14.6 C
London
Monday, September 9, 2024
Homeಕ್ರಿಕೆಟ್ಕರ್ನಾಟಕ ಕ್ರಿಕೆಟ್ ತಂಡವನ್ನು ತೊರೆಯಲಿದ್ದಾರಾ ಕೃಷ್ಣಪ್ಪ ಗೌತಮ್?

ಕರ್ನಾಟಕ ಕ್ರಿಕೆಟ್ ತಂಡವನ್ನು ತೊರೆಯಲಿದ್ದಾರಾ ಕೃಷ್ಣಪ್ಪ ಗೌತಮ್?

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಗಣೇಶ್ ಸತೀಶ್, ಅಮಿತ್ ವರ್ಮಾ, ರಾಬಿನ್ ಉತ್ತಪ್ಪ, ಆರ್.ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ವಿ ಸಿದ್ಧಾರ್ಥ್, ಆರ್.ಸಮರ್ಥ್.

ಕಳೆದ 8ರಿಂದ 10 ವರ್ಷಗಳಲ್ಲಿ ಕರ್ನಾಟಕ ತಂಡವನ್ನು ತೊರೆದು ಅನ್ಯರಾಜ್ಯಕ್ಕೆ ವಲಸೆ ಹೋಗಿರುವ ನಮ್ಮ ಕ್ರಿಕೆಟಿಗರಿವರು.

ಈ ಸಾಲಿಗೆ ಈ ವರ್ಷ ಕರ್ನಾಟಕದ ಹಿರಿಯ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಕೂಡ ಸೇರಿದರೆ ಅಚ್ಚರಿ ಪಡಬೇಕಿಲ್ಲ..!

ಕೆ.ಗೌತಮ್ ಕರ್ನಾಟಕ ಕ್ರಿಕೆಟ್ ಕಂಡ ಬಿಗ್ ಹಿಟ್ಟಿಂಗ್ ಆಲ್ರೌಂಡರ್. ಕೆಲವೇ ಕೆಲವು ಓವರ್’ಗಳ ಅಂತರದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಿ ಬಿಡಲ್ಲ ಸಿಡಿಲ ಹೊಡೆತಗಳ ನೀಳಕಾಯದ ತಾಕತ್ತಿನ ಆಟಗಾರ. ಆ ದಿನ ಅವನದ್ದಾದರೆ ಆತನನ್ನು ಕಟ್ಟಿ ಹಾಕುವುದು ಸಾಧ್ಯವೇ ಇಲ್ಲ. ಕರ್ನಾಟಕ ಕಂಡ ಯಶಸ್ವಿ ಆಫ್’ಸ್ಪಿನ್ನರ್ ಕೂಡ ಹೌದು.

ಆದರೆ…
ಇನ್ನು ಮುಂದೆ ಗೌತಮ್’ನನ್ನು ಕರ್ನಾಟಕ ತಂಡದ ಜರ್ಸಿಯಲ್ಲಿ ನೋಡಲು ಸಾಧ್ಯವಾಗದಿದ್ದರೂ ಅದರಲ್ಲಿ ಆಶ್ಚರ್ಯವಿಲ್ಲ. ಕಾರಣ, ಗೌತಮ್ ಕೂಡ ಕರ್ನಾಟಕ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಇನ್ನೂ ಖಚಿತ ಪಟ್ಟಿಲ್ಲ.. ಸ್ವಲ್ಪ ದಿನಗಳಲ್ಲಿ ಈ ಪ್ರಶ್ನೆಗೂ ಉತ್ತರ ಸಿಗಲಿದೆ.

ಅಂದ ಹಾಗೆ, ಕೆ.ಗೌತಮ್ ವಿಚಾರದಲ್ಲಿ ಇಂಥದ್ದೊಂದು ಸುದ್ದಿ ಹರಿದಾಡಲು ಕಾರಣವಿದೆ. ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿಗೆ ಗೌತಮ್’ನನ್ನು ಕರ್ನಾಟಕ ತಂಡದಿಂದ ಕೈಬಿಡಲಾಗಿತ್ತು. ಗೌತಮ್ ಬದಲು ಹೊಸ ಹುಡುಗ ಶಶಿಕುಮಾರ್’ಗೆ ಅವಕಾಶ ನೀಡಲಾಗಿತ್ತು.

