ಕಳೆದ 20 ವರ್ಷಗಳಿಂದ ಬ್ರಹ್ಮಾವರ ಪರಿಸರದಲ್ಲಿ ಲೆದರ್ ಬಾಲ್ ಕೋಚಿಂಗ್ ನಡೆಸುತ್ತಾ,2018 ರಲ್ಲಿ B.A.C.A ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿ,ಅನೇಕ ಯುವ ಪ್ರತಿಭೆಗಳನ್ನು ತನ್ನ ಗರಡಿಯಲ್ಲಿ ಪಳಗಿಸುತ್ತಿದ್ದು, ಬ್ರಹ್ಮಾವರದ ಎಸ್.ಎಮ್.ಎಸ್ ಹಾಗೂ ಬಾರ್ಕೂರಿನ ಎನ್.ಜೆ.ಸಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯ್ ಆಳ್ವರವರ ಸಾರಥ್ಯದ “ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ”ಯಲ್ಲಿ”Concrete State of Art Cricket Pitch and Non Electrical Bowling Machine” ಇದರ ಉದ್ಘಾಟನಾ ಸಮಾರಂಭ ಇಂದು(ಜನವರಿ 23) ತಾರೀಖಿನಂದು ಸಾಯಂಕಾಲ 5 ಘಂಟೆಗೆ ಸರಿಯಾಗಿ ಚೇತನಾ ಪ್ರೌಢಶಾಲೆ ಮಾಬುಕಳ ಇಲ್ಲಿ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಶ್ರೀ ಅಲೆನ್ ಲೂಯಿಸ್ ಕಲ್ಯಾಣಪುರ, ಮಾಲೀಕರು ಬೈಕ್ ಫಾರ್ಮ್ ಕಲ್ಯಾಣಪುರ,ಶ್ರೀ ಅಜಿತ್ ಸಿ ಆಳ್ವಾ ಮಾಜಿ ರಣಜಿ ಟ್ರೋಫಿ ಆಟಗಾರರು ಕರ್ನಾಟಕ,
ಶ್ರೀಮತಿ ಗೀತಾ ಪ್ರಕಾಶ್ ಚಂದ್ರ ಹೆಗಡೆ ಅಧ್ಯಕ್ಷರು ಐರೋಡಿ ಗ್ರಾಮ ಪಂಚಾಯತ್,
ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷರು ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ,
ಇಬ್ರಾಹಿಂ ಸಾಹೇಬ್ ಕಾರ್ಯದರ್ಶಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ,
ಪ್ರೊ. ಜಿ. ಬಿ. ಶೆಟ್ಟಿ. ಪ್ರಾಂಶುಪಾಲರು ಬಿ. ಡಿ.ಶೆಟ್ಟಿ. ಮ್ಯಾನೇಜ್ ಮೆಂಟ್ ಕಾಲೇಜು ಮಾಬುಕಳ,ಶ್ರೀ ಗಣೇಶ್. ಜಿ ಮುಖ್ಯ ಶಿಕ್ಷಕರು ಚೇತನಾ ಪ್ರೌಢಶಾಲೆ ಮಾಬುಕಳ
ಇವರೆಲ್ಲರ ಘನ ಉಪಸ್ಥಿತಿಯಲ್ಲಿ ಜರುಗಲಿದೆ.
ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯ ತಂಡದ ಮಾಜಿ ಕಪ್ತಾರು ಹಾಗೂ ಕೆ.ಆರ್.ಆಸ್ ಅಕಾಡೆಮಿಯ ರೂವಾರಿ ವೈ.ಉದಯ್ ಕುಮಾರ್ ಕಟಪಾಡಿ ಹಾಗೂ ಅತ್ಯುತ್ತಮ ಸಾಧನೆಗೈದ ಕ್ಲಬ್ ನ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಸ್ಪೋರ್ಟ್ಸ್ ಕನ್ನಡ ಜಾಲತಾಣ ವತಿಯಿಂದ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು.