ಕ್ರಿಕೆಟ್ಕರ್ನಾಟಕಕ್ಕೆ ಕ್ರಿಕೆಟ್’ಗೆ ಮರಳಿದ ಶ್ರೇಯಸ್ ಗೋಪಾಲ್

ಕರ್ನಾಟಕಕ್ಕೆ ಕ್ರಿಕೆಟ್’ಗೆ ಮರಳಿದ ಶ್ರೇಯಸ್ ಗೋಪಾಲ್

-

- Advertisment -spot_img

‘ಆ ಕ್ರಿಕೆಟಿಗ ಆ ರಾಜ್ಯಕ್ಕೆ ಹೋದ.. ಈ ಕ್ರಿಕೆಟಿಗ ರಾಜ್ಯವನ್ನು ತೊರೆದು ಹೋದ.. ಇವನು ಹೋದ, ಅವನು ಹೋದ’ ಎಂಬ ಸುದ್ದಿಗಳನ್ನು ಕೇಳಿ ಕೇಳಿ ಬೇಸರಗೊಂಡಿದ್ದ ಕರ್ನಾಟಕ ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿಗಳಿಗೆ ಇದು ಶುಭ ಸುದ್ದಿ.

ಕರ್ನಾಟಕ ರಣಜಿ ತಂಡದ ಆಪತ್ಬಾಂಧನ ಮರಳಿ ರಾಜ್ಯಕ್ಕೆ ಬಂದಿದ್ದಾನೆ. ಕರ್ನಾಟಕ ಪರ 11 ವರ್ಷ ಆಡಿ, ಕಳೆದ ಬಾರಿ ಕೇರಳ ತಂಡ ಸೇರಿಕೊಂಡಿದ್ದ ಶ್ರೇಯಸ್ ಗೋಪಾಲ್ ಈ ವರ್ಷದಿಂದ ಮತ್ತೆ ಕರ್ನಾಟಕ ಪರ ಆಡಲು ಸಜ್ಜಾಗಿದ್ದಾರೆ.

ಕಳೆದ 10 ವರ್ಷಗಳಲ್ಲಿ ಕರ್ನಾಟಕ ತಂಡವನ್ನು ತೊರೆದಿರುವ ಪ್ರಮುಖ ಆಟಗಾರರ ಸಂಖ್ಯೆ 10. ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಅಮಿತ್ ವರ್ಮಾ, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ವಿ ಸಿದ್ಧಾರ್ಥ್, ರೋಹನ್ ಕದಂ, ಆರ್.ಸಮರ್ಥ್.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ವರ್ಷ ಕೃಷ್ಣಪ್ಪ ಗೌತಮ್ ಕೂಡ ಕರ್ನಾಟಕ ತಂಡವನ್ನು ತೊರೆಯುವ ಯೋಚನೆಯಲ್ಲಿದ್ದಾರೆ.

ಕಳೆದ ವರ್ಷ ಕರ್ನಾಟಕ ತಂಡವನ್ನು ತೊರೆದು ಕೇರಳ ತಂಡ ಸೇರಿಕೊಂಡಿದ್ದ ಶ್ರೇಯಸ್ ಗೋಪಾಲ್ ಕರ್ನಾಟಕದ ರಣಜಿ ಹೀರೋಗಳಲ್ಲಿ ಒಬ್ಬರು. ರಾಜ್ಯ ತಂಡ 2013ರಿಂದ 2015ರವರೆಗೆ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದು “ಅವಳಿ ತ್ರಿವಳಿ” ಸಾಧನೆ ಮಾಡಿದಾಗ, ಆ ಐತಿಹಾಸಿಕ ತಂಡದ ಭಾಗವಾಗಿದ್ದವರು ಶ್ರೇಯಸ್ ಗೋಪಾಲ್.

ಪರಿಣಾಮಕಾರಿ ಲೆಗ್’ಸ್ಪಿನ್ನರ್, ಕೆಳ ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್ಸ್’ಮನ್. ಕೇರಳಕ್ಕೆ ವಲಸೆ ಹೋಗುವ ಮುನ್ನ ಕರ್ನಾಟಕ ರಣಜಿ ತಂಡದ ಆಪದ್ಬಾಂಧವನಾಗಿದ್ದವರು ಶ್ರೇಯಸ್ ಗೋಪಾಲ್. ಅದರಲ್ಲೂ ಆರ್.ವಿನಯ್ ಕುಮಾರ್ ಕರ್ನಾಟಕ ತಂಡವನ್ನು ತೊರೆದ ನಂತರ, ಕೆಳ ಕ್ರಮಾಂಕದಲ್ಲಿ ವಿನಯ್ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಆಟಗಾರ ಯಾರಾದರೂ ಇದ್ದರೆ ಅದು ಶ್ರೇಯಸ್ ಗೋಪಾಲ್.

ಆದರೆ ಕ್ರಿಕೆಟ್’ನ ಮೂರೂ ಫಾರ್ಮ್ಯಾಟ್’ಗಳಲ್ಲಿ ಆಡಲು ಬಯಸಿದ್ದ ಶ್ರೇಯಸ್ ಗೋಪಾಲ್’ಗೆ ಆ ಅವಕಾಶವನ್ನು ತಪ್ಪಿಸಲಾಯಿತು. ಪ್ರವೀಣ್ ದುಬೆ ಎಂಬ ಆಟಗಾರನಿಗಾಗಿ ಶ್ರೇಯಸ್ ಗೋಪಾಲ್ ಅವರನ್ನು ಪದೇ ಪದೇ ಕಡೆಗಣಿಸಲಾಯಿತು. ಅವರನ್ನು ರೆಡ್ ಬಾಲ್ ಕ್ರಿಕೆಟ್’ಗೆ ಮಾತ್ರ ಬ್ರ್ಯಾಂಡ್ ಮಾಡಲಾಯಿತು. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಕೈ ತಪ್ಪಿದ ಅವಕಾಶ ಶ್ರೇಯಸ್ ಗೋಪಾಲ್ ಅವರ ಐಪಿಎಲ್ ವೃತ್ತಿಜೀವನಕ್ಕೂ ಪೆಟ್ಟು ಕೊಟ್ಟಿತು.

ತನ್ನ ಪ್ರತಿಭೆಗೆ ಬೆಲೆ ಇರದ ಕಡೆ ಇರುವುದಕ್ಕಿಂತ ಹೊರ ನಡೆಯುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ಶ್ರೇಯಸ್ ಗೋಪಾಲ್, ಕೇರಳ ಪರ ಆಡಲು 2 ವರ್ಷ ಒಪ್ಪಂದ ಮಾಡಿಕೊಂಡು ಬಿಟ್ಟಿದ್ದರು. ಈಗ ಶ್ರೇಯಸ್ ಗೋಪಾಲ್ ಅವರ ಮೌಲ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಅರ್ಥವಾದಂತಿದೆ.

‘ಹೋಗುವುದಾದರೆ ಹೋಗಲಿ ಬಿಡಿ’ ಎಂದವರೇ ಶ್ರೇಯಸ್’ನನ್ನು ಮರಳಿ ಕರೆಸಿಕೊಂಡಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಡಿದುಕೊಂಡು ಕರ್ನಾಟಕ ಪರ ಆಡಲು ಶ್ರೇಯಸ್ ಗೋಪಾಲ್ ರೆಡಿಯಾಗಿದ್ದಾರೆ.

LEAVE A REPLY

Please enter your comment!
Please enter your name here

nineteen − one =

Latest news

Lucky Vibe Casino: Your Destination for Short, High‑Intensity Gaming Sessions

1. The Quick‑Hit Experience at Lucky Vibe CasinoWhen you log into Lucky Vibe Casino, the first thing that strikes...

MaxiSpin – Quick‑Play Slots and Instant Wins for the Modern Gambler

1. The Quick‑Play Pulse – Why Short Sessions RuleMaxiSpin is built around players who crave instant gratification. In a...

Roby Casino: Quick‑Hit Gaming for the Modern Player

1. The Pulse of Fast PlayRoby Casino has carved a niche for players who crave adrenaline in a tight...

Winning Casino – Experience Rapid Wins with Every Spin

Welcome to Winning – Quick Wins AwaitIn a world where time is gold, Winning casino offers a playground designed...
- Advertisement -spot_imgspot_img

Burswood Online Casino: Quick‑Spin Thrills for the Fast‑Paced Player

1 – The Pulse of a Rapid‑Fire SessionFor many casino enthusiasts the game‑playing window is a burst of adrenaline:...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Must read

- Advertisement -spot_imgspot_img

You might also likeRELATED
Recommended to you