯೋಜನೆ ಶ್ಲಾಘನೀಯ”-ವಾದಿರಾಜ್ ಆಚಾರ್ಯ ಏಳಿಂಜೆ

ವಿಶ್ವಕರ್ಮ ಸಮಾಜದ 5 ಬಡಕುಟುಂಬಗಳಿಗೆ ನೆರವಿನ ಹಸ್ತ ನೀಡುವ ಸದುದ್ದೇಶದಿಂದ,ಸ್ಕಾರ್ಪಿಯನ್ ಏಳಿಂಜೆ ತಂಡ ಆಯೋಜಿಸಿರುವ ವಿಶ್ವಕರ್ಮ ಹುಮ್ಯಾನಿಟಿ ಕಪ್ ಪಂದ್ಯಾಟ ನಿಜಕ್ಕೂ ಶ್ಲಾಘನೀಯ,ಸಮಾಜ ಬಾಂಧವರ ಸಂಪೂರ್ಣ ಸಹಕಾರ ಈ ತಂಡದ ಮೇಲಿರಲಿ ಎಂದು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಅಧಿಕಾರಿಗಳಾದ ಶ್ರೀ.ವಾದಿರಾಜ ಆಚಾರ್ಯ ಏಳಿಂಜೆ ಹೇಳಿದರು.
ಇವರು ಮಂಗಳವಾರ ಉಡುಪಿ ಸಮ್ಮರ್ ಪಾರ್ಕ್ ಹೋಟೆಲ್ ನಲ್ಲಿ ಜರುಗಿದ ವಿಶ್ವಕರ್ಮ ಪ್ರೀಮಿಯರ್‌ ಲೀಗ್ ಪಂದ್ಯಾಟದ ಟ್ರೋಫಿ ಅನಾವರಣ ಮತ್ತು ಆಟಗಾರರ ಆಕ್ಷನ್ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ವೆಂಕಟರಮಣ ಪಿತ್ರೋಡಿ ತಂಡದ ನಾಯಕರಾದ ಪ್ರವೀಣ್ ಪಿತ್ರೋಡಿ, ಉಡುಪಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಕಿಶೋರ್ ಆಚಾರ್,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲೆ ಯುವಘಟಕಾಧ್ಯಕ್ಷರು ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ‌ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್,ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಶಿವರಾಮ ಆಚಾರ್ ಏಳಿಂಜೆ,ರಾಜ್ಯ ಮಟ್ಟದ ಹಿರಿಯ ಆಟಗಾರರಾದ ಭಾಸ್ಕರ್ ಆಚಾರ್ ಉಡುಪಿ,ಶ್ರೀಮತಿ ದಿವ್ಯಾ ಶಿವರಾಮ್ ಆಚಾರ್,ಶ್ರೀಮತಿ ಆಶಾ ಭಾಸ್ಕರ್ ಆಚಾರ್
 ಮತ್ತು 12 ಫ್ರಾಂಚೈಸಿಗಳ ಮಾಲೀಕರು ಮತ್ತು ಐಕಾನ್ ಆಟಗಾರರು ಉಪಸ್ಥಿತರಿದ್ದರು.
ಸುಮನ್ ಆಚಾರ್ ಪ್ರಾರ್ಥನೆಗೈದರೆ,ಕಾರ್ಯಕ್ರಮ ನಿರೂಪಣೆ ಮತ್ತು ಆಕ್ಷನ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ವೀಕ್ಷಕ ವಿವರಣೆಕಾರರಾದ ರಾಘವೇಂದ್ರ ಮಟಪಾಡಿ ನಡೆಸಿಕೊಟ್ಟರು.
ವಿಶ್ವಕರ್ಮ ಪ್ರೀಮಿಯರ್‌ ಲೀಗ್-ಹುಮ್ಯಾನಿಟಿ ಕಪ್ ಏಪ್ರಿಲ್ 23 ಮತ್ತು 24 ರಂದು ಕಿನ್ನಿಗೋಳಿ ಐಕಳ ಶಕ್ತಿ ಕಲ್ಯಾಣಿ ಮೈದಾನದಲ್ಲಿ ನಡೆಯಲಿದ್ದು,M9 ಸ್ಪೋರ್ಟ್ಸ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿ-ವಿಶೇಷ ಚೇತನರಿಗೆ ಸಹಾಯ ಹಸ್ತದ ಸದುದ್ದೇಶ ಸಲುವಾಗಿ ರುದ್ರ ಟ್ರೋಫಿ 2022

ರುದ್ರ ಫ್ರೆಂಡ್ಸ್ ಉಡುಪಿ ಇವರ ವತಿಯಿಂದ ಅಂಗವಿಕಲತೆ ನ್ಯೂನತೆಯಿಂದ ಬಳಲುತ್ತಿರುವ ಬಡಕುಟುಂಬದವರಿಗೆ ವೀಲ್ ಚೇರ್ ಕೊಡುಗೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವ  ಸಂಸ್ಥೆಗಳಿಗೆ ಗೌರವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನದ ಸದುದ್ದೇಶದ ಸಲುವಾಗಿ ಪ್ರಥಮ ಬಾರಿಗೆ 90 ಗಜಗಳ ವಲಯ ಮಟ್ಟದ  ಕ್ರಿಕೆಟ್ ಪಂದ್ಯಾಟ ರುದ್ರ ಟ್ರೋಫಿ
-2022  ಆಯೋಜಿಸಲಾಗಿದೆ.
ಏಪ್ರಿಲ್ ದಿನಾಂಕ 2 ಮತ್ತು 3 ರಂದು ಉಡುಪಿಯ
ದೊಡ್ಡಣ್ಣಗುಡ್ಡೆ ಮೈದಾನದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿ ಜಯಿಸುವ ತಂಡ 40 ಸಹಸ್ರ ನಗದು,ದ್ವಿತೀಯ ಸ್ಥಾನಿ 20 ಸಹಸ್ರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ಗಣೇಶ್ ಗುಜ್ರಾನ್ ಪಡುಬಿದ್ರಿ ಇವರು ಈರ್ವರು ವಿಶೇಷ ಚೇತನರಿಗೆ ವೀಲ್ ಚೇರ್ ನೀಡುವುದರ ಮೂಲಕ ಅವರ ಬಾಳಿಗೆ ಬೆಳಕಾಗಲಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ಮೂಲಕ ಬಿತ್ತರಗೊಳ್ಳಲಿದೆ.ಹೆಚ್ಚಿನ ಮಾಹಿತಿಗಾಗಿ 8431564819 ಮತ್ತು 8740 220048 ಈ ನಂಬರ್ ಗಳನ್ನು‌ ಸಂಪರ್ಕಿಸಬಹುದು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿ-ಸೈಮಂಡ್ಸ್ ಕಡಿಯಾಳಿ ತಂಡದ ಮಡಿಲಿಗೆ ಅಂತರ್-ಗ್ರಾಮೀಣ ಮಟ್ಟದ ವೆಂಕಟರಮಣ ಟ್ರೋಫಿ-2022

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಅಂತರ್ ಗ್ರಾಮೀಣ ತಂಡಗಳ ಕ್ರಿಕೆಟ್ ಪಂದ್ಯಾಕೂಟ “ವೆಂಕಟರಮಣ ಟ್ರೋಫಿ-2022″ಯನ್ನು ಸೈಮಂಡ್ಸ್ ಕಡಿಯಾಳಿ ತಂಡ ಜಯಿಸಿದೆ.
ಉದ್ಯಾವರ ಗ್ರಾಮ ಪಂಚಾಯತ್ ಮೈದಾನ ಹಾಗೂ ಕಟಪಾಡಿ ಪಳ್ಳಿಗುಡ್ಡೆ ಈ ಎರಡು ಮೈದಾನದಲ್ಲಿ ಆಯೋಜಿಸಲಾದ ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದು,ಬಹುತೇಕ ಲೀಗ್ ಹಂತದ
ಪಂದ್ಯಗಳು ರೋಚಕ ಅಂತ್ಯ ಕಂಡಿದ್ದವು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ  ಸೈಮಂಡ್ಸ್ ಕಡಿಯಾಳಿ ತಂಡ ನಿಗದಿತ 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದ್ದರು.ಇದಕ್ಕುತ್ತರವಾಗಿ ಜೈ ವೀರಮಾರುತಿ ತೆಂಕನಿಡಿಯೂರು ತಂಡ 6 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 38 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ  ಪ್ರಶಸ್ತಿಯನ್ನು ಸೈಮಂಡ್ಸ್ ನ ಪ್ರದೀಪ್ ಶೆಟ್ಟಿ, ಬೆಸ್ಟ್ ಬ್ಯಾಟ್ಸ್‌ಮನ್‌
ಫ್ರೆಂಡ್ಸ್ ಬೊಮ್ಮಾರಬೆಟ್ಟಿನ ರವಿ‌.ಡಿ.ಸಿ,ಬೆಸ್ಟ್ ಬೌಲರ್ ಜೈ ವೀರಮಾರುತಿಯ ಧವನ್ ಮತ್ತು ಸರಣಿಶ್ರೇಷ್ಟ ಪ್ರಶಸ್ತಿಯನ್ನು ಜೈ ವೀರಮಾರುತಿ ತಂಡದ ಅಕ್ಷಯ್ ಪಡೆದುಕೊಂಡರು.ವಿಶೇಷವಾಗಿ ನೀಡಲಾದ ಶಿಸ್ತುಬದ್ಧ ತಂಡ ಪ್ರಶಸ್ತಿ ಫ್ರೆಂಡ್ಸ್ ಬೊಮ್ಮಾರಬೊಟ್ಟು ತಂಡಕ್ಕೆ ಒಲಿಯಿತು.
