ನಾಲ್ಕೇ ನಾಲ್ಕು ದಿನಗಳ ಹಿಂದೆ.. 4 ಓವರ್’ಗಳಲ್ಲಿ 23 ರನ್, ಒಂದು ವಿಕೆಟ್. ಅದೂ ರಾಕ್ಷಸ ದಾಂಡಿಗರ ದಂಡನ್ನೇ ಹೊಂದಿರುವ ಅತಿ ಬಲಿಷ್ಠ #kkr ವಿರುದ್ಧ.
ಇಂಥಾ ಒಂದು spirited ಬೌಲಿಂಗ್ ಪ್ರದರ್ಶನ ತೋರಿದ ಒಬ್ಬ ಬೌಲರ್, ಮುಂದಿನ ಪಂದ್ಯದಲ್ಲಿ ಬೆಂಚ್ ಕಾಯಿಸುವಂತೆ ಮಾಡುವುದು ಸಾಧ್ಯವೇ..? ಕ್ರಿಕೆಟ್ ಬಗ್ಗೆ ಕನಿಷ್ಠ ಜ್ಞಾನವಿರುವ ಯಾರೇ ಆದರೂ ಆ ಆಟಗಾರನನ್ನು ಎರಡನೇ ಯೋಚನೆಯೇ ಇಲ್ಲದೆ ಮುಂದಿನ ಪಂದ್ಯದಲ್ಲಿ ಆಡಿಸಿ ಬಿಡುತ್ತಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ think tankಗೆ ಆ ಕನಿಷ್ಠ ಜ್ಞಾನವೇ ಇದ್ದಂತೆ ಕಾಣುತ್ತಿಲ್ಲ. ಕೆಕೆಆರ್ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ‘ಕನ್ನಡಿಗ’ ವೈಶಾಖ್ ವಿಜಯ್ ಕುಮಾರ್’ನನ್ನು ನಿನ್ನೆ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಆಡಿಸದಿರುವುದು ದೊಡ್ಡ ಅಚ್ಚರಿ.
ಸ್ಲೋ ಬೌನ್ಸರ್ಸ್, knuckle ಬಾಲ್ ಸಹಿತ ಬೌಲಿಂಗ್’ನಲ್ಲಿ ಸಾಕಷ್ಟು variationಗಳನ್ನು ಹೊಂದಿರುವ ವೈಶಾಖ್, RCBಯ ಸ್ಟಾರ್ಟಿಂಗ್ XIನಲ್ಲಿ ಆಡುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಪ್ರತಿಭಾವಂತ ಫಾಸ್ಟ್ ಬೌಲರ್. ಆದರೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ವೈಶಾಖ್’ನನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು. ಹೋಗಲಿ, impact ಆಟಗಾರನನ್ನಾಗಿ ಆಡಿಸಿದರಾ..? ಅದೂ ಇಲ್ಲ.
ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಇರುವುದೇ ಇಬ್ಬರು ಕನ್ನಡಿಗರು. ಒಬ್ಬ ವೈಶಾಖ್, ಇನ್ನೊಬ್ಬ ಮನೋಜ್ ಭಾಂಡಗೆ. ರಾಯಚೂರಿನ ಭಾಂಡಗೆ ಕಳೆದೆರಡು ವರ್ಷಗಳಲ್ಲಿ ಬೆಂಚ್ ಕಾಯಿಸಿದ್ದೇ ಬಂತು. ವೈಶಾಖ್’ನನ್ನಾದರೂ ನಿರಂತರ ಪಂದ್ಯಗಳಲ್ಲಿ ಆಡಿಸುತ್ತಾರೆ ಎಂದರೆ, ಅದೂ ಸುಳ್ಳಾಗಿದೆ. ಚೆನ್ನಾಗಿ ಆಡಿದ ಮೇಲೂ ಕಡೆಗಣಿಸುತ್ತಾರೆ ಎಂದರೆ rcb ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ.
#rcb #rcbfans #rcbforever #ipl #ipl2024 #vyshakvijaykumar #KarnatakaCricket