ಕ್ರಿಕೆಟ್ಒಳಲಂಕೆ ಪ್ರೀಮಿಯರ್ ಲೀಗ್ 2023: ಹರಾಜಿಗೂ ಮುನ್ನ ಎಲ್ಲಾ 12 ಫ್ರಾಂಚೈಸಿ...

ಒಳಲಂಕೆ ಪ್ರೀಮಿಯರ್ ಲೀಗ್ 2023: ಹರಾಜಿಗೂ ಮುನ್ನ ಎಲ್ಲಾ 12 ಫ್ರಾಂಚೈಸಿ ಬಿಡುಗಡೆ ಮಾಡಿದ ಐಕಾನ್ ಆಟಗಾರರ ಪಟ್ಟಿ ಇಲ್ಲಿದೆ

-

- Advertisment -spot_img
ಒಳಲಂಕೆ ಪ್ರೀಮಿಯರ್ ಲೀಗ್  ಫ್ರಾಂಚೈಸಿಗಳು ಅಧಿಕೃತವಾಗಿ ಐಕಾನ್ ಆಟಗಾರರನ್ನು ಬಿಡುಗಡೆ ಮಾಡಿದ ಬಗ್ಗೆ ಮಾಹಿತಿ ಹೊರಹಾಕಿದೆ.
ಒಳಲಂಕೆ ಪ್ರೀಮಿಯರ್ ಲೀಗ್ ಟೂರ್ನಿ 2023ಕ್ಕೆ 12  ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಶುರುಮಾಡಿಕೊಂಡಿವೆ. ಇದೇ ಡಿಸೆಂಬರ್ 09 ಮತ್ತು 10 ರಂದು ಮೂಲ್ಕಿಯ  ವಿಜಯ ಕಾಲೇಜು  ಮೈದಾನದಲ್ಲಿ ಜಿ.ಎಸ್. ಬಿ   ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದ್ದು ಇದಕ್ಕೂ ಮುನ್ನ ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್  ಎಲ್ಲಾ ತಂಡಗಳಿಗೆ ತಮಗೆ ಅಗತ್ಯವಿರುವ  ಐಕಾನ್ ಆಟಗಾರರನ್ನು ಬಿಡುಗಡೆ ಮಾಡಲು ಹೇಳಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ತಂಡಗಳ ಸಂಪೂರ್ಣ ಚಿತ್ರಣ ಸಿಗಲಿದೆ. ಯಾವ ಫ್ರಾಂಚೈಸಿ ಯಾವ ಆಟಗಾರರನ್ನು ಐಕಾನ್ ಪ್ಲೇಯರ್ ಆಗಿ ಆಯ್ಕೆ ಮಾಡಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ ಕೊಂಕಣ್ ಎಕ್ಸ್ಪ್ರೆಸ್ ಕೋಟೇಶ್ವರ  ತನ್ನ ತಂಡದಲ್ಲಿ ಆಲ್ರೌಂಡ್ ಆಟಗಾರ ಎಂದು ವ್ಯಾಪಕವಾಗಿ ಪರಿಗಣಿಸಲ್ಪಡುವ  ಸುರೇಂದ್ರ ಪೈ ಸಾಸ್ತಾನ (ಸೂರಿ ಸಾಸ್ತಾನ)  ಇವರನ್ನು ಐಕಾನ್ ಆಟಗಾರನನ್ನಾಗಿ ಬಿಡುಗಡೆ ಮಾಡಿದೆ ಎಂದು ವರದಿ ಆಗಿದೆ. ಕೊಂಕಣ್  ಎಕ್ಸ್ ಪ್ರೆಸ್ ಕೋಟೇಶ್ವರದಲ್ಲಿ ಗಣೇಶ್ ಕಿಣಿ ಬೆಳ್ವೆ  ತಂಡದ ಮಾಲೀಕರಾಗಿ, ಅನಂತ ಪೈ ಮತ್ತು ಸತೀಶ್ ಕಾಮತ್ ಅವರನ್ನು ಸಹ ಮಾಲೀಕರಾಗಿ ಕೈ ಹಿಡಿದಿದೆ.
ಡೆಡ್ಲಿ ಪ್ಯಾಂಥರ್ಸ್ (ರಿ) ತಂಡ ಹೊಡೆಬಡಿಯ ದಾಂಡಿಗ, ಆಕ್ರಮಣಕಾರಿ ಆಟಗಾರ ವಿಘ್ನೇಶ್ ಶೆಣೈ ಯವರನ್ನು ಐಕಾನ್ ಆಟಗಾರನನ್ನಾಗಿ  ಬಿಡುಗಡೆ ಮಾಡಿದೆ. ಇದರಲ್ಲಿ ಮಾಲೀಕರಾಗಿ ಸುಮನ್ ಕಿಣಿ ಕೂಡ ಇರುವುದು ಅಚ್ಚರಿ ಎನಿಸಿದೆ.
ಇತ್ತ  ಕೆ ಪದ್ಮನಾಭ ಕಾಮತ್ ಮಾಲಕತ್ವದ ಕೆದಿಂಜೆ ರಾಯಲ್ ಟೈಗರ್ಸ್  ತಂಡ ದೀಪಕ್ ಕಾಮತ್ ರನ್ನು ಐಕಾನ್ ಪ್ಲೇಯರ್ ಆಗಿ  ಹಿಡಿದಿದೆ.
ಮಲ್ಪೆ ಯುನೈಟೆಡ್ ತಂಡ ಆಲ್ ರೌಂಡ್ ಆಟಗಾರ ವರುಣ್ ಅವರನ್ನು ತಂಡದಲ್ಲಿ ಐಕಾನ್ ಪ್ಲೇಯರ್ ಆಗಿ  ಕೈಹಿಡಿಯುವ ತೀರ್ಮಾನ ಮಾಡಿಕೊಂಡಿದೆಯಂತೆ. ಸುಬ್ರಹ್ಮಣ್ಯ ಭಂಡಾರ್ಕರ್ ಟೀಮ್ ಓನರ್ ಮತ್ತು ಅನಿಲ್ ವಿ ಕಾಮತ್  ಕೋ ಓನರ್ ಆಗಿದ್ದಾರೆ. ಅಂತೆಯೆ ಬಿ ಪವನ್ ಕಿಣಿ  ಹಾಗೂ ಜಯಂತ್ ನಾಯಕ್ ಕೂಡ ಕೋ ಓನರ್ ಆಗಿದ್ದಾರೆ.
ಇತ್ತ ಪೇಟೆ  ಶ್ರೀ ವೆಂಕಟರಮಣ ಕ್ರಿಕೆಟರ್ಸ್ ಆಯ್ಕೆ ಮಾಡಿದ ಐಕಾನ್ ಆಟಗಾರ ಭರ್ಜರಿ ಹೊಡೆತಗಳನ್ನು ನೀಡಬಲ್ಲ ದಾಂಡಿಗ ಪದ್ಮನಾಭ ಪೈ ಕೋಟ. ವಿನಾಯಕ ಪೈ ತಂಡದ ಮಾಲೀಕರು  ಹಾಗೂ ಲಕ್ಷ್ಮೀಶ ಪ್ರಭು  ರನ್ನು ಕೋ ಓನರ್ ಆಗಿ  ರಿಲೀಸ್ ಮಾಡಿದೆ.
ಕೊಡಿಯಾಲ್ ಸೂಪರ್ ಕಿಂಗ್ಸ್ , ಐಕಾನ್ ಆಟಗಾರನಾಗಿ ಸವ್ಯಸಾಚಿ ಆಟಗಾರ ಗಣೇಶ್ ನಾಯಕ್ ಕೋಟ ಅವರನ್ನು ರಿಲೀಸ್ ಮಾಡಲಿದೆ. ಎಂ ಅಜಿತ್ ಪೈ ಮಾಲೀಕರಾಗಿ ತಂಡದಲ್ಲಿ ಇರಲಿದ್ದಾರೆ.  ಉಳಿದಂತೆ  ಪಿ ಗೌತಮ್ ಶೆಣೈ,  ಯು  ಚೈತನ್ಯ ನಾಯಕ್  ಕೆ ಉಲ್ಲಾಸ್ ಪ್ರಭು ಇವರುಗಳು ಸಹ ಮಾಲೀಕರಾಗಿ ತಂಡದಲ್ಲಿ ಇರಲಿದ್ದಾರೆ.
ವೀರಾಂಜನೇಯ ಕ್ರಿಕೆಟರ್ಸ್ ಕಾಪು  ತಂಡ ಅಜಯ್ ನಾಯಕ್  ಅವರನ್ನು ತಂಡದಲ್ಲಿ ಐಕಾನ್ ಪ್ಲೇಯರ್ ಆಗಿ  ಆಯ್ಕೆ  ಮಾಡುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.  ವಿನಾಯಕ್ ನಾಯಕ್  ಟೀಮ್ ಓನರ್ ಮತ್ತು ಚಂದ್ರಕಾಂತ್,  ಮುರಳಿ ಕಾಮತ್   ಕೋ ಓನರ್ ಆಗಿದ್ದಾರೆ.
ರೈಸಿಂಗ್ ಸ್ಟಾರ್ಸ್ ಮಂಗಳೂರು ತಂಡ ಅಚ್ಚರಿ ಎಂಬಂತೆ ಎಡಗೈ  ಆಟಗಾರ ಪ್ರಜ್ವಲ್ ಶೆಣೈ ಯನ್ನು ತಂಡಕ್ಕೆ ಐಕಾನ್ ಆಟಗಾರನಾಗಿ ಕೈ ಹಿಡಿಯಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಂ. ದಿನೇಶ್ ಪೈ, ಎಂ. ಸುಧೀರ್ ಪೈ , ಹಾಗೂ ಎಂ ಕಿರಣ್ ಪೈ ಅವರನ್ನು ತಂಡದ ಮಾಲೀಕರಾಗಿ ಉಳಿಸಿಕೊಂಡಿದೆಯಂತೆ.
ಇತ್ತ ಮಾಲ್ಸಿ ಸ್ಮಾಷರ್ಸ್ ಆಯ್ಕೆ ಮಾಡಿದ ಐಕಾನ್ ಆಟಗಾರ ಭರ್ಜರಿ ಹೊಡೆತಗಳನ್ನು ನೀಡಬಲ್ಲ ಹಾರ್ಡ್ ಹಿಟ್ಟರ್  ಪುಂಡಲೀಕ ಪೈ. ಅವರನ್ನು ಟ್ರೇಡಿಂಗ್ ಮೂಲಕ ಐಕಾನ್ ಪ್ಲೇಯರ್ ಆಗಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಮಾಲ್ಸಿ ಸ್ಮಾಷರ್ಸ್ ಯಶಸ್ವಿಯಾಗಿದೆ. ಇವರನ್ನು ಖರೀದಿಸಲು ಬೇರೆ ಬೇರೆ ತಂಡಗಳು ಮುಂದೆ ಬಂದವು. ಆದರೆ ಅಂತಿಮವಾಗಿ ಪುಂಡಲೀಕ ಪೈ ಮಾಲ್ಸಿ ಸ್ಮಾಷರ್ಸ್  ಪಾಲಾಗಿದ್ದಾರೆ.ಚಂದ್ರಕಾಂತ್ ಶೆಣೈ  ತಂಡದ ಮಾಲೀಕರು  ಹಾಗೂ ನಾಗೇಶ್ ಶಶಾಂಕ್  ರನ್ನು ಕೋ ಓನರ್ ಆಗಿ ರಿಲೀಸ್ ಮಾಡಿದೆ.
ಉಡುಪಿ ಬ್ಲಾಸ್ಟರ್ಸ್  ಹಿರಿಯ ಸವ್ಯಸಾಚಿ ಡಾ. ವಿನೋದ್ ನಾಯಕ್  ಅವರನ್ನು ಐಕಾನ್ ಆಟಗಾರನಾಗಿ  ತನ್ನಲ್ಲಿ ಉಳಿಸಿಕೊಂಡಿದೆ. ಇವರ ಜೊತೆಗೆ ಪ್ರಶಾಂತ್ ಬಾಳಿಗಾ ಅವರನ್ನು ಓನರ್ ಆಗಿ ಹಾಗೂ ಡಾಕ್ಟರ್ ರಾಜೇಶ್ ಭಕ್ತ ಸಹ ಮಾಲೀಕರಾಗಿ ಉಡುಪಿ ಬ್ಲಾಸ್ಟರ್ಸ್  ರಿಲೀಸ್ ಮಾಡಿದೆ.
ಮಹಾರಾಷ್ಟ್ರದ ಆಲ್ಫಾ ಟ್ರೂಪರ್ಸ್ ಮುಂಬೈ ಆಯ್ಕೆ ಮಾಡಿದ ಐಕಾನ್ ಆಟಗಾರ ಭರ್ಜರಿ ಎಸೆತಗಳನ್ನು ನೀಡಬಲ್ಲ  ಬೌಲರ್ ಆದಿತ್ಯ  ಸಖರ್ದಂಡೆ. ಆಶಿಶ್ ಕಾಮತ್  ತಂಡದ ಮಾಲೀಕರು .
ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್  ಆಲ್ ರೌಂಡರ್  ಸೂರಜ್  ಕಾಮತ್   ಅವರನ್ನು ಐಕಾನ್ ಪ್ಲೇಯರ್ ಆಗಿ ಪಡೆದಿದೆ. ಇವರ ಜೊತೆಗೆ ಕ್ರಿಕೆಟ್  ಪ್ರೋತ್ಸಾಹಕ  ರಘುವೀರ್ ಶೆಣೈ ತಂಡದ ಮಾಲೀಕರುಗಳಾಗಿ ಮತ್ತು ರಮೇಶ್ ಶೆಣೈ ದಿನೇಶ್ ಶೆಣೈ ಕೂಡ ಸಹ ಮಾಲೀಕರಾಗಿ ಸೇರಿಕೊಂಡಿದ್ದಾರೆ.
ಸುರೇಶ್ ಭಟ್ ಮುಲ್ಕಿ
ಸ್ಫೋರ್ಟ್ಸ್ ಕನ್ನಡ ಪ್ರತಿನಿಧಿ
*****ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ ನ್ನು ಅನುಸರಿಸಿ ಮತ್ತು ಲೈವ್ ಸ್ಟ್ರೀಮಿಂಗ್ ಗಾಗಿ 6363022576 ಅಥವಾ  9141867683 ನ್ನು ಸಂಪರ್ಕಿಸಿ*****

