ಪ್ರೈಮ್ ಸ್ಪೋರ್ಟ್ಸ್ ಕ್ಲಬ್ ಗುಂಡ್ಮಿ ಇವರ ಆಶ್ರಯದಲ್ಲಿ,ಸಂಸ್ಥೆಯ 30 ನೇ ವಾರ್ಷಿಕೋತ್ಸವ ಪ್ರಯುಕ್ತ,ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ಮಾರ್ಚ್ 13 ಮತ್ತು 14 ರಂದು 60 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ “ಗಲ್ಫ್ ಪ್ಲ್ಯಾಂಟ್ ಟ್ರೋಫಿ-2021″ಆಯೋಜಿಸಲಾಗಿದೆ.
13 ಶನಿವಾರದಂದು 23 ರ ವಯೋಮಿತಿಯ ಆಟಗಾರರಿಗೆ,13 ರ ರಾತ್ರಿ ಸ್ಥಳೀಯ ಲೀಗ್ ಕಮ್ ನಾಕೌಟ್ ಪಂದ್ಯಾಟ ಹಾಗೂ 14 ಆದಿತ್ಯವಾರದಂದು ಏರಿಯಾವೈಸ್ ಪಂದ್ಯಾಟ ಆಯೋಜಿಸಲಾಗಿದೆ.
ಪ್ರಥಮ ಪ್ರಶಸ್ತಿ ರೂಪದಲ್ಲಿ 25 ಸಹಸ್ರ,ದ್ವಿತೀಯ ಸ್ಥಾನಿ 20 ಸಹಸ್ರ ನಗದು ಬಹುಮಾನದೊಂದಿಗೆ ಆಕರ್ಷಕ ಗಲ್ಫ್ ಪ್ಲ್ಯಾಂಟ್ ಟ್ರೋಫಿ ಪಡೆಯಲಿದ್ದಾರೆ.
ಈ ಪಂದ್ಯಾಟದ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.ಹೆಚ್ಚಿನ ವಿವರಗಳಿಗಾಗಿ 9008144497 ಮತ್ತು 7406314111 ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.