ಮೂಲ್ಕಿ: ಬಹು ನಿರೀಕ್ಷೆಯ ವಿಪಿಎಲ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ.ಈ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಇದು ಹಗಲು ಮತ್ತು ರಾತ್ರಿಯ ಪಂದ್ಯಾಟವಾಗಿ ಸಾಗಿ ಬರಲಿದ್ದು ಎರಡು ದಿನಗಳ ಕಾಲ ಮೂಲ್ಕಿಯಲ್ಲಿ ಜಿಎಸ್ಬಿಸಮಾಜದ ಕ್ರಿಕೆಟಿಗರು ಅಬ್ಬರಿಸಲಿದ್ದಾರೆ.
*ಟೂರ್ನಿ ಸ್ವರೂಪ:*
ಪಂದ್ಯಗಳು ಡಿಸೆಂಬರ್ 9ರಿಂದ 10ರವರೆಗೆ ವಿಜಯ ಕಾಲೇಜು ಮೈದಾನದಲ್ಲಿ ನಡೆಯಲಿವೆ.ಲೀಗ್ ಪಂದ್ಯಗಳನ್ನು ತಲಾ ಆರು ಓವರ್ ಗಳಂತೆ ನಡೆಸುವ ಯೋಜನೆ ಇದೆ. ಟೂರ್ನಿಯಲ್ಲಿ ಆಡುವ 12 ತಂಡಗಳನ್ನು 3 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಎ, ಬಿ, ಸಿ ಗುಂಪಿನಲ್ಲಿ ತಲಾ 4 ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು
ಎರಡನೇಯ ಲೀಗ್ ಹಂತಕ್ಕೇರಲಿವೆ. ಅದಾದ ಬಳಿಕ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಶನಿವಾರ ಡಿ.9ರಂದು ಬೆಳಿಗ್ಗೆ 9:00ಗೆ ಪ್ರಥಮ ಪಂದ್ಯ ಪ್ರಾರಂಭವಾಗಿ ರಾತ್ರಿ 12:30 ಗಂಟೆಯ ವರೆಗೆ ಮೊದಲ ದಿನದ ಪಂದ್ಯಗಳು ನಡೆಯಲಿವೆ.ಮರುದಿನ ಭಾನುವಾರ ದಿನಾಂಕ 10ರಂದು ರಾತ್ರಿ 8:30ಗೆ ಫೈನಲ್ ಪಂದ್ಯ ನಡೆಯಲಿದೆ.ಅದಾದ ಬಳಿಕ ಅದ್ದೂರಿಯ ಸಮಾರೋಪ ಸಮಾರಂಭವು ಕೂಡ ನಡೆಯಲಿದೆ. ಅಸಂಖ್ಯಾತ ಕ್ರೀಡಾಭಿಮಾನಿಗಳು ಈ ಪಂದ್ಯಾಕೂಟವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.
ಇತ್ತೀಚಿಗೆ ಸ್ಪೋರ್ಟ್ಸ್ ಕನ್ನಡ ಆಯೋಜಕರ ಜೊತೆ ನಡೆಸಿದ ಸಂದರ್ಶನದಲ್ಲಿ ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ರಾಜ್ಯದ ಅನುಭವಿ ನಿರ್ಣಾಯಕರು ಮತ್ತು ಹೆಸರಾಂತ ವೀಕ್ಷಕ ವಿವರಣೆಗಾರರು ಕೂಡ ಭಾಗವಹಿಸಿ ಟೂರ್ನಿಯ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಕನ್ನಡದ ವರದಿಗಾರರಾದ ಸುರೇಶ್ ಭಟ್ ಮೂಲ್ಕಿ ತಿಳಿಸಿದ್ದಾರೆ.