ಕ್ರಿಕೆಟ್ಫ್ರೆಂಡ್ಸ್ ಮುದರಂಗಡಿ ಅರ್ಪಿಸುವ MBL ಟ್ರೋಫಿ-2024 ಕ್ರಿಕೆಟ್ ಋತುವಿನ ಬೃಹತ್ ಕ್ರಿಕೆಟ್...

ಫ್ರೆಂಡ್ಸ್ ಮುದರಂಗಡಿ ಅರ್ಪಿಸುವ MBL ಟ್ರೋಫಿ-2024 ಕ್ರಿಕೆಟ್ ಋತುವಿನ ಬೃಹತ್ ಕ್ರಿಕೆಟ್ ಲೀಗ್ ಪಂದ್ಯಾಟ.

-

- Advertisment -spot_img

ಫ್ರೆಂಡ್ಸ್ ಮುದರಂಗಡಿ ಅರ್ಪಿಸುವ MBL ಟ್ರೋಫಿ-2024 ಕ್ರಿಕೆಟ್ ಋತುವಿನ ಬೃಹತ್ ಕ್ರಿಕೆಟ್ ಲೀಗ್ ಪಂದ್ಯಾಟ.

ಸ್ಪೋರ್ಟ್ಸ್ ಕನ್ನಡ ವರದಿ
ಫ್ರೆಂಡ್ಸ್ ಮುದರಂಗಡಿ ಇವರ ವತಿಯಿಂದ ಅಶ್ವತ್,ಪ್ರಭಾಕರ್,ನಿತಿನ್,ಜಯಂತ್ ಮತ್ತು ಸುಮಂತ್ ಇವರೆಲ್ಲರ ಒಗ್ಗೂಡುವಿಕೆಯಲ್ಲಿ ನವೆಂಬರ್ 23,24 ರಂದು ಈ ವರ್ಷದ ಅತೀ ದೊಡ್ಡ ಲೀಗ್ ಕ್ರಿಕೆಟ್ ಪಂದ್ಯಾಟ MBL ಮುದರಂಗಡಿ ಬಿಗ್ ಬ್ಯಾಷ್ ಲೀಗ್ ಆಯೋಜಿಸಲಾಗಿದೆ.

ಗ್ರಾಮೀಣ ಮಟ್ಟದ ಕ್ರಿಕೆಟ್ ಪಟುಗಳ ಪ್ರತಿಭೆ ಅನಾವರಣದ ಸದುದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಮುದರಂಗಡಿ,ಎಲ್ಲೂರು,ಕುತ್ಯಾರು ಪಂಚಾಯತ್ ವಲಯದ ಒಟ್ಟು 8 ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ವಿಶೇಷವಾಗಿ ಸ್ಥಳೀಯ ಆಟಗಾರರನ್ನೇ ಐಕಾನ್ ಆಟಗಾರ ರೂಪದಲ್ಲಿ ಆಡಿಸಲಾಗುತ್ತಿದೆ.

ಮುದರಂಗಡಿ ಪಬ್ಲಿಕ್ ಮೈದಾನದಲ್ಲಿ ಎರಡು ದಿನಗಳ ಕಾಲ ಹಗಲಿನಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನ 50 ಸಾವಿರ ರೂ ನಗದು,ದ್ವಿತೀಯ 30000 ರೂ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.

ಭಾಗವಹಿಸುವ ತಂಡಗಳ ವಿವರ
1-ರಾಕೇಶ್ ಪೂಜಾರಿ ಇವರ ಬೇಕ್ ಲೈನ್ ಕ್ರಿಕೆಟರ್ಸ್
2-ಡೇವಿಡ್ ಡಿಸೋಜಾ ಇವರ ಪ್ರಿನ್ಸ್ ಕ್ರಿಕೆಟರ್ಸ್
3-ಚೇತನ್ ಪೂಜಾರಿ ಇವರ x ಸ್ಟಾರ್ ಮುದರಂಗಡಿ
4-ಸಂತೋಷ್ ಮತ್ತು ಲ್ಯಾನ್ಸಿ ಇವರ M1 ಸೂಪರ್ ಕಿಂಗ್ಸ್
5-ಪ್ರದೀಪ್ ಮತ್ತು ಚೇತನ್ ಇವರ ಸಂತೂರ್ ಫ್ರೆಂಡ್ಸ್ ಕ್ರಿಕೆಟರ್ಸ್
6-ಶಮಿತ್ ಶೆಟ್ಟಿ ಮತ್ತು ಪವನ್ ಶೆಟ್ಟಿ ಇವರ ಶೆಟ್ಟಿ ಬ್ರದರ್ಸ್‌ ಕೇಂಜ
7-ಶರೀಫ್ ಇವರ ಬ್ಲೂಸ್ಟಾರ್ ಎಲ್ಲೂರು
8-ಮಾರಿಯೋ ಇವರ ಬಾರ್ಬೋಜಾ ವಾರಿಯರ್ಸ್

ಪಂದ್ಯಾಟದ ನೇರ ಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here

twenty − twenty =

Latest news

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...
- Advertisement -spot_imgspot_img

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

Must read

- Advertisement -spot_imgspot_img

You might also likeRELATED
Recommended to you