ಕ್ರಿಕೆಟ್“ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು”

“ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು”

-

- Advertisment -spot_img

30 ವರ್ಷಗಳ ಹಿಂದೆ…
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ receptionist ಆಗಿ ಬಂದಿದ್ದ ಹೆಣ್ಣು ಮಗಳು.

ಅದೇ ಹೆಣ್ಣು ಮಗಳೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಮೊದಲ ಮಹಿಳಾ ಪಿಚ್ ಕ್ಯುರೇಟರ್..

ಕ್ರಿಕೆಟ್ ಗಂಧಗಾಳಿಯೇ ಗೊತ್ತಿರದ ಮಹಿಳೆ. ಕ್ರಿಕೆಟ್ ಎಂದರೆ ಬೌಂಡರಿ, ಸಿಕ್ಸರ್ ಅಷ್ಟೇ ಎಂದುಕೊಂಡಿದ್ದಾಕೆ. ಆ ಹೆಣ್ಣು ಮಗಳು ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಆಗಿದ್ದೇ ಒಂದು ರೋಚಕ ಕಥೆ.

ಕಳೆದ 10 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯುರೇಟರ್ ಆಗಿದ್ದ ಜೆಸ್ಸಿ ಮೇಡಂ ಈಗ ಬಿಸಿಸಿಐ ಅಧೀನದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪಿಚ್ ಕ್ಯುರೇಟರ್.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋದಾಗಲೆಲ್ಲಾ ಮೈದಾನದತ್ತ ಒಮ್ಮೆ ಕಣ್ಣು ಹಾಯಿಸದೆ ಬಂದದ್ದು ತೀರಾ ಕಡಿಮೆ. ಆಗೆಲ್ಲಾ ಮೈದಾನದಲ್ಲೊಬ್ಬರು ತಲೆಗೆ ರೌಂಡ್ ಕ್ಯಾಪ್ ಹಾಕಿದ lady ಕಾಣಿಸುತ್ತಿದ್ದರು. ಅವರೇ ಜೆಸಿಂತಾ ಕಲ್ಯಾಣ್.

ಕ್ರಿಕೆಟ್’ನಲ್ಲಿ ಬದುಕು ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಈ ಜೆಸಿಂತಾ ಕಲ್ಯಾಣ್.

ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಹಾರೋಬೆಲೆ ಎಂಬ ಹಳ್ಳಿಯವರು ಜೆಸಿಂತಾ ಕಲ್ಯಾಣ್. ಒಬ್ಬ ಬಡ ರೈತನ ಮಗಳು. 30 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಹೊರಟವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ receptionist ಆಗಿ ಸೇರಿಕೊಳ್ಳುತ್ತಾರೆ. ಅಲ್ಲಿಂದ ಕೆಲ ವರ್ಷಗಳಲ್ಲಿ KSCA admistration sectionಗೆ ಪ್ರಮೋಷನ್. 2014ರಲ್ಲಿ ಆಗಿನ KSCA ಸೆಕ್ರೆಟರಿ ಬ್ರಿಜೇಶ್ ಪಟೇಲ್, ಜೆಸಿಂತಾ ಅವರನ್ನು ಕರೆದು ಒಂದು ಮಾತು ಹೇಳುತ್ತಾರೆ.

“ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಿದ್ದು ಸಾಕು, ಮೈದಾನದಲ್ಲಿ ಕೆಲಸ ಮಾಡುವ ಗ್ರೌಂಡ್ಸ್’ಮನ್’ಗಳ man management ಜವಾಬ್ದಾರಿ ನೋಡಿಕೋ’’ ಎಂದು.

ಆ ದಿನ ಒಲ್ಲದ ಮನಸ್ಸಿನಿಂದಲೇ ಚಿನ್ನಸ್ವಾಮಿ ಮೈದಾನಕ್ಕೆ ಹೆಜ್ಜೆ ಇಡುತ್ತಾರೆ ಜೆಸಿಂತಾ.
‘’ಅವತ್ತು ಇಟ್ಟ ಹೆಜ್ಜೆ ಮುಂದಿನ ಚರಿತ್ರೆಯೊಂದಕ್ಕೆ ಮುನ್ನುಡಿ’’ ಎಂದು ಆಕೆಗೇನು ಗೊತ್ತಿತ್ತು..?

