ಟೆಂಪೋ ಚಾಲಕರ ಮಾಲಕರ ಸಂಘದ ಆಶ್ರಯದಲ್ಲಿ ಸಾರಥಿ ಮಾನ್ಸೂನ್ ಟ್ರೋಫಿ-2025

ಟೆಂಪೋ ಚಾಲಕರ ಮಾಲಕರ ಸಂಘದ ಆಶ್ರಯದಲ್ಲಿ ಸಾರಥಿ ಮಾನ್ಸೂನ್ ಟ್ರೋಫಿ-2025

ಟೆಂಪೋ ಚಾಲಕರ ಮಾಲಕರ ಸಂಘದ ಆಶ್ರಯದಲ್ಲಿ ಸಾರಥಿ ಮಾನ್ಸೂನ್ ಟ್ರೋಫಿ-2025

(ವಿಜೇತ ತಂಡ)

ಉಡುಪಿ-ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ “ಸಾರಥಿ ಮಾನ್ಸೂನ್ ಟ್ರೋಫಿ 2025″, ಕ್ರಿಕೆಟ್ ಪಂದ್ಯಾಟ ನೇಜಾರ್ ಪಂಚಾಯತ್ ಮೈದಾನದಲ್ಲಿ ಜೂನ್ 9 ರಂದು ನಡೆಯಿತು.

ಉದ್ಘಾಟನಾ ಕಾರ್ಯಕ್ರದ ವೇದಿಕೆಯಲ್ಲಿ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ಗಣೇಶ್ ಕುಂದರ್, ಮಾಜಿ ಅಧ್ಯಕ್ಷರಾದ ಕೃಷ್ಣ ಕುಂದರ್, ಮಾಜಿ ಅಧ್ಯಕ್ಷರಾದ ವಿಲ್ಸನ್ ಸಿ ಸಿ, ಉಪಾಧ್ಯಕ್ಷರಾದ ಸದಾಶಿವ ಅಮೀನ್, ಹಿರಿಯರಾದ ಅಶೋಕ್ ಬಿ ಕೆ ಮತ್ತು ಹಿರಿಯ ಸದಸ್ಯರಾದ ಈಶ್ವರ್
ಕೆಳರ್ಕಳಬೆಟ್ಟು ಉಪಸ್ಥಿತರಿದ್ದರು.

ಒಟ್ಟು 6 ತಂಡಗಳು ಭಾಗವಹಿಸಿದ ಈ ಪಂದ್ಯಾಟದ ಫೈನಲ್ ನಲ್ಲಿ ಶರಧಿ ಟೈಟಾನ್ ತಂಡ ಜಯಭೇರಿಯಾಗಿ ಆಕರ್ಷಕ ಟ್ರೋಫಿಯೊಂದಿಗೆ 25,000 ನಗದು ಪುರಸ್ಕಾರವನ್ನು ಪಡೆಯಿತು, ಬಾಲಾಜಿ ತಂಡ ದ್ವಿತೀಯ ಸ್ಥಾನದಲ್ಲಿ ಆಕರ್ಷಕ ಟ್ರೋಫಿಯೊಂದಿಗೆ 15,000 ರೂ. ನಗದನ್ನು ಪಡೆದುಕೊಂಡಿತು, ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕುಮಾರ್,ಬೆಸ್ಟ್ ಬ್ಯಾಟರ್ ಪ್ರಶಸ್ತಿಯನ್ನು ಮನೋಜ್, ಬೆಸ್ಟ್ ಕೀಪರ್ ಪ್ರಶಸ್ತಿ ಸಂದೇಶ್ ಬೆಂಗ್ರೆ,ಬೆಸ್ಟ್ ಬೌಲರ್ ಆಗಿ ಸತೀಶ್ ಹಾಗೂ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಬಾಲುರವರು ಪಡೆದುಕೊಂಡರು.

(ರನ್ನರ್ ಅಪ್ ತಂಡ)

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷರಾದ ಗಣೇಶ್ ಕುಂದರ್, ಉಪಾಧ್ಯಕ್ಷರಾದ ಸದಾಶಿವ ಅಮೀನ್, ಮಾಜಿ ಅಧ್ಯಕ್ಷರಾದ ವಿಲ್ಸನ್ ಸಿ ಸಿ, ಮಾಜಿ ಅಧ್ಯಕ್ಷರಾದ ಪ್ರಶಾಂತ್ ನೇಜಾರ್ ಮತ್ತು ಹಿರಿಯ ಸದಸ್ಯರಾದ ಮಧುಕರ್ ಮೆಂಡನ್ ಉಪಸ್ಥಿತರಿದ್ದರು. ಶಿವು ಕಾಪು ಮತ್ತು ಸತೀಶ್ ಮಣಿಪಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *