Categories
ಕ್ರಿಕೆಟ್

ಕತಾರ್ ನಲ್ಲಿ ಸ್ಪೋಟಕ ಶತಕ ಸಿಡಿಸಿದ ಕನ್ನಡಿಗ ಇಮ್ರಾನ್ ಕೋಟೇಶ್ವರ

ಕತಾರ್ ನಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಅತ್ಯಂತ ವೈಭವೋಪೇತ ಪಂದ್ಯಾಕೂಟ ” ಓರಿಕ್ಸ್ ಫ್ರೆಂಡ್ ಶಿಪ್ ಲೀಗ್” OFL Season 3 ಯ ಮೊದಲ ಲೀಗ್ ಪಂದ್ಯದಲ್ಲಿ ಇಮ್ರಾನ್ ಕೋಟೇಶ್ವರ ಸ್ಪೋಟಕ ಶತಕ ಸಿಡಿಸಿದರು.

ಎದುರಾಳಿ ಬಲಿಷ್ಠ ತಂಡ ಪಾಕಿಸ್ತಾನದ CCRC ತಂಡ 20 ಓವರ್ ಗಳಲ್ಲಿ 201 ರನ್ ಗಳಿಸಿತ್ತು. ಚೇಸಿಂಗ್ ವೇಳೆ ಪ್ರಾರಂಭಿಕ ಹಂತದಲ್ಲಿ ಎಡವಿದ SXI ತಂಡ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಹಂತಕ್ಕೆ ತಲುಪಿತ್ತು.ತಂಡವನ್ನು ಆಧರಿಸಿದ ಇಮ್ರಾನ್ ಸ್ಪೋಟಕ ಶತಕ ದಾಖಲಿಸಿ,ಯು.ಎ.ಇ ಯ ಸಹ ಆಟಗಾರನೊಂದಿಗೆ 193 ರನ್ ಗಳ‌ ದಾಖಲೆಯ ಭಾಗೇದಾರಿಕೆಯ ಆಟವಾಡಿ ತಂಡಕ್ಕೆ ಗೆಲುವನ್ನು ತಂದಿತ್ತರು.

ಕೇವಲ 58 ಎಸೆತಗಳಲ್ಲಿ116 ರನ್ ಗಳಿಸಿದ ಇಮ್ರಾನ್ 11 ಸಿಡಿಲಬ್ಬರದ ಸಿಕ್ಸ್ ಹಾಗೂ 7 ಮನಮೋಹಕ ಬೌಂಡರಿ ದಾಖಲಿಸಿ,ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರದಲ್ಲಿ ಕುಟುಂಬ ಸಮೇತ ವಾಸವಿರುವ ಇವರು ಕತಾರ್ ನ ಹನನ್ ಕ್ರಿಕೆಟ್ ಕ್ಲಬ್ ನ ಖಾಯಂ ಆಟಗಾರ. ಈಗಾಗಲೇ ಇಮ್ರಾನ್ ಬ್ಯಾಟ್ ನಿಂದ 25 ಶತಕಗಳು ದಾಖಲಾಗಿವೆ. 3 ಬಾರಿ ಗಲ್ಫ್ ರಾಷ್ಟ್ರಗಳ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2017 ರಲ್ಲಿ ನಡೆದ “ವ್ಯಾನೂ ಚಾಲೆಂಜರ್ಸ್ ಟ್ರೋಫಿ”ಕತಾರ್ ನಲ್ಲಿ ನಡೆದ ಪಂದ್ಯದಲ್ಲಿ ತಾನೆದುರಿಸಿದ 7 ಎಸೆತಗಳಲ್ಲಿ 7 ಸಿಕ್ಸರ್ ಗಳನ್ನು ಸಿಡಿಸಿ ಮುರಿಯಲಸಾಧ್ಯ ದಾಖಲೆಯನ್ನು ಬರೆದಿರುತ್ತಾರೆ. ಕಳೆದ ತಿಂಗಳಷ್ಟೇ ದುಬೈನಲ್ಲಿ ನಡೆದ ಪಂದ್ಯದಲ್ಲಿ ಇಮ್ರಾನ್ ಶತಕ ದಾಖಲಿಸಿ ಹನನ್ ತಂಡದ ನಂಬುಗೆಯ ಆಟಗಾರರಾಗಿ ಹಲವು ವರ್ಷಗಳಿಂದ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ.

ಪ್ರಾರಂಭದ ದಿನಗಳಲ್ಲಿ ತನ್ನೂರಿನ ತಂಡಗಳಾದ ವಿಜಯ ಕೋಟೇಶ್ವರ,ಅಂಶು ಕೋಟೇಶ್ವರ ತಂಡದ ಪರವಾಗಿ ಆಡುತ್ತಿದ್ದ ಇಮ್ರಾನ್ ಹಲವಾರು ರಾಜ್ಯ ಮಟ್ಟದ ಪಂದ್ಯಾಕೂಟಗಳಲ್ಲಿ ಅಚ್ಚರಿಯ ಗೆಲುವುಗಳನ್ನು ದಾಖಲಿಸಿ,  ಕೋಟೇಶ್ವರದ ಹೆಸರನ್ನು ದಾಖಲೆಯ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದು, ತನ್ನ ಸರಳ,ಸಹೃದಯಿ ವ್ಯಕ್ತಿತ್ವದಿಂದ ರಾಜ್ಯಾದ್ಯಂತ ಸಹಸ್ರಾರು ಅಭಿಮಾನಿಗಳ ಪಡೆಗಳ ಹೃದಯವನ್ನು ಗೆದ್ದಿದ್ದಾರೆ.

(ಮುಂದಿನ ದಿನಗಳಲ್ಲಿ ಇಮ್ರಾನ್ ಕೋಟೇಶ್ವರ ರವರ ಈ ವರೆಗಿನ ದಾಖಲೆಗಳು “ಸ್ಪೋರ್ಟ್ಸ್ ಕನ್ನಡ” ದಲ್ಲಿ ಪ್ರಕಟವಾಗಲಿದೆ)…

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

nineteen + 14 =