ರವಿವಾರ ನವೆಂಬರ್ 22 ರಂದು ಉಡುಪಿಯಬೀಡಿನಗುಡ್ಡೆ ಫ್ರೆಂಡ್ಸ್ (ಬಿ.ಜಿ ಫ್ರೆಂಡ್ಸ್) ತಂಡದ ವತಿಯಿಂದ ಬೀಡಿನಗುಡ್ಡೆ ಅಂಗಣದಲ್ಲಿ ಅಭ್ಯಾಸ ನಡೆಸುವ ಆಟಗಾರರಿಗಾಗಿ ಆಯೋಜಿಸಲಾಗಿದ್ದ 5 ನೇ ಆವೃತ್ತಿಯ”ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020″ ಟ್ರೋಫಿಯನ್ನು ಬಿ.ಜಿ.ಸೂಪರ್ ಕಿಂಗ್ಸ್ ಜಯಿಸಿದೆ.
90 ರ ದಶಕದ ಹಿರಿಯ ಆಟಗಾರರು ಹಾಗೂ ಪ್ರಸ್ತುತ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಕ್ರಿಕೆಟಿಗರ ಸಮ್ಮಿಶ್ರಣದ 4 ತಂಡಗಳು ಭಾಗವಹಿಸಿದ್ದು,ರೋಚಕ ಹಣಾಹಣಿಗಳ ಬಳಿಕ ಫೈನಲ್ ನಲ್ಲಿ
ಬಿ.ಜಿ.ಸೂಪರ್ ಕಿಂಗ್ಸ್ ನ ಸಾಂಘಿಕ ಹೋರಾಟದ ಫಲವಾಗಿ ಎದುರಾಳಿ ಬಿ.ಜಿ.ಅಲೆವೂರು ಫೈಟರ್ಸ್ ತಂಡವನ್ನು ಸೋಲಿಸಿ ಆಕರ್ಷಕ ಟ್ರೋಫಿ ಸಹಿತ 55,555 ನಗದನ್ನು ತನ್ನದಾಗಿಸಿಕೊಂಡಿತು.ದ್ವಿತೀಯ ಸ್ಥಾನಿ ಬಿ.ಜಿ.ಅಲೆವೂರು ಫೈಟರ್ಸ್ 33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಬಹುಮಾನಗಳ ರೂಪದಲ್ಲಿ ಕ್ರಮವಾಗಿ ಫೈನಲ್ ನ ಪಂದ್ಯಶ್ರೇಷ್ಟ ಭರತ್,ಬೆಸ್ಟ್ ಬ್ಯಾಟ್ಸ್‌ಮನ್ ಜೀಶಾನ್,ಬೆಸ್ಟ್ ಬೌಲರ್ ಅರ್ಜುನ್,ಸರಣಿಶ್ರೇಷ್ಟ ಭರತ್,ಗೇಮ್ ಚೇಂಜರ್ ಅರ್ಜುನ್,ಎಮರ್ಜಿಂಗ್ ಪ್ಲೇಯರ್ ಪ್ರಸನ್ನ ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಕಿರಣ್ ಶೆಟ್ಟಿ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕ್ರಿಕೆಟಿಗರು ಹಾಗೂ ಬಿ.ಜಿ.ಫ್ರೆಂಡ್ಸ್ ನ ಗೌರವಾಧ್ಯಕ್ಷರು ಶ್ರೀ ಚಂದ್ರಹಾಸ ಅಡಿಗ,ಶ್ರೀ ವಾದಿರಾಜ ಆಚಾರ್ಯ ಹಾಗೂ ಕೊರೋನಾ ವಾರಿಯರ್ ಹಾಗೂ ಕ್ರೀಡಾಪಟು ನಾಗಾರ್ಜುನ ಪೂಜಾರಿಯವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ನಗರಸಭೆಯ ಸದಸ್ಯರಾದ ಶ್ರೀ ರಮೇಶ್ ಕಾಂಚನ್,ಜಿತೇಂದ್ರ ಶೆಟ್ಟಿ, ಸಚಿನ್ ಅಜ್ಜರಕಾಡು,ಅರುಣ್ ಶೆಟ್ಟಿ, ಕೋಟ ರಾಮಕೃಷ್ಣ ಆಚಾರ್,ಪ್ರವೀಣ್ ಕುರ್ಕಾಲು,ಆಕಾಶ್ ರಾವ್,ಮಹಮ್ಮದ್ ಅಮೀರ್,ಹಿರಿಯ ಕ್ರಿಕೆಟಿಗರಾದ ಯಾದವ್ ನಾಯಕ್ ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಕಾರರಾಗಿ ಹಿರಿಯ ವೀಕ್ಷಕ ವಿವರಣೆಕಾರ ವಿನಯ್ ಉದ್ಯಾವರ ಭಾಗವಹಿಸಿದರೆ,ಎ.ಕೆ.ಸ್ಪೋರ್ಟ್ಸ್ ನ ಹಮೀದ್ ಹಾಗೂ ಸಫ್ವಾನ್ ನಿರ್ಣಾಯಕರಾಗಿ ಭಾಗವಹಿಸಿದರು.
ಪಂದ್ಯಾವಳಿಯ ನೇರ ಪ್ರಸಾರ M9ಸ್ಪೋರ್ಟ್ಸ್ ಬಿತ್ತರಿಸಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿದರು…