ಸುಜಿತ್ ಭರ್ಜರಿ ಬ್ಯಾಟಿಂಗ್- ಎಮ್.ಬಿ.ಸಿ.ಸಿ ಜಯನಗರ ಮಡಿಲಿಗೆ ಸ್ವಾಮಿ ವಿವೇಕಾನಂದ ಕಪ್-2021

ಭಾರತೀಯ ಜನತಾ ಪಕ್ಷ,ಬೆಂಗಳೂರು ದಕ್ಷಿಣ ಇವರು ಪ್ರಸ್ತುತ ಪಡಿಸಿದ,ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಹಾಗೂ ಯುವಕರ ದಿನಾಚರಣೆಯ ಅಂಗವಾಗಿ ಬಸವನಗುಡಿ ವಿದ್ಯಾಪೀಠ ಸಮೀಪದ ಚೆನ್ನಮ್ಮನ ಕೆರೆ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ 3 ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಸ್ವಾಮಿ ವಿವೇಕಾನಂದ ಕಪ್-2021 ನ್ನು ಎಮ್.ಬಿ.ಸಿ.ಸಿ ಜಯನಗರ ತಂಡ ಜಯಿಸಿದೆ.

ಲೀಗ್ ಹಂತದ ರೋಚಕ ಪಂದ್ಯಗಳ ಬಳಿಕ ಸೆಮಿಫೈನಲ್ಸ್ ನಲ್ಲಿ ನ್ಯಾಶ್ ಬೆಂಗಳೂರು
ಆಟಗಾರರನ್ನೊಳಗೊಂಡ  ನಿತ್ಯ ನಿರಂತರ ಸೇವಾ ಟ್ರಸ್ಟ್ ಗೆ ಆಡಿದ ನ್ಯಾಶ್ ತಂಡ ನವೀನ್ ಫೈಟರ್ಸ್ ತಂಡವನ್ನು,ಎಮ್.ಬಿ‌.ಸಿ.ಸಿ ತಂಡ ಎಮ್‌.ಪಿ.ಥಂಡರ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಿತ್ಯ ನಿರಂತರ ಸೇವಾ ಟ್ರಸ್ಟ್ ಗೆ ಆಡಿದ ನ್ಯಾಶ್ ತಂಡ 6 ಓವರ್ ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 33 ಕಲೆಹಾಕಿತ್ತು.ಸುಲಭ ಸಾಧ್ಯತೆಯ ಗುರಿಯನ್ನು ಬೆನ್ನತ್ತಿದ ಎಮ್.ಬಿ.ಸಿ.ಸಿ ಅಗ್ರಕ್ರಮಾಂಕದ ಆಟಗಾರರ ಸಾಹಸದಿಂದ  ಕೇವಲ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಜಯಭೇರಿ ಬಾರಿಸಿತ್ತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಎಮ್.ಬಿ.ಸಿ.ಸಿ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ ನಿತ್ಯ ನಿರಂತರ ಸೇವಾ ಟ್ರಸ್ಟ್ ಗೆ ಆಡಿದ ನ್ಯಾಶ್ ತಂಡ,1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಪಂದ್ಯಾಕೂಟದ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ನಿತ್ಯ ನಿರಂತರ ಸೇವಾ ಟ್ರಸ್ಟ್ ಗೆ ಆಡಿದ ನ್ಯಾಶ್ ತಂಡದ ನವೀನ್ ಚೂ,ಬೆಸ್ಟ್ ಬೌಲರ್ ಅದೇ ತಂಡದ ಕೃಷ್ಣ ಹಾಗೂ ಲೀಗ್ ಹಂತದಲ್ಲಿ ಭರ್ಜರಿ 7 ಸಿಕ್ಸರ್,4 ಬೌಂಡರಿ ಸಹಿತ (20 ಎಸೆತಗಳಲ್ಲಿ 63 ರನ್) ಆಕರ್ಷಕ ಅರ್ಧಶತಕ ಬಾರಿಸಿ,ಟೂರ್ನಮೆಂಟ್ ನ‌ ಅತ್ಯಧಿಕ ರನ್ ಗಳಿಕೆಯ ಆಟಗಾರನಾಗಿ ಹೊರಹೊಮ್ಮಿದ ಎಮ್.ಬಿ.ಸಿ.ಸಿ ತಂಡದ ಸುಜಿತ್ ಆಚಾರ್ಯ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು…

ಕೋಟ ರಾಮಕೃಷ್ಣ ಆಚಾರ್ಯ

Written by ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published. Required fields are marked *

two × 4 =

TRITONS ಟ್ರೋಫಿ-2021 ಜನವರಿ 30 ಮತ್ತು 31 ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ.

ಉಡುಪಿ-ಸಾಗರ್ ಚಾಂಪಿಯನ್ಸ್ ಟ್ರೋಫಿ-2021 ಮಾರ್ಚ್ 13 ಮತ್ತು 14 ರಂದು.