ಕ್ರಿಕೆಟ್ವಿಪಿಎಲ್‌ಗೆ ವೇದಿಕೆ ಸಜ್ಜು:ಮೂಲ್ಕಿಯಲ್ಲಿ ಜಿಎಸ್‌ಬಿ ಟೂರ್ನಿ

ವಿಪಿಎಲ್‌ಗೆ ವೇದಿಕೆ ಸಜ್ಜು:ಮೂಲ್ಕಿಯಲ್ಲಿ ಜಿಎಸ್‌ಬಿ ಟೂರ್ನಿ

-

- Advertisment -spot_img
ಮೂಲ್ಕಿ: ಬಹು ನಿರೀಕ್ಷೆಯ ವಿಪಿಎಲ್‌ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ.ಈ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಇದು ಹಗಲು ಮತ್ತು ರಾತ್ರಿಯ ಪಂದ್ಯಾಟವಾಗಿ ಸಾಗಿ ಬರಲಿದ್ದು ಎರಡು ದಿನಗಳ ಕಾಲ ಮೂಲ್ಕಿಯಲ್ಲಿ ಜಿಎಸ್‌ಬಿ
ಸಮಾಜದ ಕ್ರಿಕೆಟಿಗರು ಅಬ್ಬರಿಸಲಿದ್ದಾರೆ.
 *ಟೂರ್ನಿ ಸ್ವರೂಪ:* 
ಪಂದ್ಯಗಳು ಡಿಸೆಂಬರ್​ 9ರಿಂದ 10ರವರೆಗೆ  ವಿಜಯ ಕಾಲೇಜು ಮೈದಾನದಲ್ಲಿ  ನಡೆಯಲಿವೆ.ಲೀಗ್‌ ಪಂದ್ಯಗಳನ್ನು ತಲಾ ಆರು ಓವರ್ ಗಳಂತೆ ನಡೆಸುವ ಯೋಜನೆ ಇದೆ. ಟೂರ್ನಿಯಲ್ಲಿ ಆಡುವ 12 ತಂಡಗಳನ್ನು 3 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಎ, ಬಿ, ಸಿ ಗುಂಪಿನಲ್ಲಿ ತಲಾ 4  ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು
ಎರಡನೇಯ ಲೀಗ್ ಹಂತಕ್ಕೇರಲಿವೆ. ಅದಾದ ಬಳಿಕ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಶನಿವಾರ ಡಿ.9ರಂದು ಬೆಳಿಗ್ಗೆ 9:00ಗೆ ಪ್ರಥಮ ಪಂದ್ಯ ಪ್ರಾರಂಭವಾಗಿ ರಾತ್ರಿ 12:30 ಗಂಟೆಯ ವರೆಗೆ ಮೊದಲ ದಿನದ ಪಂದ್ಯಗಳು ನಡೆಯಲಿವೆ.ಮರುದಿನ ಭಾನುವಾರ ದಿನಾಂಕ 10ರಂದು ರಾತ್ರಿ 8:30ಗೆ ಫೈನಲ್ ಪಂದ್ಯ ನಡೆಯಲಿದೆ.ಅದಾದ ಬಳಿಕ ಅದ್ದೂರಿಯ ಸಮಾರೋಪ ಸಮಾರಂಭವು ಕೂಡ ನಡೆಯಲಿದೆ. ಅಸಂಖ್ಯಾತ ಕ್ರೀಡಾಭಿಮಾನಿಗಳು ಈ  ಪಂದ್ಯಾಕೂಟವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.
ಇತ್ತೀಚಿಗೆ ಸ್ಪೋರ್ಟ್ಸ್ ಕನ್ನಡ ಆಯೋಜಕರ ಜೊತೆ ನಡೆಸಿದ ಸಂದರ್ಶನದಲ್ಲಿ ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ರಾಜ್ಯದ ಅನುಭವಿ ನಿರ್ಣಾಯಕರು ಮತ್ತು ಹೆಸರಾಂತ ವೀಕ್ಷಕ ವಿವರಣೆಗಾರರು ಕೂಡ ಭಾಗವಹಿಸಿ ಟೂರ್ನಿಯ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಕನ್ನಡದ ವರದಿಗಾರರಾದ ಸುರೇಶ್ ಭಟ್ ಮೂಲ್ಕಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

five × 4 =

Latest news

Chicken Road: The Fast‑Paced Crash Game That Keeps You on the Edge

When you think of a game that’s all about quick decisions and instant thrills, Chicken Road pops up as a...

Chicken Road 2: Schnell‑Paced Crash‑Action für Schnelle Gewinne

Chicken Road 2 – Ein Schnellfeuer‑Arcade‑Crash‑SpielChicken Road 2 lädt dich auf eine cartoonartige Autobahn ein, auf der eine entschlossene Huhn...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...
- Advertisement -spot_imgspot_img

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

Must read

- Advertisement -spot_imgspot_img

You might also likeRELATED
Recommended to you