ಕಳೆದ 30 ವರ್ಷಗಳಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಕೋಟ ಸಮೀಪದ ಹರ್ತಟ್ಟಿನ ನವೋದಯ ಫ್ರೆಂಡ್ಸ್ (ರಿ).
ಈ ಸಂಸ್ಥೆಯ ಸುಮಾರು 120 ಕ್ಕೂ ಮಿಕ್ಕಿ ಸದಸ್ಯರ ತಂಡ ಕೋರೋನಾ ಸಂದರ್ಭದಲ್ಲಿ ದಿನ ನಿತ್ಯದ ಆಹಾರ ಪೂರೈಕೆ,ಆರೋಗ್ಯ ಸಂಬಂಧಿ ಸಮಸ್ಯೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಸಹಾಯ ಹಸ್ತ,ವರ್ಷಕ್ಕೊಮ್ಮೆ ಕೃಷಿ,ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡಿಕೊಂಡು ಬಂದಿರುತ್ತದೆ.
ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಬಡ,ಅಸಹಾಯಕರು,ಸಾಧಕರ ಹಾಗೂ ನೊಂದವರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಡಿಸೆಂಬರ್ 12 ಹಾಗೂ 13 ರಂದು
ಮೂವತ್ತು ಗಜಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ.
ಶನಿವಾರ 12 ರಂದು ಎಲ್ಲಾ ತಂಡಗಳಿಗೂ ಮುಕ್ತ ಅವಕಾಶವಿದ್ದು,13 ರವಿವಾರದಂದು ಆಯಾ ಏರಿಯಾದ ತಂಡಗಳಿಗೆ ಆಡಲು ಅವಕಾಶವಿರುತ್ತದೆ.
ಪಂದ್ಯಾವಳಿಯ ವಿಜೇತ ತಂಡ 15 ಸಾವಿರ,ರನ್ನರ್ ಅಪ್ ತಂಡ 8 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.