ಕ್ರಿಕೆಟ್ದುಬೈನಲ್ಲಿ ಜನಮನ ಸೆಳೆಯುತ್ತಿರುವ ರಾಹುಲ್ ದ್ರಾವಿಡ್ ಕಪ್

ದುಬೈನಲ್ಲಿ ಜನಮನ ಸೆಳೆಯುತ್ತಿರುವ ರಾಹುಲ್ ದ್ರಾವಿಡ್ ಕಪ್

-

- Advertisment -spot_img

ದುಬೈನಲ್ಲಿ ಜನಮನ ಸೆಳೆಯುತ್ತಿರುವ ರಾಹುಲ್ ದ್ರಾವಿಡ್ ಕಪ್

ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನೆಲೆಸಿರುವ ಉಡುಪಿ ಸೂರಾಲು ಮೂಲದ ವಿಠಲ ರಿಶಾನ ನಾಯಕರು ರಾಹುಲ್ ದ್ರಾವಿಡ್ ಮೇಲಿನ ವಿಶೇಷ ಅಭಿಮಾನದೊಂದಿಗೆ ದುಬೈನಲ್ಲಿ ಆಯೋಜಿಸುತ್ತಿರುವ ಮಿಸ್ಟರ್ ಕ್ರಿಕೆಟ ರಾಹುಲ್ ದ್ರಾವಿಡ್ ಕಪ್ ಪಂದ್ಯಾಟದ ಎರಡನೇ ಸುತ್ತಿನ ಪಂದ್ಯಗಳು ರೋಚಕವಾಗಿ ಜರಗಿತು.

ಮೊದಲ ಪಂದ್ಯದಲ್ಲಿ ಅನುಭವೀ ಟೆಕ್ನೋ ಟೈಟಾನ್ಸ್ ತಂಡವು ದುಬೈನ ಜೆಡ್ಡಾಫ್ನ ಕರಾವಳಿಫ್ರೆಂಡ್ಸ್ ವಿರುದ್ಧ ಆರು ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.ಕರಾವಳಿಫ್ರೆಂಡ್ಸ್ ತಂಡವು ಮೊದಲು ಬ್ಯಾಟ್ ಮಾಡಿ ಹದಿನೈದು ಓವರಗಳಲ್ಲಿ 112 ರನ್ ಗಳಿಸಿದರೆ, ಇದಕ್ಕುತ್ತರವಾಗಿ ಬಲಿಷ್ಠ ಟೆಕ್ನೋಟೈಟಾನ್ಸ್ ತಂಡವು 7.3ಓವರಗಳಲ್ಲಿ ನಾಲಕ್ಕು ವಿಕೆಟ್ ಕಳೆದುಕೊಂಡು ಅತಿವೇಗದಲ್ಲಿ 118 ರನ್ ಗಳಿಸಿ ವಿಜಯ ಸಾಧಿಸಿತು. ಟೆಕ್ನೋಟೈಟಾನ್ಸ್ ತಂಡದ ಉಡುಪಿ ಹೊಸಂಗಡಿ ಮೂಲದ ಅಲ್ಫಾಜ್ ಅಪ್ಪಿ 21 ಚೆಂಡುಗಳಲ್ಲಿ 12 ಸಿಕ್ಸರ್ ಒಂದು ಬೌಂಡರಿ ಸಹಿತ ಅಜೇಯ 79ರನ್ ಸಿಡಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಎರಡನೇಯ ಪಂದ್ಯದಲ್ಲಿ ಬ್ಲೂಮಾಸ್ಟರ್ಸ್ ತಂಡವು ಗಲ್ಫ್ ಗೆಳೆಯರ ಕ್ರಿಕೆಟ್ ಬಳಗದ ವಿರುದ್ಧ 23 ರನ್ನುಗಳ ಜಯ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಬ್ಲೂ ಮಾಸ್ಟರ್ಸ್ ತಂಡವು 127ರನ್ ಗಳಿಸಿದರೆ ಇದನ್ನು ಬೆಂಬತ್ತಿದ ಗಲ್ಫ್ ಗೆಳೆಯರ ಬಳಗ 13 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 104 ರನ್ ಗಳಿಸಿತು.ಬ್ಲೂ ಮಾಸ್ಟರ್ಸ್ ತಂಡದ ಬಚಿ ಬಜ್ಪೆ ಎರಡು ಅಮೂಲ್ಯ ವಿಕೆಟ್ ಹಾಗೂ ಬ್ಯಾಟಿಂಗನಲ್ಲಿ 13 ರನ್ ಗಳಿಸಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.


