ಆತಿಥೇಯ ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪೊಲಾರ್ಡ್ ಬಳಗ ಉತ್ತಮ ಯೋಜನೆಯನ್ನೇ ರೂಪಿಸಿತ್ತು. ಭಾರತ ತಂಡದ ಮೊತ್ತ 21 ರನ್ ಆಗುವಷ್ಟರಲ್ಲೇ ಲೋಕೇಶ್ ರಾಹುಲ್ ವಿಕೆಟ್ ಪತನವಾಯಿತು. ಮತ್ತೆ 4 ರನ್ ಅಂತರದಲ್ಲೇ ಭಾರತಕ್ಕೆ ಮತ್ತೊಂದು ಆಘಾತವಾಯಿತು, ನಾಯಕ ವಿರಾಟ್ ಕೊಹ್ಲಿ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆರಂಭಿಕ 3 ಅಗ್ರ ಬ್ಯಾಟ್ಸ್ ಮನ್ ಗಳು 80 ರನ್ ಗಳಾಗುವಸ್ಟರಲ್ಲೇ ಪೆವಿಲಿಯನ್ ಹಾದಿ ಹಿಡಿದರು. ತದನಂತರ ತಂಡಕ್ಕೆ ಅಸರೆಯಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ 114 ರನ್ ಗಳ ಭರ್ಜರಿ ಜೊತೆಯಾಟ ಅಡಿ ತಂಡವನ್ನು 200 ರನ್ ಗಳ ಗಡಿಗೆ ತಂದು ನಿಲ್ಲಿಸಿದರು.
194 ರನ್ ಆಗುವಷ್ಟರಲ್ಲೇ ಅಯ್ಯರ್ ಜೋಸೆಫ್ ಗೆ ವಿಕೆಟ್ ಒಪ್ಪಿಸಿ ಹೊರನೆಡೆದರು. ಒಂದೆಡೆ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದ್ದ ಪಂತ್ 71 ರನ್ ಗಳಿಸಿ ಔಟಾದರು.
ತದನಂತರ ಕ್ರೀಸ್ ಗೆ ಆಗಮಿಸಿದ ಜಡೇಜಾ 21 ಮತ್ತು ಶಿವಂ ದುಬೆ 40 ರನ್ ನೆರವಿನಿಂದ ಭಾರತ ತಂಡ ಅಂತಿಮವಾಗಿ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಶೆಲ್ಡನ್ ಕಾಟ್ರೆಲ್ 4 ವಿಕೆಟ್ ಪಡೆದರು. ಹಾಗೆ ಕೀಮೊ ಪಾಲ್ ಮತ್ತು ಜೋಸೆಫ್ ತಲಾ 3 ವಿಕೆಟ್ ಗಳಿಸಿದರು.ಮತ್ತು ಹೋಲ್ಡರ್ 1 ವಿಕೆಟ್ ಕಬಲಿಸಿದರು. 287 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ವಿಂಡೀಸ್ ತಂಡ 11 ರನ್ ಗಳಾಗುವಸ್ಟರಲ್ಲೇ 1 ವಿಕೆಟ್ ಕಳೆದುಕೊಂಡಿತು. ಆದರೆ ಆರಂಭಿಕ ಆಟಗಾರ ಹೋಪ್ ಮತ್ತು ಶಿಮ್ರಾನ್ ಹೆಟ್ಮಾಯರ್ ಅಕ್ಷರಶಃ ಭಾರತೀಯ ಬೌಲರ್ ಗಳನ್ನು ಚೆಂಡಾಡಿದರು. ಇವರಿಬ್ಬರ ಜೊತೆಯಾಟದಲ್ಲಿ ವೆಸ್ಟ್ ವಿಂಡೀಸ್ ಗೆ 218 ರನ್ ಗಳ ಬೃಹತ್ ಜೊತೆಯಾಟ ನೆರವಿನಿಂದ ವಿಂಡೀಸ್ ಗೆಲುವಿನ ಸನಿಹಕ್ಕೆ ಬಂದಿತ್ತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ
ಹೆಟ್ಮಾಯರ್ 139 ರನ್ ಗಳಿಸಿ ಮಹಮದ್ ಶಮಿಗೆ ವಿಕೆಟ್ ಒಪ್ಪಿಸಿದರು.ತದನಂತರ ಹೋಪ್ ಗೆ ಜೊತೆಯಾದ ಪೂರನ್ 29 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
ಭಾರತ ಪರ ದೀಪಕ್ ಚಾಹರ್ ಮತ್ತು ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹೆಟ್ಮಾಯರ್ 106 ಎಸೆತಗಳನ್ನು ಎದುರಿಸಿದ್ದು 11ಪೋರ್ ಮತ್ತು 7 ಆಕರ್ಷಕ ಸಿಕ್ಸರ್ ಸಿಡಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಆಯ್ಕೆಯಾದರು. ಈ ಗೆಲುವಿನಿಂದ ವಿಂಡೀಸ್ 3 ಪಂದ್ಯಗಳ ಸರಣಿಯಲ್ಲಿ 1-0 ಇಂದ ಮುನ್ನಡೆ ಸಾಧಿಸಿದರು.