LEAVE A REPLY

Please enter your comment!
Please enter your name here

1 × two =

Latest news

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್ ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ತುಮಕೂರು  ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ತುಮಕೂರು ಇವರ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಡಾ....

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ! ಬೆಂಗಳೂರು:  ಪ್ರತೀ ಬಾರಿಯಂತೆ ಈ ವರ್ಷದ ‘Cheftalk Premier League – Season 6’ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 13...

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು! ಮಲ್ಪೆ, ಮೀನುಗಾರಿಕಾ ಬಂದರು: ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಮಲ್ಪೆ ಇವರ ವತಿಯಿಂದ,...

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”   ಉಡುಪಿ: ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ (Kinnimulki Sports Club) ವತಿಯಿಂದ ಪ್ರತಿಷ್ಠಿತ ಕಿನ್ನಿಮೂಲ್ಕಿ ಸೂಪರ್...
- Advertisement -spot_imgspot_img

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ! 

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ!  ಕ್ರಿಕೆಟ್ ಲೋಕದ ಅಭಿಮಾನಿಗಳನ್ನು ರಂಜಿಸಿದ ಗೆಳೆಯರು ಕಪ್ 2025 ಟೂರ್ನಮೆಂಟ್...

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ. ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ...

Must read

- Advertisement -spot_imgspot_img

You might also likeRELATED
Recommended to you