ಜಯಪ್ರಕಾಶ್ ಗೌಡ (ಜೆ.ಪಿ) ಸಾರಥ್ಯದಲ್ಲಿ ದಾವಣಗೆರೆಯಲ್ಲಿ ಸತತ 12 ವರ್ಷಗಳಿಂದ ರಾಜ್ಯದಲ್ಲಿಯೇ ಅತ್ಯಂತ ವೈಭವೋಪೇತ ಪಂದ್ಯಾವಳಿ ಸಂಘಟಿಸುವ ದಾವಣಗೆರೆಯ ಜನಪ್ರಿಯ ಇಲೆವೆನ್ ತಂಡ ಕಳೆದ 2 ವಾರಗಳಲ್ಲಿ ಸತತ 2 ರಾಷ್ಟ್ರಮಟ್ಟದ ಪ್ರಶಸ್ತಿ ಜಯಿಸಿ ಯಶಸ್ವಿ ತಂಡವಾಗಿ ಮುನ್ನುಗ್ಗುತ್ತಿದೆ.
ಜನವರಿ 3 ರಂದು ನಡೆದ ಹೊಸ ವರ್ಷದ ಪ್ರಯುಕ್ತ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಡಿ.ಎಲ್.ಆರ್ ಕಪ್ ನಲ್ಲಿ ಪ್ರಥಮ ಸ್ಥಾನ ಪಡೆದು ನಗದು ರೂಪದಲ್ಲಿ 33,333 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.
ನಿನ್ನೆ ರವಿವಾರ ನಡೆದ ರಾಜ್ಯ ಮಟ್ಟದ ಪಂದ್ಯಾವಳಿ ಎಸ್.ಎಸ್.ಎಂ ಟ್ರೋಫಿ ಜಯಿಸಿ 1 ಲಕ್ಷ ನಗದು ಬಹುಮಾನ ರೂಪದಲ್ಲಿ ಪಡೆಯಿತು.
ಅನುಭವಿ ಆಟಗಾರ ಹಾಲಪ್ಪ,ಕೆ.ಪಿ.ಎಲ್ ಖ್ಯಾತಿಯ ಮಧು ಪಟೇಲ್ ಅತ್ಯುತ್ತಮ ನಿರ್ವಹಣೆ ತೋರಿ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಜನಪ್ರಿಯ ದಾವಣಗೆರೆಯ ಸಾಧನೆಯ ಬೆನ್ನೆಲುಬಾಗಿ ನಿಂತಿರುವ ಮಾಲೀಕ ಜಯಪ್ರಕಾಶ್ ಗೌಡ ಹಾಗೂ ತಂಡದ ಸಾರಥಿ ಹಾಲಪ್ಪ ರನ್ನು ಸನ್ಮಾನಿಸಲಾಯಿತು.
ಆರ್.ಕೆ.ಆಚಾರ್ಯ ಕೋಟ