ಮಾಹೆ ಯೂನಿವರ್ಸಿಟಿ ಮೈದಾನದಲ್ಲಿ ನಿನ್ನೆ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾಕೂಟದಲ್ಲಿ C.S.P ಇಲೆವೆನ್ SP ಇಲೆವೆನ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿದೆ.
ಅತ್ಯದ್ಭುತ ಫಾರ್ಮ್ ನಲ್ಲಿ ಪಿ.ಸಿ.ಪ್ರಶಾಂತ್
ಇತ್ತೀಚೆಗಷ್ಟೇ ಬೆಂಗಳೂರಿನ ಮತ್ತಿಕೆರೆಯಲ್ಲಿ ನಡೆದಿದ್ದ ಪೋಲಿಸ್ ಕಪ್ ನಲ್ಲಿ ತನ್ನ ಶ್ರೇಷ್ಟ ಸವ್ಯಸಾಚಿ ಪ್ರದರ್ಶನದ ಮೂಲಕ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಸೈಕಲ್ ತನ್ನದಾಗಿಸಿಕೊಂಡ ಕೋಟ ಪಡುಕರೆಯ ಪ್ರಶಾಂತ್ ನಿನ್ನೆಯೂ ಕೂಡ ಅದೇ ಫಾರ್ಮ್ ಕಾಯ್ದುಕೊಂಡು ಭರ್ಜರಿ ಪ್ರದರ್ಶನವನ್ನೇ ನೀಡಿದರು.
ಲೀಗ್ ಹಂತದ ಮೊದಲ ಪಂದ್ಯದಲ್ಲಿ
5 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 54 ರನ್ ಸಿಡಿಸಿದರೆ,ದ್ವಿತೀಯ ಪಂದ್ಯದಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 37 ರನ್ ಗಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.
ಬೌಲಿಂಗ್ ನಲ್ಲೂ ಮಿಂಚಿದ್ದ ಪ್ರಶಾಂತ್ 3 ಪಂದ್ಯಗಳಲ್ಲಿ 11ವಿಕೆಟ್ ಹಾಗೂ ಫೈನಲ್ ನಲ್ಲಿ 10 ರನ್ ನೀಡಿ 4 ವಿಕೆಟ್ ಗಳಿಸಿ, ಮೇಡನ್ ಓವರ್ ಎಸೆದು,ಅರ್ಹವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ C.S.P ಇಲೆವೆನ್ ನ ಸಂತೋಷ್ ಗಿಳಿಯಾರು ಆಯ್ಕೆಯಾದರು.
ಉಡುಪಿ ಜಿಲ್ಲಾಧಿಕಾರಿ ಶ್ರೀ.ಜಿ.ಜಗದೀಶ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು…