ಕ್ರೌನ್ ಕ್ರಿಕೆಟರ್ಸ್ ಕಂಗಣಬೆಟ್ಟು. ಇದರ ರಜತ ಮಹೋತ್ಸವ ದ ಅಂಗವಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಕ್ರೌನ್ ಪ್ರೀಮಿಯರ್ ಲೀಗ್ 2022 ಇದರ ಟ್ರೋಫಿ ಮತ್ತು ಆರು ತಂಡಗಳ ಜೆರ್ಸಿ ಯನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಗೋಪಾಲ ಸಿ. ಬಂಗೇರ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ದಿನೇಶ್ ಶೆಟ್ಟಿಗಾರ್, ಶ್ರೀ ಕರುಣಾಕರ ಸನಿಲ್, ಶ್ರೀ ವಿನೇಶ್ ಕುಂದರ್, ಶ್ರೀ ಅಜಿತ್ ಮಲ್ಪೆ, ಶ್ರೀ ದೀಪಕ್ ಮಲ್ಪೆ, ಶ್ರೀ ಅಜಿತ್, ಶ್ರೀ ಜ್ಞಾನೇಶ್ ಕೋಟ್ಯಾನ್, ಶ್ರೀ ದಿಲೀಪ್ ಕುಮಾರ್, ಶ್ರೀ ರವಿ ಕುಮಾರ್, ಶ್ರೀ ಪ್ರಮೋದ್, ಶ್ರೀ ಮಿಥುನ್, ಶ್ರೀ ಅನಿಲ್, ಶ್ರೀ ವಿಕೇಶ್, ಶ್ರೀ ಮನೋಜ್ ಮೊದಲಾದವರು ಉಪಸ್ಥಿತರಿದ್ದರು.
ಏಪ್ರಿಲ್ 17 ಭಾನುವಾರದಂದು ಉಡುಪಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಹಿಂಭಾಗದ ಮೈದಾನದಲ್ಲಿ ಕ್ರೌನ್ ಪ್ರೀಮಿಯರ್ ಲೀಗ್-2022 ಪಂದ್ಯಾಟ ನಡೆಯಲಿದೆ.6 ಫ್ರಾಂಚೈಸಿಗಳ ನಡುವೆ,ಲೀಗ್ ಕಮ್ ನಾಕೌಟ್ ಮಾದರಿಯ ರೋಚಕ ಹಣಾಹಣಿ ನಡೆಯಲಿದ್ದು,ಪ್ರಥಮ ಬಹುಮಾನ 25,555 ಮತ್ತು ದ್ವಿತೀಯ ಬಹುಮಾನ 12,222 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.