ಕ್ರಿಕೆಟ್ಕೋಟ ಮೊಗವೀರ ಪ್ರೀಮಿಯರ್ ಲೀಗ್ (KMPL) ಸೀಸನ್–1 ಡಿಸೆಂಬರ್ 27–28ರಂದು ;...

ಕೋಟ ಮೊಗವೀರ ಪ್ರೀಮಿಯರ್ ಲೀಗ್ (KMPL) ಸೀಸನ್–1 ಡಿಸೆಂಬರ್ 27–28ರಂದು ; ಮೊಗವೀರ ಟ್ರೋಫಿ 2025ಕ್ಕೆ ಅದ್ಧೂರಿ ಚಾಲನೆ

-

- Advertisment -spot_img

ಕೋಟ ಮೊಗವೀರ ಪ್ರೀಮಿಯರ್ ಲೀಗ್ (KMPL) ಸೀಸನ್–1 ಡಿಸೆಂಬರ್ 27–28ರಂದು 

ಮೊಗವೀರ ಟ್ರೋಫಿ 2025ಕ್ಕೆ ಅದ್ಧೂರಿ ಚಾಲನೆ

ಕೋಟ ಮೊಗವೀರ ಯುವ ಸಂಘಟನೆಯ (ರಿ.) ಉಡುಪಿ ಜಿಲ್ಲೆ, ಕೋಟ ಶಾಖೆಯ  ಆಶ್ರಯದಲ್ಲಿ ಕೋಟ ಮೊಗವೀರ ಪ್ರೀಮಿಯರ್ ಲೀಗ್ – 2025 (KMPL Season–1) ಎಂಬ ಹೆಸರಿನಲ್ಲಿ ಮೊಗವೀರ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದ್ದು, ಪಂದ್ಯಾವಳಿ ಡಿಸೆಂಬರ್ 27 ಮತ್ತು 28, 2025ರಂದು ನಡೆಯಲಿದೆ.

ಒಟ್ಟು 12 ತಂಡಗಳು  ಈ ಪ್ರತಿಷ್ಠಿತ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಮೊಗವೀರ ಯುವ ಸಂಘಟನೆ ಕೋಟ ವ್ಯಾಪ್ತಿಯ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಮೊಗವೀರ ಟ್ರೋಫಿ 2025 ಟೂರ್ನಮೆಂಟ್‌ನಲ್ಲಿ ವಿಜೇತ ತಂಡಕ್ಕೆ ₹70,777 ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹50,555 ನಗದು ಬಹುಮಾನ ನೀಡಲಾಗುತ್ತದೆ. ಇದಲ್ಲದೆ, ಉತ್ತಮ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳು ಹಾಗೂ ವಿಶೇಷ ಗೌರವಗಳನ್ನೂ ನೀಡಲಾಗುವುದು.

ಲೀಗ್ ಪಂದ್ಯಾವಳಿ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರೌಢ ಶಾಲಾ ಆಟದ ಮೈದಾನದಲ್ಲಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಲಿದೆ.

ಈ ಟೂರ್ನಮೆಂಟ್‌ ರಂಜಿತ್ ಕುಮಾರ್ ಬಾರಿಕೇರಿ, ಪ್ರವೀಣ್ ಕುಂದರ್, ಕೋಟ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು, ಕೋಟ ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಘಟನೆಯ ಹೊಣೆ ಹೊತ್ತಿದ್ದಾರೆ.

ಕೋಟ ಹಾಗೂ ಸುತ್ತಮುತ್ತಲಿನ ಮೊಗವೀರ ಯುವ ಸಂಘಟನೆ ಕೋಟ ವ್ಯಾಪ್ತಿಯ ಕ್ರಿಕೆಟ್ ಪ್ರೇಮಿಗಳಲ್ಲಿ ಈ ಲೀಗ್‌ ಬಗ್ಗೆ ಅಪಾರ ನಿರೀಕ್ಷೆ ಮೂಡಿದ್ದು, KMPL Season–1 ಸ್ಥಳೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

19 − six =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you