Home ಕ್ರಿಕೆಟ್ ಟೀಕಾಕಾರರಿಗೆ ಆಟದಿಂದಲೇ ಉತ್ತರ ಕೊಟ್ಟ ರಾಹುಲ್!

ಟೀಕಾಕಾರರಿಗೆ ಆಟದಿಂದಲೇ ಉತ್ತರ ಕೊಟ್ಟ ರಾಹುಲ್!

ಟೀಕಾಕಾರರಿಗೆ ಆಟದಿಂದಲೇ ಉತ್ತರ ಕೊಟ್ಟ ರಾಹುಲ್!

“ಆತ ಭಾರತ ಪರ ಆಡಲು ಲಾಯಕ್ಕಿಲ್ಲ, ಆತ ಅನ್ ಫಿಟ್.. ಆತನಿಗೆ ಆಟವೇ ಗೊತ್ತಿಲ್ಲ..”. ಕೆ.ಎಲ್ ರಾಹುಲ್ ವಿರುದ್ಧ ಕೇಳಿ ಬಂದ ಟೀಕೆಗಳು ಒಂದಾ, ಎರಡಾ..? ಹೊರಗಿನವರು ಬೇಡ, ನಮ್ಮವರೇ ನಮಗೆ ಶತ್ರುಗಳು ಎಂಬಂತೆ, ನಮ್ಮವರಲ್ಲೇ ಕೆಲವರು ನಮ್ಮ ಹುಡುಗನ ಬಗ್ಗೆ ಕೊಂಕು ಮಾತಾಡಿದ್ದರು.

ಆದರೆ ತಮ್ಮ ವಿರುದ್ಧದ ಟೀಕೆಗಳಿಗೆ ರಾಹುಲ್ ಆಟದಿಂದಲೇ ಉತ್ತರಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಕೇವಲ 43 ಎಸೆತಗಳಲ್ಲಿ ಸಿಡಿಲಬ್ಬರದ 68 ರನ್ ಬಾರಿಸಿ ಅಬ್ಬರಿಸಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್’ನಲ್ಲಿ 7 ಬೌಂಡರಿಗಳು ಹಾಗೂ 2 ಸಿಕ್ಸರ್’ಗಳು ಇದ್ದವು.

ಚೆನ್ನೈನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ ರಾಹುಲ್ ಕೇವಲ 16 ರನ್ ಗಳಿಸಿ ಔಟಾಗಿದ್ದರು. ದ್ವಿತೀಯ ಇನ್ನಿಂಗ್ಸ್’ನಲ್ಲಿ 22 ರನ್ ಗಳಿಸಿ ಆಡುತ್ತಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ವಿರುದ್ಧ ಟೀಕಾಸ್ತ್ರಗಳು ನುಗ್ಗಿ ಬಂದಿದ್ದವು. ರಾಹುಲ್ ಬದಲು ಮುಂಬೈನ ಸರ್ಫರಾಜ್ ಖಾನ್ ಅವರನ್ನು ಪ್ಲೇಯಿಂಗ್ ಇಲೆವೆನ್’ನಲ್ಲಿ ಆಡಿಸಬೇಕೆಂಬ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು.

ಆದರೆ ಎಲ್ಲದಕ್ಕೂ ರಾಹುಲ್ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಉತ್ತರ ಕೊಟ್ಟಿದ್ದಾರೆ. ಅಬ್ಬರದ ಆಟವಾಡುವ ಮೂಲಕ ತನ್ನ ಆಟವಿನ್ನೂ ಮುಗಿದಿಲ್ಲ ಎಂಬುದನ್ನು ರಾಹುಲ್ ತೋರಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ವಿರುದ್ಧ ಟೀಕೆ ಮಾಡಿದವರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್’ನಲ್ಲಿ 233 ರನ್’ಗಳಿಗೆ ಆಲೌಟಾದರೆ, ಭಾರತ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 34.4 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ 4ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 26 ರನ್ ಗಳಿಸಿದೆ.

LEAVE A REPLY

Please enter your comment!
Please enter your name here

12 + 1 =

ಟೀಕಾಕಾರರಿಗೆ ಆಟದಿಂದಲೇ ಉತ್ತರ ಕೊಟ್ಟ ರಾಹುಲ್!

“ಆತ ಭಾರತ ಪರ ಆಡಲು ಲಾಯಕ್ಕಿಲ್ಲ, ಆತ ಅನ್ ಫಿಟ್.. ಆತನಿಗೆ ಆಟವೇ ಗೊತ್ತಿಲ್ಲ..”. ಕೆ.ಎಲ್ ರಾಹುಲ್ ವಿರುದ್ಧ ಕೇಳಿ ಬಂದ ಟೀಕೆಗಳು ಒಂದಾ, ಎರಡಾ..? ಹೊರಗಿನವರು ಬೇಡ, ನಮ್ಮವರೇ ನಮಗೆ ಶತ್ರುಗಳು ಎಂಬಂತೆ, ನಮ್ಮವರಲ್ಲೇ ಕೆಲವರು ನಮ್ಮ ಹುಡುಗನ ಬಗ್ಗೆ ಕೊಂಕು ಮಾತಾಡಿದ್ದರು. ಆದರೆ ತಮ್ಮ ವಿರುದ್ಧದ ಟೀಕೆಗಳಿಗೆ ರಾಹುಲ್ ಆಟದಿಂದಲೇ ಉತ್ತರಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಕೇವಲ 43 ಎಸೆತಗಳಲ್ಲಿ ಸಿಡಿಲಬ್ಬರದ 68 ರನ್ ಬಾರಿಸಿ ಅಬ್ಬರಿಸಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್’ನಲ್ಲಿ 7 ಬೌಂಡರಿಗಳು ಹಾಗೂ 2 ಸಿಕ್ಸರ್’ಗಳು ಇದ್ದವು. ಚೆನ್ನೈನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ ರಾಹುಲ್ ಕೇವಲ 16 ರನ್ ಗಳಿಸಿ ಔಟಾಗಿದ್ದರು. ದ್ವಿತೀಯ ಇನ್ನಿಂಗ್ಸ್’ನಲ್ಲಿ 22 ರನ್ ಗಳಿಸಿ ಆಡುತ್ತಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ವಿರುದ್ಧ ಟೀಕಾಸ್ತ್ರಗಳು ನುಗ್ಗಿ ಬಂದಿದ್ದವು. ರಾಹುಲ್ ಬದಲು ಮುಂಬೈನ ಸರ್ಫರಾಜ್

Send this to a friend