ಉಡುಪಿಯ ಆದಿತ್ಯ ಜೆ. ಬಿ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಉಡುಪಿ : ರಾಜ್ಯ ಕರಾಟೆ ಸಂಸ್ಥೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಶಿವಮೊಗ್ಗ ಆಶ್ರಯದಲ್ಲಿ ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ 3ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಪಂದ್ಯಾಟದಲ್ಲಿ ಭಾಗವಹಿಸಿದ ಉಡುಪಿಯ ಆದಿತ್ಯ ಜೆ. ಬಿ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಇವರು ಎಂ.ಜಿ.ಎಂ ಕಾಲೇಜು,ಉಡುಪಿ ಇಲ್ಲಿ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದು ಜಯಕರ ಬೈಲೂರು ಹಾಗೂ ಭಾರತಿ ಜಯಕರ ದಂಪತಿಯ ಪುತ್ರ. ಕರಾಟೆಯಲ್ಲಿ ಇವರು “ಬ್ಲ್ಯಾಕ್ ಬೆಲ್ಟ್” ಪದವಿಯನ್ನು ಹೊಂದಿದ್ದು ಮಾರ್ಪಳ್ಳಿಯ ದಯಾನಂದ ಆಚಾರ್ಯ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.