ಪ್ರಥಮ ಪ್ರಶಸ್ತಿ ವಿಜೇತ ಸೈಮಂಡ್ಸ್ ಕಡಿಯಾಳಿ ತಂಡ ಆಕರ್ಷಕ ಬೆಳ್ಳಿಯ ಟ್ರೋಫಿಯೊಂದಿಗೆ 70 ಸಹಸ್ರ ನಗದು,ದ್ವಿತೀಯ ಸ್ಥಾನಿ ಜೈ ವೀರಮಾರುತಿ ತೆಂಕನಿಡಿಯೂರು ತಂಡ 40000  ನಗದಿನೊಂದಿಗೆ ಆಕರ್ಷಕ  ಬೆಳ್ಳಿಯ ಟ್ರೋಫಿಯನ್ನು ಪಡೆದುಕೊಂಡರು.
ವಿಶೇಷ ಆಕರ್ಷಣೆ ಎಂಬಂತೆ ರಾಜ್ಯ ಲೆದರ್ ಬಾಲ್ ಮಹಿಳಾ ತಂಡಗಳ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ
ವೈಟ್ ಪ್ಯಾಂಥರ್ಸ್ ತಂಡ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ  ಜಯಗಳಿಸಿತು.
*ಉದ್ಘಾಟನಾ ಸಮಾರಂಭ*
ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಗೌತಮ್ ಶೆಟ್ಟಿ “ವೆಂಕಟರಮಣ ತಂಡ ಕ್ರೀಡೆಯೊಂದಿಗೆ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯಕ್ಕೆ ಮಾದರಿ ತಂಡವಾಗಿದೆ” ಎಂದರು ಹಾಗೂ ಆಟಗಾರರಿಗೆ ಕಿವಿಮಾತು ಹೇಳಿದರು.ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್, ಎಂ.ಕೆ.ಬಾಲರಾಜ್, ಲೋಹಿತ್ ಕುಮಾರ್ ಪಿತ್ರೋಡಿ,ರಾಧಾಕೃಷ್ಣ ಶ್ರೀಯಾನ್,ವಿಜಯ್ ಕುಮಾರ್,ಜಿತೇಂದ್ರ ಶೆಟ್ಟಿ ಉದ್ಯಾವರ,ರಾಮಕೃಷ್ಣ ಆಚಾರ್ಯ ಕೋಟ,ಗಂಗಾಧರ.ಜಿ.ಕರ್ಕೇರ,ಗೋಪಾಲ ಅಮೀನ್,ಚಂದ್ರ ಬಂಗೇರ,ಶ್ರೀಮತಿ ಭಾರತಿ ಚಂದ್ರ ಬಂಗೇರ,ವಿಜಯ್ ಕೋಟ್ಯಾನ್,ಶಶಿಕಾಂತ್,ಕು.ತನುಶ್ರೀ ಪಿತ್ರೋಡಿ ಮತ್ತು ಲಿಖಿತ್ ಪಿತ್ರೋಡಿ ಉಪಸ್ಥಿತರಿದ್ದರು.
*ಸಮಾರೋಪ ಸಮಾರಂಭ*
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ.
