ಶಾರದಾ ಸ್ಪೋರ್ಟ್ಸ್ ಇವರ ಆಶ್ರಯದಲ್ಲಿ ಮ್ಯಾಕ್ಲೂರಹಳ್ಳಿ ದಿ.ಶ್ರೀ.ಡಿ.ವೀರಕರಿಯಪ್ಪನವರ ಸ್ಮರಣಾರ್ಥ, ಹಿರಿಯೂರಿನ ಶಾರದಾ ಸ್ಪೋರ್ಟ್ಸ್ ನ ಮಾಲೀಕರಾದ ಜಿ.ರಾಮಕೃಷ್ಣ ಹಾಗೂ ಜಗನ್ನಾಥ ಜ್ಯುವೆಲ್ಲರ್ಸ್ ನ ಮಾಲೀಕರಾದ ಮಹಂತೇಶ್ ಇವರ ಸಾರಥ್ಯದಲ್ಲಿ ಹಿರಿಯೂರಿನ ನೆಹರೂ ಮೈದಾನದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 1 ರ ತನಕ 5 ದಿನಗಳ ಕಾಲ ಹಿರಿಯೂರು ಚಾಂಪಿಯನ್ಸ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಲಿದ್ದು,ತಂಡಗಳ ವಿವರ ಈ ಕೆಳಗಿನಂತಿದೆ
1)ಲಕ್ಕಿ ಸ್ಟಾರ್ ರಾಮಣ್ಣ ಮಾಲೀಕತ್ವದ ಕಿಂಗ್ಸ್ ಆಫ್ ಲಕ್ಕಿ ಸ್ಟಾರ್
2)ಚಿದು ಯಾದವ್ ಮಾಲೀಕತ್ವದ ವಿ.ಕೆ.ರೈಡರ್ಸ್
3)ಜಿ.ಟಿ.ಒಡೆಯರ್ ಮಾಲೀಕತ್ವದ ಹರ್ತಿಕೋಟೆ ಹೀರೋಸ್
4)ಮೊಹಮ್ಮದ್ ನಿಜಾಮುದ್ದೀನ್ ನೇತೃತ್ವದ ಆಜಾದ್ ಟೈಗರ್ಸ್
5)ಆಂಟೋನಿ ಪ್ರದೀಪ್ ಮಾಲೀಕತ್ವದ ಎ.ಪಿ.ಬುಲ್ಸ್
6)ಭರತ್.ಎಸ್.ಆರ್.ಮಾಲೀಕತ್ವದ ರಿಯಲ್ ಫೈಟರ್ಸ್
7)ರಮೇಶ್ ಕುಮಾರ್ ಮಾಲೀಕತ್ವದ ಹಿರಿಯೂರು ಎಮ್.ಡಿ.ವಾರಿಯರ್ಸ್
8)ಜೈರಾಜ್ ಜೈನ್ ಮಾಲೀಕತ್ವದ ರಾಯಲ್ ಅಟ್ಯಾಕರ್ಸ್
9)ವಸಂತ್ ಕುಮಾರ್. ಎಂ.ಮಾಲೀಕತ್ವದ ಫ್ರೆಂಡ್ಸ್ ಗ್ಲಾಡಿಯೇಟರ್ಸ್
10)ಕಿರಣ್@ಧನಂಜಯ್ ಮಾಲೀಕತ್ವದ ರಾಯಲ್ ರೇಂಜರ್ಸ್
11)ನಾಗರಾಜ್ ಮಾಲೀಕತ್ವದ ಕ್ಲಾಸಿಕ್ ಈಗಲ್ಸ್
12)ಬಾನು ಪಾಳೇಗಾರ ಮಾಲೀಕತ್ವದ ಎ.ಬಿ.ಸಿ.ಲೆಜೆಂಡ್ಸ್.
ಪಂದ್ಯಾವಳಿಯ ಚಾಂಪಿಯನ್ಸ್ ತಂಡ 1 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭ ಹಾಗೂ ಡಿಸೆಂಬರ್ 1 ರ ಸಮಾರೋಪ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪಂದ್ಯಾಕೂಟದ ನೇರ ಪ್ರಸಾರ Y.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಲಿದೆ.