ಮಂಗಳಾಪುರ ಟ್ರೋಫಿ ಫ್ರಾಂಚೈಸಿಗಳು ಅಧಿಕೃತವಾಗಿ ಐಕಾನ್ ಆಟಗಾರರನ್ನು ಬಿಡುಗಡೆ ಮಾಡಿದ ಬಗ್ಗೆ ಮಂಗಳಾಪುರ ಕ್ರಿಕೆಟರ್ಸ್ ಮಾಹಿತಿ ಹೊರಹಾಕಿದೆ.
ಮಂಗಳಾಪುರ ಟ್ರೋಫಿ ಪ್ರೀಮಿಯರ್ ಲೀಗ್ ಟೂರ್ನಿ 2023ಕ್ಕೆ 10 ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಶುರುಮಾಡಿಕೊಂಡಿವೆ. ಇದೇ ಅಕ್ಟೋಬರ್ 28-29 ರಂದು ಮಂಗಳೂರಿನ ಉರ್ವಾ ಮೈದಾನದಲ್ಲಿ ಜಿ.ಎಸ್. ಬಿ ಪಂದ್ಯಾವಳಿ ಏರ್ಪಡಿಸಲಾಗಿದ್ದು ಇದಕ್ಕೂ ಮುನ್ನ ಟೀಮ್ ಮಂಗಳಾಪುರ ಎಲ್ಲಾ ತಂಡಗಳಿಗೆ ತಮಗೆ ಅಗತ್ಯವಿರುವ ಐಕಾನ್ ಆಟಗಾರರನ್ನು ಬಿಡುಗಡೆ ಮಾಡಲು ಹೇಳಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ತಂಡಗಳ ಸಂಪೂರ್ಣ ಚಿತ್ರಣ ಸಿಗಲಿದೆ. ಯಾವ ಫ್ರಾಂಚೈಸಿ ಯಾವ ಆಟಗಾರರನ್ನು ಐಕಾನ್ ಪ್ಲೇಯರ್ ಆಗಿ ಆಯ್ಕೆ ಮಾಡಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಂಜುಳೇಶ ಕ್ರಿಕೆಟರ್ಸ್ ತನ್ನ ತಂಡದಲ್ಲಿ ಭರ್ಜರಿ ಹೊಡೆತಗಾರ ರಜತ್ ಶೆಣೈ ಐಕಾನ್ ಆಟಗಾರನನ್ನಾಗಿ ಬಿಡುಗಡೆ ಮಾಡಿದೆ ಎಂದು ವರದಿ ಆಗಿದೆ. ಮಂಜುಳೇಶ ಕ್ರಿಕೆಟರ್ಸ್ ನಲ್ಲಿ ಪ್ರಸಾದ್ ಪ್ರಭು ತಂಡದ ಮಾಲೀಕರಾಗಿ, ಎಂ. ನಾರಾಯಣ ನಾಯಕ್ ಅವರನ್ನು ಸಹ ಮಾಲೀಕರಾಗಿ ಕೈ ಹಿಡಿದಿದೆ.
ಡೆಡ್ಲಿ ಪ್ಯಾಂಥರ್ಸ್ (ರಿ) ತಂಡ ಹೊಡೆಬಡಿಯ ದಾಂಡಿಗ ರಾಕೇಶ್ ಕಾಮತ್ ರನ್ನು ಐಕಾನ್ ಆಟಗಾರನನ್ನಾಗಿ ಬಿಡುಗಡೆ ಮಾಡಿದೆ. ಇದರಲ್ಲಿ ಮಾಲೀಕರಾಗಿ ಎಂ. ಸಂದೇಶ್ ಶೆಣೈ ಕೂಡ ಇರುವುದು ಅಚ್ಚರಿಯೇನಲ್ಲ.
ರೈಸಿಂಗ್ ಸ್ಟಾರ್ಸ್ ಮಂಗಳೂರು ತಂಡ ಅಚ್ಚರಿ ಎಂಬಂತೆ ಎಡಗೈ ಆಟಗಾರ ಪ್ರಜ್ವಲ್ ಶೆಣೈ ಯನ್ನು ತಂಡಕ್ಕೆ ಕೈ ಹಿಡಿಯಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಂ. ದಿನೇಶ್ ಪೈ, ಎಂ. ಸುಧೀರ್ ಪೈ , ಹಾಗೂ ಎಂ ಕಿರಣ್ ಪೈ ಅವರನ್ನು ತಂಡದ ಮಾಲೀಕರಾಗಿ ಉಳಿಸಿಕೊಂಡಿದೆಯಂತೆ.
ಇತ್ತ ಅಜಯ್ ಕಾಮತ್ ಮಾಲಕತ್ವದ ಜಿ.ಸ್.ಬಿ ಗರುಡಾಸ್ ತಂಡ ವಿಜಯ್ ಕಾಮತ್ ರನ್ನು ಐಕಾನ್ ಪ್ಲೇಯರ್ ಆಗಿ ಹಿಡಿದಿದೆ. ಅಂತೆಯೆ ಸೂರಜ್ ಭಟ್ ಕೋ ಓನರ್ ಆಗಿದ್ದಾರೆ.
ಇತ್ತ ಸಪ್ತಮಿ ವಾರಿಯರ್ಸ್ ಆಯ್ಕೆ ಮಾಡಿದ ಐಕಾನ್ ಆಟಗಾರ ಭರ್ಜರಿ ಹೊಡೆತಗಳನ್ನು ನೀಡಬಲ್ಲ ಎಡಗೈ ದಾಂಡಿಗ ವಿಘ್ನೇಶ್ ಭಟ್ ಕೋಟೇಶ್ವರ. ಮಂಜುನಾಥ್ ಆಚಾರ್ಯ ತಂಡದ ಮಾಲೀಕರು ಹಾಗೂ ಮುರಳಿ ನಾಯಕ್ ರನ್ನು ಕೋ ಓನರ್ ಆಗಿ ರಿಲೀಸ್ ಮಾಡಿದೆ.
TC ಸ್ಕಾರ್ಚರ್ಸ್ ತಂಡ ಮಾಲಿಂಗ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಲಕ್ಷ್ಮೀಶ ಬಾಳಿಗ ಅವರನ್ನು ತಂಡದ ಐಕಾನ್ ಆಟಗಾರನನ್ನಾಗಿ ಆಯ್ಕೆ ಮಾಡುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಉಳಿದಂತೆ ಸುಜಿತ್ ಬಾಳಿಗ ತಂಡದ ಮಾಲೀಕರಾದರೆ, ಆದಿತ್ಯ ಭಂಡಾರಿ, ಆದಿತ್ಯ ಭಟ್ ಸಹ ಮಾಲೀಕರಾಗಿ ತಂಡದಲ್ಲಿ ಇರಲಿದ್ದಾರೆ.
ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಹಾರ್ಡ್ ಹಿಟ್ಟರ್ ಪುಂಡಲೀಕ ಪೈ ಅವರನ್ನು ಟ್ರೇಡಿಂಗ್ ಮೂಲಕ ಐಕಾನ್ ಪ್ಲೇಯರ್ ಆಗಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇವರನ್ನು ಖರೀದಿಸಲು ಬೇರೆ ಬೇರೆ ತಂಡಗಳು ಮುಂದೆ ಬಂದವು. ಆದರೆ ಅಂತಿಮವಾಗಿ ಪುಂಡಲೀಕ ಪೈ ಕೆ ಯು ಎಸ್ ಸಿ ಪಾಲಾಗಿದ್ದಾರೆ. ಇವರ ಜೊತೆಗೆ ಕ್ರಿಕೆಟ್ ಪ್ರೋತ್ಸಾಹಕ ಕೊಂಚಾಡಿ ನರಸಿಂಹ ಶೆಣೈ ಮತ್ತು ನಾಗೇಶ್ ಶೆಣೈ ತಂಡದ ಮಾಲೀಕರುಗಳಾಗಿ ಮತ್ತು ಮನೋಜ್ ಮಲ್ಯ ಕೂಡ ಸಹ ಮಾಲೀಕರಾಗಿ ಸೇರಿಕೊಂಡಿದ್ದಾರೆ.
ಆಶ್ರಯ ಯುನೈಟೆಡ್ ತಂಡ ಆಲ್ ರೌಂಡ್ ಆಟಗಾರ ಸುರೇಂದ್ರ ಪೈ (ಸೂರಿ ಸಾಸ್ತಾನ ) ಅವರನ್ನು ತಂಡದಲ್ಲಿ ಐಕಾನ್ ಪ್ಲೇಯರ್ ಆಗಿ ಕೈಹಿಡಿಯುವ ತೀರ್ಮಾನ ಮಾಡಿಕೊಂಡಿದೆಯಂತೆ. ರಮೇಶ್ ಹೆಗ್ಡೆ ಟೀಮ್ ಓನರ್ ಮತ್ತು ಅಭಿಷೇಕ್ ಶೆಣೈ ಕೋ ಓನರ್ ಆಗಿದ್ದಾರೆ.
ಕಾರ್ತಿಕ್ XI ಅವರನ್ನು ಯುವ ಸವ್ಯಸಾಚಿ ಗೌತಮ್ ಪೈ ಅವರನ್ನು ಐಕಾನ್ ಆಟಗಾರನಾಗಿ ತನ್ನಲ್ಲಿ ಉಳಿಸಿಕೊಂಡಿದೆ. ಇವರ ಜೊತೆಗೆ ಕವಿತಾ ಮಲ್ಯ ಅವರನ್ನು ಓನರ್ ಆಗಿ ಹಾಗೂ ವಿನಾಯಕ ಮಹಾಲೆ ಸಹ ಮಾಲೀಕರಾಗಿ ಕಾರ್ತಿಕ್ XI ರಿಲೀಸ್ ಮಾಡಿದೆ.
ಆರ್. ಕೆ ಸ್ಟ್ರೈಕರ್ಸ್ ತಂಡ , ಐಕಾನ್ ಆಟಗಾರನಾಗಿ ಎಂ ರಾಧಾ ಕೃಷ್ಣ ಅವರನ್ನು ರಿಲೀಸ್ ಮಾಡಲಿದೆ. ಎಂ ರಾಮನಾಥ ಶೆಣೈ ಮಾಲೀಕರಾಗಿ ತಂಡದಲ್ಲಿ ಇರಲಿದ್ದಾರೆ. ಗುರುರಾಜ್ ಪೈ ಮತ್ತು ಪ್ರಮೋದ್ ಶೆಣೈ ತಂಡದ ಸಹ ಮಾಲೀಕರುಗಳು.
ಸುರೇಶ್ ಭಟ್ ಮುಲ್ಕಿ
ಸ್ಫೋರ್ಟ್ಸ್ ಕನ್ನಡ ಪ್ರತಿನಿಧಿ
*****ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ ನ್ನು ಅನುಸರಿಸಿ ಮತ್ತು ಲೈವ್ ಸ್ಟ್ರೀಮಿಂಗ್ ಗಾಗಿ 6363022576 ಅಥವಾ 9141867683 ನ್ನು ಸಂಪರ್ಕಿಸಿ*****