ಆರ್.ಮೆಂಡನ್ ನೇತ್ರದಾನ ಅಭಿಯಾನ-2 ವನ್ನು ಉದ್ಘಾಟಿಸಿ,”ನಮ್ಮ‌ ಜೀವನದ ನಂತರ ನಾವೇನು ಮಾಡಬೇಕೆಂಬುದನ್ನು ನೇತ್ರದಾನ ಅಭಿಯಾನದ ಮೂಲಕ ಸಮಾಜಕ್ಕೆ ವೆಂಕಟರಮಣ ಸಂಸ್ಥೆ ಕರೆ ಕೊಟ್ಟಿದೆ” ಎಂದರು.ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ನೇತ್ರದಾನ ಅಭಿಯಾನಕ್ಕೆ ತಮ್ಮ ಹೆಸರನ್ನು ನೋಂದಣಿ ಮಾಡಿದರು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಡುಪಿ-ದ.ಕ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣ,ಶ್ರೀಮತಿ ನಯನಾ ಗಣೇಶ್,ಎಂ.ಕೆ.ಬಾಲರಾಜ್ ಪಿತ್ರೋಡಿ,
ಲೋಹಿತ್ ಕುಮಾರ್ ಪಿತ್ರೋಡಿ, ದೇವರಾಜ್ ಕರ್ಕೇರ,ದಿವಾಕರ ಕುಂದರ್ ಕಡೆಕಾರು,ಜಿತೇಂದ್ರ ಶೆಟ್ಟಿ ಉದ್ಯಾವರ,ಗಂಗಾಧರ.ಜಿ.ಕರ್ಕೇರ,ಕೆ.ಆರ್‌.ಎಸ್
ಅಕಾಡೆಮಿಯ ಉದಯ್ ಕುಮಾರ್ ಕಟಪಾಡಿ,ಪ್ರವೀಣ್ ಕುಮಾರ್ ಬೈಲೂರು,ಗೋಪಾಲ ಅಮೀನ್,ಚಂದ್ರ ಬಂಗೇರ,ಮಲ್ಲೇಶ್ ಬಂಗೇರ,ವಿಜಯ್ ಕೋಟ್ಯಾನ್,
ಶ್ರೀಮತಿ ಭಾರತಿ ಚಂದ್ರ ಬಂಗೇರ ಪಿತ್ರೋಡಿ,ತನುಶ್ರೀ ಪಿತ್ರೋಡಿ,ಲಿಖಿತ್ ಪಿತ್ರೋಡಿ, ಪ್ರವೀಣ್ ಪಿತ್ರೋಡಿ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಶ್ರೀಮತಿ ಲಕ್ಷ್ಮೀ ಮಂಜು ಕೊಳ,
ನಿಖಿತಾ.ಯು.ಕರ್ಕೇರ,ಪ್ರಶಾಂತ್‌ ಕೋಟ‌ ಪಡುಕರೆ,
ಖ್ಯಾತ ಪತ್ತೇದಾರಿ ಕಾದಂಬರಿ ಬರಹಗಾರ್ತಿ ಸೌಮ್ಯ ಪುತ್ರನ್,ಸತ್ಯದ ತುಳುವೆರ್ ಸಂಘಟನೆಯ ಅಧ್ಯಕ್ಷರಾದ ಚೇತನ್,ನಾಗಾರ್ಜುನ.ಡಿ.ಪೂಜಾರಿ ಇವರನ್ನು ಸನ್ಮಾನಿಸಲಾಯಿತು…
ವೀಕ್ಷಕ ವಿವರಣೆಯಲ್ಲಿ ಹಿರಿಯ ವೀಕ್ಷಕ ವಿವರಣೆಕಾರರಾದ ವಿನಯ್ ಉದ್ಯಾವರ,ಅರವಿಂದ ಮಣಿಪಾಲ್,ರಾಜಶೇಖರ್ ಶ್ಯಾಮರಾವ್, ಪ್ರತುಲ್ ಹಿರಿಯಡಕ ಸಹಕರಿಸಿದರೆ,ದಿನೇಶ್ ಆಚಾರ್ ಬೈಕಂಪಾಡಿ,ರಾಘು ಬ್ರಹ್ಮಾವರ ತಂಡ ತೀರ್ಪುಗಾರರಾಗಿ ಭಾಗವಹಿಸಿದರು.
ಸೌಜನ್ ಪಡುಬಿದ್ರಿ ನೇತ್ರತ್ವದಲ್ಲಿ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಂಡಿತು.
