ಕಶ್ವಿ ಚೆಸ್ ಸ್ಕೂಲ್(ರಿ) ಕುಂದಾಪುರ ಇವರ ಆಯೋಜಕತ್ವದಲ್ಲಿ ಕಶ್ವಿಸ್ ಮೊದಲನೆಯ ಅಂತರಾಷ್ಟ್ರೀಯ ಓಪನ್ ಫಿಡೆ ರೇಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್ 2023 ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ ನಲ್ಲಿ ಶನಿವಾರ ಡಿಸೆಂಬರ್ 9 ರಂದು ಆರಂಭಗೊಂಡಿತು.
ಎರಡು ದಿನಗಳ ಈ ಪಂದ್ಯಾಕೂಟದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರ 400ಕ್ಕೂ ಹೆಚ್ಚು ಚೆಸ್ ಆಟಗಾರರು ಭಾಗವಹಿಸಿದ್ದಾರೆ. ಸುಮಾರು 26 ಲಕ್ಷ ಮೊತ್ತದ ಬಹುಮಾನ ಅಲ್ಲದೇ ವಿವಿಧ ವಿಭಾಗಗಳಲ್ಲಿ ಗೆದ್ದ ವಿಜೇತರಿಗೆ ಬಹುಮಾನ ನೀಡಲಾಗುವುದು.
ಪಂದ್ಯಾಕೂಟವನ್ನು ಮಂಗಳೂರಿನ ರಾವ್ಸ್ ಚೆಸ್ ಕಾರ್ನರ್ ನ ಸ್ಥಾಪಕ ಹಾಗೂ ಅಂತರಾಷ್ಟ್ರೀಯ ಮಾಸ್ಟರ್ ಶರಣ್ ರಾವ್ ಉದ್ಘಾಟಿಸಿದರು. ನಂತರ ಮಾತನಾಡುತ್ತಾ ಇಂತಹ ಪಂದ್ಯಾವಳಿಯಿಂದ ಸ್ಥಳೀಯ ಆಟಗಾರರಿಗೆ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಿರಿಯ ಅನುಭವಿ ಆಟಗಾರರೊಂದಿಗೆ ಆಟವಾಡಲು ಇದೊಂದು ಉತ್ತಮವಾದ ವೇದಿಕೆ. ಮಂಗಳೂರಿನಲ್ಲಿ ಇಂತಹ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಪಂದ್ಯಾವಳಿ ಮುಂದಿನ ದಿನಗಳಲ್ಲಿ ಹೆಚ್ಚಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಮೇಶ ಕೋಟೆ, ಅಧ್ಯಕ್ಷರು, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್(ರಿ), ಸದಾಶಿವ ಶೆಟ್ಟಿ, ಪಂದ್ಯಾವಳಿಯ ಅಧ್ಯಕ್ಷ ಸದಾಶಿವ ಶೆಟ್ಟಿ, ಕಶ್ವಿ ಚೆಸ್ ಸ್ಕೂಲ್ ಸ್ಥಾಪಕ ಹಾಗೂ ಪಂದ್ಯಾವಳಿಯ ಆಯೋಜಕ ನರೇಶ್ ಬಿ ಉಪಸ್ಥಿತರಿದ್ದರು.
ಅವಿನಾಶ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಭಟ್ ಪ್ರಾರ್ಥಿಸಿದರು, ಕಶ್ವಿ ಚೆಸ್ ಸ್ಕೂಲ್ ಕಾರ್ಯದರ್ಶಿ ಪುರುಷೋತ್ತಮ ಕಾಮತ್ ದನ್ಯವಾಧಗೈದರು. ವಸಂತ್ ಬಿ ಅವರ ನೇತೃತ್ವದ ಸುಮಾರು 7 ತೀರ್ಪುಗಾರರ ತಂಡ ಪಂದ್ಯಾವಳಿಯನ್ನು ನಿರ್ವಹಿಸುತ್ತಿದ್ದಾರೆ.
ಇಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎನ್ ಸಂತೋಷ ಹೆಗ್ಡೆ, ಮಾಜಿ ಲೋಕಾಯುಕ್ತರು, ಪ್ರವೀಣ ತಿಪ್ಸೆ, ಅಂತರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕ್ರತ, ಯು.ಟಿ. ಖಾದರ್, ಸಭಾದ್ಯಕ್ಷರು, ಕರ್ನಾಟಕ ವಿಧಾನಸಭೆ, ಜಯಪ್ರಕಾಶ ಹೆಗ್ಡೆ, ಹಿಂದುಳಿದ ಆಯೋಗದ ಅದ್ಯಕ್ಷರು, ಪ್ರಮೋದ ಮದ್ವರಾಜ, ಮಾಜಿ ಮಂತ್ರಿಗಳು, ಕರ್ನಾಟಕ ಸರ್ಕಾರ, ಇನಾಯತ್ ಅಲಿ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಮುಂತಾದವರು ಭಾಗವಹಿಸಲಿದ್ದಾರೆ.