ಆಳ್ವಾಸ್ ಅಂಗಳದಲ್ಲಿ ಪ್ರಜ್ವಲಿಸಿದ ಪ್ರತಿಭೆ, ಕರ್ನಾಟಕ ರಾಜ್ಯ 19 ರ ವಯೋಮಾನದ ಒಳಗಿನ ತಂಡದಲ್ಲಿ ಮಿಂಚಿ, ನಂತರ 23 ರ ವಯೋಮಾನದ ಒಳಗಿನ ತಂಡದಲ್ಲಿ ಮೆರೆದು,
ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಿವಮೊಗ್ಗ ಲಯನ್ಸ್, ಹುಬ್ಬಳ್ಳಿ ಟೈಗರ್ಸ್ ತಂಡಗಳಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿ, ರಾಜ್ಯಮಟ್ಟದ ಹತ್ತು ಹಲವಾರು ತಂಡಗಳನ್ನು ಪ್ರತಿನಿಧಿಸಿ ಪದಕಗಳ ಗೊಂಚಲನ್ನೇ ಬಾಚಿ ತಂದ ಉಡುಪಿ ಜಿಲ್ಲೆಯ ಕೋಟ ಗಿಳಿಯಾರಿನ ಹೆಮ್ಮೆಯ ಪ್ರತಿಭೆ, ಭವಿಷ್ಯದ ಸುಂದರ ಕ್ರೀಡಾ ಸ್ವಪ್ನ ಗಿಳಿಯಾರು ಬಡಾಮನೆ ಅಭಿಲಾಷ್ ಶೆಟ್ಟಿ
ಇದೀಗ ಪ್ರತಿಷ್ಠಿತ IPL ಪಂದ್ಯ ಕೂಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.