ಹೆಬ್ಬಾಳ ಕ್ರಿಕೆಟರ್ಸ್ ವತಿಯಿಂದ ಕಳೆದ ವರ್ಷದಂತೆ ಈ ಬಾರಿ ಕೂಡ ಸಂಕ್ರಾಂತಿ ಜನವರಿ 15 ನಾಳೆ ಹೆಬ್ಬಾಳದ ವೆಟರಿನರಿ ಮೈದಾನದಲ್ಲಿ ಒಂದು ದಿನದ ಹಗಲಿದ ಪಂದ್ಯಾಟ ನಡೆಯಲಿದೆ.
ಈಗಾಗಲೇ 16 ಬಲಿಷ್ಠ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ವೆಟರಿನರಿ ಮೈದಾನ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದೆ.
ಪಂದ್ಯಾವಳಿಯ ವಿಜೇತ ತಂಡ 1 ಲಕ್ಷ ನಗದು,ರನ್ನರ್ಸ್ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಇನ್ನಿತರ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.
ಆರ್.ಕೆ.ಆಚಾರ್ಯ ಕೋಟ