ಕೋಸ್ಟಲ್ ಫ್ರೆಂಡ್ಸ್ ದುಬೈ ಇವರ ವತಿಯಿಂದ ಆಟೋ ಡೀಲ್ ಆಟೋಮೇಟಿವ್ ಸರ್ವಿಸ್,ಅಲ್ ಸಿತಾರಾ ಗಲ್ಫ್ ಕಾಂಟ್ರ್ಯಾಕ್ಟಿಂಗ್ & ಮೈಂಟೇನೆನ್ಸ್ ಕಂಪೆನಿ, U.N.I.F ಗಲ್ಫ್ ಹಾಗೂ ಪ್ರೈಮ್ ಟಾಸ್ಕ್ ಟೆಕ್ನಿಕಲ್ ಸರ್ವಿಸ್, ಗ್ಲೋಬಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್ L.L.C ಇವರ ಸಹಭಾಗಿತ್ವದಲ್ಲಿ, ಸಮಾನ ಮನಸ್ಕ ಸ್ನೇಹಿತ ಮೊಹಮ್ಮದ್ ಹಮ್ದಾನ್, ತನ್ವೀರ್ ಖಾಜಿ, ಖಲೀಲ್, ರೋವೆಲ್ ಪ್ರೀತ್, ಸುನಿಲ್, ಕಿಶೋರ್ ಶೆಟ್ಟಿ, ಪರ್ವೇಜ್, ನವೀನ್ ಹಾಗೂ ಸಮೀರ್ ಹೀಗೆ ಯುವ ಕ್ರಿಕೆಟಿಗರ ಕೂಡುವಿಕೆಯಲ್ಲಿ ಅಲ್ ಹಮ್ರಿಯಾ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಜ್ಮನ್ ದುಬೈನ ಅಂಗಣದಲ್ಲಿ ಹಗಲು ರಾತ್ರಿಯ ಕೊಲ್ಲಿ ರಾಷ್ಟ್ರದ ಅತ್ಯಂತ ವೈಭವೋಪೇತ ಪಂದ್ಯಾವಳಿ ಎಂದೇ ಖ್ಯಾತಿ ಪಡೆದ “ಕರ್ನಾಟಕ ಪ್ರೀಮಿಯರ್ ಲೀಗ್” ಕೆ.ಪಿ.ಎಲ್- ಸೀಸನ್ 2″ನಡೆಯಲಿದೆ.
ವಿಜೇತ ತಂಡಗಳು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರು ಅತ್ಯಾಕರ್ಷಕ ಟ್ರೋಫಿ ಹಾಗೂ ಪ್ರಶಸ್ತಿ ರೂಪದಲ್ಲಿ 4 ಲಕ್ಷಕ್ಕೂ ಹೆಚ್ಚಿನ ನಗದು ಬಹುಮಾನ ರೂಪದಲ್ಲಿ ಜೇಬಿಗಿಳಿಸಲಿದ್ದಾರೆ.
ಜನವರಿ 3 ರಂದು ದುಬೈನ ಲ್ಯಾವೆಂಡರ್ ಹೋಟೆಲ್ ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಉಡುಪಿ,ಮಂಗಳೂರು ಜಿಲ್ಲೆಯ ಪ್ರಸಿದ್ಧ ಆಟಗಾರರನ್ನೊಳಗೊಂಡ ಒಟ್ಟು 8 ಫ್ರಾಂಚೈಸಿಗಳು ಪಂದ್ಯಾವಳಿಯಲ್ಲಿ ಪ್ರತಿಷ್ಟಿತ ಕೆ.ಪಿ.ಎಲ್ ಕಿರೀಟಕ್ಕಾಗಿ ಕಾದಾಡಲಿದ್ದು ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.
1)ಕರಾವಳಿ ಉಡುಪಿ
2)ಡಿ.ಜೆ.ಚಾಲೆಂಜರ್ಸ್ ಪಡೀಲ್
3)ವರಾಹರೂಪ ಮಂಗಳೂರು
4)ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್
5)ಚಕ್ರವರ್ತಿ ಕ್ರಿಕೆಟರ್ಸ್ ಕುಂದಾಪುರ
6)ಆಟೋ ಡೀಲ್ ಮೂಡಬಿದಿರೆ
7)ಅಲ್ ಸಿತಾರಾ ಕಾರ್ಕಳ
8)ಗಂಗೊಳ್ಳಿ ಸ್ಟ್ರೈಕರ್ಸ್
ಕಳೆದ ವರ್ಷ ನಡೆದಿದ್ದ ಪ್ರಥಮ ಆವೃತ್ತಿಯ ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್ ಪ್ರಥಮ ಹಾಗೂ ಚಕ್ರವರ್ತಿ ಕ್ರಿಕೆಟರ್ಸ್ ದ್ವಿತೀಯ ಸ್ಥಾನವನ್ನು ಅಲಂಕರಿಸಿತ್ತು. ಈ ಬಾರಿ ಯಾವ ತಂಡ ಕೆ.ಪಿ.ಎಲ್ ಸೀಸನ್ 2 ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆಯೆಂದು ಕಾದು ನೋಡಬೇಕಾಗಿದೆ.
ಪ್ರದರ್ಶನ ಪಂದ್ಯದಲ್ಲಿ ಪ್ರಪ್ರಥಮ ಬಾರಿ ಎಸ್.ಆರ್.ಎಸ್ ರೈಸಿಂಗ್ ಕ್ವೀನ್ಸ್ ಹಾಗೂ ಅರಸ ವಾರಿಯರ್ಸ್ ಫ್ರಾಂಚೈಸಿ ರೂಪದ 2 ಮಹಿಳಾ ತಂಡಗಳು ಸ್ಪರ್ಧಾ ಕಣಕ್ಕಿಳಿಯಲಿದ್ದು ಪಂದ್ಯಾವಳಿಯ ರಂಗನ್ನು ಹೆಚ್ಚಿಸಲಿದೆ.
ವೀಕ್ಷಕ ವಿವರಣೆ ವಿಭಾಗದಲ್ಲಿ ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಸತೀಶ್ ಮಣಿಪಾಲ್ ಭಾಗವಹಿಸಲಿದ್ದು, ಪಂದ್ಯಾವಳಿಯ ನೇರ ಪ್ರಸಾರವನ್ನು ನಮ್ಮ ಕುಡ್ಲ ಹಾಗೂ ಯೂಟ್ಯೂಬ್ ಚಾನೆಲ್ ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಲಿದೆ.
ಆರ್.ಕೆ.ಆಚಾರ್ಯ ಕೋಟ