ಸಮಾಜರತ್ನ,ಉದ್ಯಮಿ,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಡಾ.ಗೋವಿಂದ ಬಾಬು ಪೂಜಾರಿ ಬೈಂದೂರು ಇವರ ಒಡೆತನದ ಶೆಫ್ ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವೀಸಸ್ ಪ್ರೈ ಲಿಮಿಟೆಡ್ ಮತ್ತು ಅಂಗ ಸಂಸ್ಥೆಯ ನೌಕರರಿಗಾಗಿ 2 ದಿನಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಡಿಸೆಂಬರ್ 9 ಮತ್ತು 10 ರಂದು ಬೆಂಗಳೂರು ಕೂಡ್ಲುಗೇಟ್ ಬಳಿಯ ಐಕ್ಯೂರಾ ಗೇಮ್ಸ್ ವಿಲೇಜ್ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ದಿ ಲೆಜೆಂಡ್ ಕ್ರಿಕೆಟರ್ಸ್,ಎಸ್.ಎನ್.ಜಿ ಕ್ರಿಕೆಟರ್ಸ್,ಐ.ಸಿ ಚಾಂಪಿಯನ್ಸ್,ಟೀಮ್ 18 ಸ್ಟಾರ್,ವಾರಿಯರ್ ಚಾಲೆಂಜರ್ಸ್,ಲಯನ್ಸ್,ಚಾಲೆಂಜರ್ಸ್, ವೀರ ಟೈಗರ್ಸ್, ಸ್ಯಾಂಡಿ ಕಿಂಗ್ಸ್ ಮತ್ತು ಐ.ಸಿ ಎಲಿಫೆಂಟ್-ಟೈಗರ್ಸ್ ಹೀಗೆ ಒಟ್ಟು 10 ತಂಡಗಳು ಸುಮಾರು 200 ಕ್ಕೂ ಹೆಚ್ಚಿನ ನೌಕರರು ಭಾಗವಹಿಸಲಿದ್ದಾರೆ.
ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.