5 ವಿಶ್ವದಾಖಲೆಗಳನ್ನು ಸ್ಥಾಪಿಸಿದ ಯೋಗರತ್ನ,ಗೋಲ್ಡನ್ ಗರ್ಲ್ ಖ್ಯಾತಿಯ ಕುಮಾರಿ ತನುಶ್ರೀ ಪಿತ್ರೋಡಿ ಇವರಿಗೆ ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುತ್ತದೆ.ಇದರ ಸಂಭ್ರಮಾಚರಣೆಯ ಅಂಗವಾಗಿ ತನುಶ್ರೀ ಪೋಷಕರ ಸಂಧ್ಯೋದಯ ಪಿತ್ರೋಡಿ ಸಂಸ್ಥೆ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ.
ಪಂಜಿಮಾರು ಶಿರ್ವದ ಅಪರೂಪದ ವಿಶೇಷ ಚೇತನರು ಒಂದೇ ಮನೆಯ ಸೋದರ,ಸೋದರಿಯರಾದ ಗಣೇಶ್ ಮತ್ತು ಸುಮಂಗಳಾ ಇವರ ವಿಶೇಷ ಕಲಾಕೃತಿಗಳ ಪ್ರದರ್ಶನ
6-12-2020 ಇಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಈ ಸಂದರ್ಭ ವಿವಿಧ ಕ್ಷೇತ್ರಗಳ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು,
ತನುಶ್ರೀ&ರಿತುಶ್ರೀ ಇವರಿಂದ “ಕೃಷ್ಣ ಕೇಳಿ” ಎಂಬ ಯಕ್ಷಗಾನ ನೃತ್ಯ ರೂಪಕ ನಡೆಯಲಿದೆ.