ಚಿನ್ನಸ್ವಾಮಿ ಮೈದಾನದ ಗ್ರೌಂಡ್ಸ್’ಮನ್’ಗಳನ್ನು ನೋಡಿಕೊಳ್ಳುವ ಕೆಲಸ ಅದು. AC ರೂಮ್’ನಲ್ಲಿ ಕೆಲಸ ಮಾಡುತ್ತಿದ್ದವರು, ಬಿರು ಬಿಸಿಲಿನ ಹೊಡೆತದಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿಗೆ ಒಗ್ಗಿಕೊಳ್ಳಲು 6 ತಿಂಗಳು ಹಿಡಿದವು.

ಕೆಲಸ ಮಾಡುತ್ತಾ ಮಾಡುತ್ತಾ ಚಿನ್ನಸ್ವಾಮಿ ಕ್ರೀಡಾಂಗಣದ ಆಗಿನ ಮುಖ್ಯ ಪಿಚ್ ಕ್ಯುರೇಟರ್ ಪ್ರಶಾಂತ್ ರಾವ್ ಅವರ ಬಳಿ ಪಿಚ್ ಸಿದ್ಧಗೊಳಿಸುವ ಕಲೆ ಮತ್ತು ಕೌಶಲ್ಯಗಳನ್ನು ಕಲಿಯಲಾಂಭಿಸಿದರು ಜೆಸಿಂತಾ. ಇವರಿಗೆ ಕ್ಯುರೇಟಿಂಗ್ ಕಲೆಯನ್ನು ಕಲಿಸಿದ ಗುರು Prashanth Rao

ಪಿಚ್ ಸಿದ್ಧ ಪಡಿಸುವ ಕೆಲಸವೆಂದರೆ ಅದೊಂದು ತಪಸ್ಸು. ಪ್ರತೀ ದಿನ ಗಂಟೆಗಟ್ಟಲೆ ಶ್ರಮ ಕೇಳುವ ಕೆಲಸವದು. ಜೆಸಿಂತಾ ಶ್ರಮಜೀವಿಯಾಗಿ ಬಿಟ್ಟರು. ಕ್ಯುರೇಟಿಂಗ್ ಕಲೆಯನ್ನು ಕರಗತ ಮಾಡಿಕೊಂಡವರು 2018ರಲ್ಲಿ ಬಿಸಿಸಿಐ curatorship exam ಬರೆದು ಅಧಿಕೃತವಾಗಿ ಪಿಚ್ ಕ್ಯುರೇಟರ್ ಎನಿಸಿದರು.

ಇದೇ ವರ್ಷ ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ #wplಗೆ ಅಷ್ಟೂ ಪಿಚ್’ಗಳನ್ನು ಸಿದ್ಧಪಡಿಸಿದವರು ಇವರೇ. ಮಧ್ಯೆ ಒಂದಷ್ಟು ರಣಜಿ ಟ್ರೋಫಿ ಪಂದ್ಯಗಳಿಗೆ ಕ್ಯುರೇಟರ್ ಆಗಿ ಕೆಲಸ ಮಾಡಿದ ಅನುಭವವೂ ಸಿಕ್ಕಿತ್ತು.

ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಎಂದು ಕರೆಸಿಕೊಂಡವರು ಈಗ National Cricket Academyಯ ಕ್ಯುರೇಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇವತ್ತು NCAಗೆ ಹೋದಾಗ ಸಿಕ್ಕಿದರು.

‘’ಏನ್ ಜೆಸ್ಸಿ ಮೇಡಂ ನೀವಿಲ್ಲಿ ಎಂದು ಕೇಳಿದೆ. ಇನ್ನು ನಾನು ಇಲ್ಲೇ’’ ಎಂದರು. ತೊಟ್ಟಿದ್ದ ಜರ್ಸಿಯ ಮೇಲೆ ಮಿಂಚುತ್ತಿದ್ದ NCA ಲಾಂಛನ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿತ್ತು.

LEAVE A REPLY

Please enter your comment!
Please enter your name here

seventeen − one =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you