– ರಣಜಿ ಟ್ರೋಫಿ 2022-23
9 ಪಂದ್ಯ, 31 ವಿಕೆಟ್, 186 ರನ್

– ರಣಜಿ ಟ್ರೋಫಿ 2021-22
4 ಪಂದ್ಯ, 17 ವಿಕೆಟ್, 75 ರನ್

– ವಿಜಯ್ ಹಜಾರೆ ಟ್ರೋಫಿ 2023-24
9 ಪಂದ್ಯ, 10 ವಿಕೆಟ್, 12 ರನ್ (5 ಇನ್ನಿಂಗ್ಸ್)

– ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ 2023-24
5 ಪಂದ್ಯ, 9 ವಿಕೆಟ್, 29 ರನ್ (2 ಇನ್ನಿಂಗ್ಸ್)

ಇದು ಕರ್ನಾಟಕ ಪರ ಗೌತಮನ ತೀರಾ ಇತ್ತೀಚಿನ ಸಾಧನೆ.. ತಂಡದಿಂದ ಕೈ ಬಿಡುವಷ್ಟು ಸಾಧನೆ ಕಳಪೆಯೇನಿಲ್ಲ.. ಅದರಲ್ಲೂ ರಣಜಿ ಟ್ರೋಫಿ ಟೂರ್ನಿಗಳಲ್ಲಿ ಗೌತಮ್ ಕರ್ನಾಟಕ ತಂಡದ main spinner ಆಗಿದ್ದ. ಆದರೂ ಕಳೆದ ಬಾರಿ ರಣಜಿ ಪಂದ್ಯಗಳನ್ನಾಡುವ ಅವಕಾಶ ಸಿಕ್ಕಿರಲಿಲ್ಲ. ಬಹುಶಃ ವಯಸ್ಸಿನ ಕಾರಣವಿರಬೇಕು.

ಈ ವರ್ಷವೂ ಗೌತಮ್’ಗೆ ರಣಜಿ ತಂಡದಲ್ಲಿ ಅವಕಾಶದ ಭರವಸೆ ಸಿಗದೇ ಇದ್ದರೆ, ಕರ್ನಾಟಕ ಕ್ರಿಕೆಟ್’ಗೆ ಗುಡ್ ಬೈ ಹೇಳುವುದು ಖಚಿತ.

ಕೃಷ್ಣಪ್ಪ ಗೌತಮ್’ಗೆ ಈ ಬಾರಿ ರಣಜಿ ಟ್ರೋಫಿ ಅಷ್ಟೇ ಅಲ್ಲ, ಕರ್ನಾಟಕ ಸೀಮಿತ ಓವರ್’ಗಳ ತಂಡದಲ್ಲೂ (ವಿಜಯ್ ಹಜಾರೆ & ಸೈಯದ್ ಮುಷ್ತಾಕ್ ಅಲಿ ಟಿ20) ಸ್ಥಾನ ಸಿಗುವ ಸಾಧ್ಯತೆಗಳಿಲ್ಲ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ, ಇನ್ನೂ ಖಚಿತ ಪಟ್ಟಿಲ್ಲ.

ರಾಜ್ಯ ಕ್ರಿಕೆಟ್ ಸಂಸ್ಥೆ ಈಗಾಗಲೇ ಹಳಬರನ್ನು ಬಿಟ್ಟು ಹೊಸ ಹುಡುಗರ ಕಡೆ ನೋಡುತ್ತಿದೆ. ಕಳೆದ ವರ್ಷ ಏಳು ಮಂದಿ ಹೊಸ ಆಟಗಾರರು ಕರ್ನಾಟಕ ಪರ ರಣಜಿ ಕ್ರಿಕೆಟ್’ಗೆ debut ಮಾಡಿದ್ದಾರೆ. ಹೊಸಬರ ವಿಚಾರದಲ್ಲಿ #KSCA ಮುಂದಿಟ್ಟಿರುವ ಹೆಜ್ಜೆಯನ್ನು ಹಿಂದಿಡುವ ಸಾಧ್ಯತೆ ಕಡಿಮೆ.

ಒಂದು ರಾಜ್ಯವನ್ನು ತೊರೆದು ಮತ್ತೊಂದು ರಾಜ್ಯದ ಪರ ಆಡಲು ಬಯಸುವ ಆಟಗಾರರು ದೇಶೀಯ ಕ್ರಿಕೆಟ್ ಟೂರ್ನಿ ಆರಂಭವಾಗುವ ಒಂದು ತಿಂಗಳು ಮೊದಲೇ ತಮ್ಮ ತವರು ರಾಜ್ಯದ ಕ್ರಿಕೆಟ್ ಸಂಸ್ಥೆಯಿಂದ NOC ಪಡೆಯಬೇಕಿತ್ತು.

ಆದರೆ ಈಗ ನಿಯಮ ಬದಲಾಗಿದೆ..
ಒಂದು ವೇಳೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಒಬ್ಬ ಆಟಗಾರನಿಗೆ ಅವಕಾಶ ಸಿಗಬೇ ಇದ್ದರೆ, ಆತ ಬೇರೆ ರಾಜ್ಯದ ಪರ ವಿಜಯ್ ಹಜಾರೆ ಟ್ರೋಫಿ ಅಥವಾ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನು ಆಡಬಹುದು. ಇದಕ್ಕಾಗಿ ಆತ ಟೂರ್ನಿ ಆರಂಭಕ್ಕೆ 15 ದಿನಗಳ ಮೊದಲುNOC ಪಡೆಯಬೇಕು.

Latest stories

LEAVE A REPLY

Please enter your comment!
Please enter your name here

one × 4 =