ಮೂರನೇ ಪಂದ್ಯದಲ್ಲಿ ಗೋಲ್ಡನ್ ಸಿಟಿ ಬಾಯ್ಸ್ ತಂಡವು ಅಜ್ಮಾನಿನ ಆಲ್ಫಾ xl ಕ್ರಿಕೆಟ್ ಕ್ಲಬ್ ವಿರುದ್ಧ 15 ಓವರಗಳಲ್ಲಿ ಆರು ವಿಕೆಟ್ ಕಳೆದುಕೊಂಡು 235 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಬೆಟ್ಟದಂತ ರನ್ನಿನ ಈ ಸವಾಲನ್ನು ಸ್ಪೂರ್ತಿಯಿಂದ ಸ್ವೀಕರಿಸಿ ಬೆಂಬತ್ತಿದ ಅಜ್ಮಾನಿನ ಆಲ್ಫಾ xl ಕ್ರಿಕೆಟ್ ಕ್ಲಬ್ ಅಂತಿಮವಾಗಿ 15 ಓವರ್ ಗಳಲ್ಲಿ 231 ರನ್ ಸೇರಿಸಿ ಕೂದಲೆಳೆಯ ಅಂತರದಲ್ಲಿ ಕೇವಲ 4 ರನ್ ಗಳಿಂದ ಹಿಂದುಳಿದು ಸೋಲೊಪ್ಪಿಕೊಂಡಿತು.41 ಚೆಂಡುಗಳಲ್ಲಿ 11ಸಿಕ್ಸರ್,8 ಬೌಂಡರಿಗಳೊಂದಿಗೆ 114ಗಳ ಮಿಂಚಿನ ಶತಕ ಸಿಡಿಸಿದ ಗೋಲ್ಡನ್ ಸಿಟಿಬಾಯ್ಸ್ ತಂಡದ ದಿಲಶದ್ ಪಂದ್ಯಶ್ರೇಷ್ಠ ವ್ಯಕ್ತಿಯಾಗಿ ಆಯ್ಕೆಯಾದರು.

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ನೆಲೆಸಿರುವ ನೂರಾರು ಕ್ರಿಕೆಟ್ ಪ್ರತಿಭೆಗಳ ಪ್ರಕಾಶನಕ್ಕೆ ಆಸರೆಯಾಗಿರುವ ಈ ಬೃಹತ್ ಕ್ರಿಕೆಟ್ ಪಂದ್ಯಾಕೂಟವು ವಿಠಲ್ ರೀಶಾನ ನಾಯಕ್ ಸಾರಥ್ಯದಲ್ಲಿ ನೆರವೇರುತ್ತಿದ್ದು ಪ್ರತಿಯೊಂದು ಪಂದ್ಯವೂ ಭಾರೀ ಜಿದ್ದಾಜಿದ್ದಿನಿಂದ ಸಾಗುತ್ತಿದೆ.ಹೀಗಾಗಿ ದುಬೈನಲ್ಲಿ ನೆಲೆಸಿರುವ ಕ್ರಿಕೆಟ್ ಪ್ರೇಮಿಗಳಿಗೆ ಈ ಸ್ಪರ್ಧಾಕೂಟವು ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ.ಮುಂದಿನ ಭಾನುವಾರ ಮೂರನೇ ಸುತ್ತಿನ ಪಂದ್ಯಾಟವು ಜರಗಲಿದೆ.

ಪಿ‌.ಲಾತವ್ಯ ಆಚಾರ್ಯ ಉಡುಪಿ

LEAVE A REPLY

Please enter your comment!
Please enter your name here

two × one =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you