ಸೌದಿ ಅರೇಬಿಯಾದ ಪ್ರತಿಷ್ಟಿತ ಎ.ಟಿ.ಎಸ್.ಜೆದ್ದಾ ತಂಡವು ಇತ್ತೀಚೆಗಷ್ಟೇ ಮರ್ಸಲ್ ನ ಬಿ.ಎಮ್.ಟಿ ಅಂಗಣದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನಎ.ಟಿ.ಎಸ್.ಕಪ್-2020 ಪಂದ್ಯಾವಳಿಯ ಪ್ರಶಸ್ತಿಯನ್ನು ಪ್ಯಾರಾಮೌಂಟ್ ರಿಯಾದ್ ತಂಡ ಜಯಿಸಿದೆ.

ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಜೆದ್ದಾ ಪ್ರತಿಷ್ಠಿತ ಎ.ಟಿ.ಎಸ್ ಕಪ್ ಗಾಗಿ 12 ತಂಡಗಳು ಭಾಗವಹಿಸಿತ್ತು.ಲೀಗ್ ಕಮ್ ನಾಕೌಟ್ ಹಂತದ ಹೋರಾಟದ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ಕಯಾನಿ ಇಲೆವೆನ್ ತಂಡ ಅಝೀಝಿಯಾ ಡೆಕ್ಕನ್ ತಂಡವನ್ನು ಹಾಗೂ ಪ್ಯಾರಾಮೌಂಟ್ ರಿಯಾದ್ ಯಂಗ್ ಸ್ಟಾರ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.

ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಯಾನಿ ಇಲೆವೆನ್ ನಿಗದಿತ 8 ಓವರ್ ಗಳಲ್ಲಿ 84 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತ್ತು.ಚೇಸಿಂಗ್ ವೇಳೆ
ಪ್ಯಾರಾಮೌಂಟ್ ರಿಯಾದ್ ತಂಡದ ಇಲ್ಯಾಸ್ ಹಾಗೂ ಸಲ್ಮಾನ್ ಬ್ಯಾಟಿಂಗ್ ಸಾಹಸದಿಂದ ಕೇವಲ 6.5 ಓವರ್ ಗಳಲ್ಲಿ ಗುರಿಯನ್ನು ಬೆಂಬತ್ತಿ ಎ.ಟಿ.ಎಸ್ ಕಪ್-2020 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ಪ್ರಥಮ ಪ್ರಶಸ್ತಿ ವಿಜೇತ ಪ್ಯಾರಾಮೌಂಟ್ ರಿಯಾದ್ 5,555 ರಿಯಲ್ ನಗದು ಹಾಗೂ ರನ್ನರ್ ಅಪ್ ಕಯಾನಿ ಇಲೆವೆನ್ ನಗದು 3,333 ರಿಯಲ್ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.

ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ
ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಕಯಾನಿ ಇಲೆವೆನ್ ನ ಕಾಶಿಫ್,ಬೆಸ್ಟ್ ಬೌಲರ್ ಪ್ಯಾರಾಮೌಂಟ್ ನ ನೌಮಾನ್ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಹಾಗು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ಯಾರಾಮೌಂಟ್ ರಿಯಾದ್ ತಂಡದ ಸಲ್ಮಾನ್ ಪಡೆದುಕೊಂಡರು.ಸಮಾರೋಪ ಸಮಾರಂಭದಲ್ಲಿ ನಡೆದ ಲಕ್ಕಿ ಡ್ರಾ ನಲ್ಲಿ ಮೂಲ್ಕಿಯ ಶಬ್ಬೀರ್ ಅಹಮದ್ ಇವರಿಗೆ ಐ ಫೋನ್ 12 ಪ್ರೋ ಮ್ಯಾಕ್ಸ್ ಬಹುಮಾನ ದೊರೆತಿರುತ್ತದೆ.

ಪಂದ್ಯಾವಳಿಯ
ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕನ್ನಡಿಗರ ಹೆಮ್ಮೆಯ ಕ್ರೀಡಾ ವೆಬ್ಸೈಟ್ ಸ್ಪೋರ್ಟ್ಸ್ ಕನ್ನಡ ಕಾರ್ಯ ನಿರ್ವಹಿಸಿದ್ದು,ಮೊತ್ತ ಮೊದಲ ಬಾರಿಗೆ ಕರ್ನಾಟಕದ M.Sports ಯೂ ಟ್ಯೂಬ್ ಚಾನೆಲ್ ಈ ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದ್ದು, ದೇಶ,ವಿದೇಶದಾದ್ಯಂತ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಪಂದ್ಯಾಟವನ್ನು ವೀಕ್ಷಿಸಿದರು.