ವೈದಿಕ ಕ್ರೀಡೋತ್ಸವ ಸಮಿತಿ 5ನೇ ವರ್ಷದ ಪ್ರಯುಕ್ತ ಜನವರಿ 20 ರಿಂದ ಇಲ್ಲಿನ ಬರಿಮಾರು ಮಹಾಮಾಯಾ ಮೈದಾನದಲ್ಲಿ ಜಿ.ಎಸ.ಬಿ ಸಮಾಜದ ವೈದಿಕರಿಗಾಗಿ ಎರಡು ದಿನಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ.
ಪಂದ್ಯಾವಳಿಯು ಜನವರಿ 20-21 ರಂದು ಶನಿವಾರ – ಆದಿತ್ಯವಾರ , ದಶಮಿ-ಏಕಾದಶಿ ಯಂದು ಹಗಲು ಮತ್ತು ರಾತ್ರಿಯಲ್ಲಿ ನಡೆಯಲಿದೆ.
ಈ ವಿಷಯ ತಿಳಿಸಿದ ಸಮಿತಿಯ ಅಧ್ಯಕ್ಷ ಪಂಡಿತ್ ಕಾಶಿನಾಥ ಆಚಾರ್ಯ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ, ಅವರಿಗೆ ಊಟ ಮತ್ತು ವಸತಿ ಒದಗಿಸಲಾಗುವುದು. ವಿಜೇತ ತಂಡಗಳಿಗೆ ಟ್ರೋಫಿಯೊಂದಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಈಗಾಗಲೇ 55 ಆಟಗಾರರ ನೋಂದಣಿ ಪ್ರಕ್ರಿಯೆ ಮುಕ್ತಾಯ ಗೊಂಡಿದ್ದು. ಜನವರಿ 7 ಏಕಾದಶಿಯಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಪಂದ್ಯಾವಳಿಯಲ್ಲಿ ಭಾಗವಹಿಸುವ 6 ತಂಡಗಳ ವಿವರಗಳು ಹೀಗಿವೆ:
1.ರಾಕಿಂಗ್ ವೈದಿಕ್ಸ್ ಮುಂಬೈ
ನಾಯಕ- ಅರ್ಜುನ್ ಭಟ್ ಮುಂಬೈ
ಐಕಾನ್ – ಅಜಿತ್ ಭಟ್ ಮುಂಬೈ
2. ವೀರ ವೆಂಕಟೇಶ ವೈದಿಕ್ಸ್
ನಾಯಕ – ಗಣೇಶ್ ಭಟ್ ಕೊಂಚಾಡಿ
ಐಕಾನ್ – ನಾಗೇಶ್ ಭಟ್ ಮಂಗಳೂರು
3. ವೈದಿಕ್ ಸೂಪರ್ ಜೈಂಟ್ಸ್
ನಾಯಕ- ರಮೇಶ್ ಭಟ್ ಉಡುಪಿ
ಐಕಾನ್ – ಮಹೇಶ್ ಭಟ್ ಪುತ್ತೂರು
4. ಭಟ್ ಜಿ’ಸ್ ಸೂಪರ್ ಕಿಂಗ್ಸ್
ನಾಯಕ- ಸುಧೇಶ್ ಭಟ್ ಮೂಡುಬಿದಿರೆ
ಐಕಾನ್ – ಉದಯ ಭಟ್ ನಾಯ್ಕನಕಟ್ಟೆ
5. ವೀರ ವೈದಿಕ್ಸ್ ಮಂಗಳೂರು
ಕ್ಯಾಪ್ಟನ್ – ವಿಟ್ಟಲ್ ಭಟ್ ಮಂಗಳೂರು
ಐಕಾನ್ – ಗೋವರ್ಧನ್ ಭಟ್ ಬೆಳಗಾವಿ
6. ಮಹಾಮಾಯಾ ಕ್ರಿಕೆಟರ್ಸ್ ಬರಿಮಾರು
ಕ್ಯಾಪ್ಟನ್ – ರಾಕೇಶ್ ಪ್ರಭು ಬರಿಮಾರು
ಐಕಾನ್ – ಸಾತ್ವಿಕ್ ಪ್ರಭು
ಅತಿ ಹೆಚ್ಚು ವೈದಿಕರು ಬರಿಮಾರು ಕ್ರೀಡಾಂಗಣದಲ್ಲಿ ವೈದಿಕ ಕ್ರೀಡೋತ್ಸವ -2024 ( season-5)ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಆಡಲು ಮತ್ತು ವೀಕ್ಷಿಸಲು ಆಗಮಿಸಿ ಭಾಗವಹಿಸಲಿದ್ದಾರೆ.
ಸುರೇಶ್ ಭಟ್ ಮುಲ್ಕಿ
ಸ್ಫೋರ್ಟ್ಸ್ ಕನ್ನಡ
*****ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ ನ್ನು ಅನುಸರಿಸಿ ಮತ್ತು ಲೈವ್ ಸ್ಟ್ರೀಮಿಂಗ್ ಗಾಗಿ 6363022576 ಅಥವಾ 9141867683 ನ್ನು ಸಂಪರ್ಕಿಸಿ*****