               ಚಿತ್ರ ಕೃಪೆ-ರತನ್.ಸುರಭಿ
Categories
ಕ್ರಿಕೆಟ್

ಉಡುಪಿ-ಸೌಹಾರ್ದ ಟ್ರೋಫಿ-2021 ಕ್ರಿಕೆಟ್ ಪಂದ್ಯಾಕೂಟ ಫೆಬ್ರವರಿ 27 ಮತ್ತು 28 ರಂದು

ಅಲೆವೂರು ಮೈತ್ರಿ ಇವರ ಆಶ್ರಯದಲ್ಲಿ, ಅಲೆವೂರಿನ ಪ್ರಸಿದ್ಧ ಕ್ರೀಡಾ ಪ್ರೋತ್ಸಾಹಕರಾದ ಎಸ್.ಎಫ್.ಸಿ ಆಸಿಫ್ ಮೈತ್ರಿ ಹಾಗೂ ರಾಜಾ ಅಲೆವೂರು ಇವರ ಸಾರಥ್ಯದಲ್ಲಿ ಸೌಹಾರ್ದತೆಯ ಪ್ರತೀಕವಾಗಿ ಫೆಬ್ರವರಿ 27 ಮತ್ತು 28 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ಸೌಹಾರ್ದ ಟ್ರೋಫಿ-2021 ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಪಂದ್ಯಾಕೂಟದ ವಿಶೇಷವಾಗಿ 12 ಜಾತಿಗಳ ತಂಡಗಳ ನಡುವೆ ನಡೆಯಲಿದ್ದು,ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 66,666 ನಗದು,ದ್ವಿತೀಯ ಸ್ಥಾನಿ 33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡುವ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ.
ಆಸಕ್ತ ತಂಡಗಳು ಆಸಿಫ್ ಮೈತ್ರಿ-8197603292,ರಾಜಾ ಅಲೆವೂರು-9448169458
ಇವರನ್ನು ಸಂಪರ್ಕಿಸಬಹುದು.
Categories
ಕ್ರಿಕೆಟ್

ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲೊಂದು ವಿಶಿಷ್ಟ,ವಿನೂತನ ಪ್ರಯೋಗ-ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021

ಸ್ಥಳೀಯ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಲಭಿಸದೆ ಕ್ಷೀಣಾವಸ್ಥೆಯಲ್ಲಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ
ಉಡುಪಿಯ ಸೈಮಂಡ್ಸ್ ಕಡಿಯಾಳಿ ತಂಡ ವಿಶಿಷ್ಟ ವಿನೂತನ ಪ್ರಯೋಗ
“ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021″ಪಂದ್ಯಾಕೂಟ ಆಯೋಜಿಸಿದ್ದಾರೆ.
ಜನವರಿ 22,23 ಮತ್ತು 24 ರಂದು ಉಡುಪಿಯ ಎ.ಎಲ್.ಎನ್.ರಾವ್ (ಎಮ್.ಜಿ.ಎಮ್) ಕ್ರೀಡಾಂಗಣದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಈ ಪಂದ್ಯಾಟ ನಡೆಯಲಿದೆ.
ಬೀಡಿನಗುಡ್ಡೆ,ದೊಡ್ಡಣಗುಡ್ಡೆ,ಕುಂದಾಪುರ,ಕೋಟ,ಮಲ್ಪೆ,ಉದ್ಯಾವರ,ಮುಕ್ಕ,ಅಲೆವೂರು,ಕೊರಂಗ್ರಪಾಡಿ,ಕಾಪುವಿನಲ್ಲಿ ನಡೆದ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ವಿಜೇತ  ತಂಡಗಳು ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021 ಪ್ರಶಸ್ತಿಗಾಗಿ ಸೆಣಸಾಡಲಿದೆ.
ಎಲ್ಲಾ ತಂಡಗಳಿಗೂ ಉಚಿತ ಪ್ರವೇಶಾತಿ ಕಲ್ಪಿಸಲಾಗಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡಕ್ಕೆ 30 ಸಾವಿರ ನಗದು,ದ್ವಿತೀಯ ಸ್ಥಾನಿ 20 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳು ಹಾಗೂ ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಅಪರೂಪದ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಪಂದ್ಯಾಕೂಟದ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.ಹೆಚ್ಚಿನ ಮಾಹಿತಿಗಾಗಿ ಡಾ‌.ವಿನೋದ್-9845240393,
ಚೇತನ್ ಕುಮಾರ್ ದೇವಾಡಿಗ-9901850385 ಇವರನ್ನು ಸಂಪರ್ಕಿಸಬಹುದಾಗಿದೆ‌.