ಭಾರತದ ಹಿರಿಯ ಕ್ರಿಕೆಟ್ ಅಂಕಿ ಅಂಶ ತಜ್ಞ ಎಚ್.ಆರ್.ಗೋಪಾಲಕೃಷ್ಣ ಭಾರತ ಮತ್ತು ವಿಂಡೀಸ್ ನಡುವಣ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ರೇಡಿಯೋ ವೀಕ್ಷಕ ವಿವರಣೆಗಾಗಿ ಆಕಾಶವಾಣಿಯಿಂದ ಅಂಕಿ ಅಂಶ ತಜ್ಞರಾಗಿ ನೇಮಕಗೊಂಡಿದ್ದಾರೆ.ಇದು ಬೆಂಗಳೂರಿನ ಗೋಪಾಲಕೃಷ್ಣ ಪಾಲಿಗೆ ಅಂಶ ತಜ್ಞರಾಗಿ 104 ನೇ ಅಂತರಾಷ್ಟ್ರೀಯ ಪಂದ್ಯ.ಸ್ಕೋರರ್ ಸ್ಟ್ಯಾಟಿಸ್ಟಿಷನ್ ಆಗಿ 50 ವರ್ಷ ಪೂರೈಸಿದ ಹೆಗ್ಗಳಿಕೆಯೂ ಗೋಪಾಲಕೃಷ್ಣ ಅವರದ್ದಾಗಿದೆ.ಇದರೊಂದಿಗೆ ಗೋಪಾಲ್ ಕೃಷ್ಣ ಅವರು ಅಪರೂಪದ ಡಬಲ್ ಸಾಧನೆ(100 ಅಂತರಾಷ್ಟ್ರೀಯ ಪಂದ್ಯದಲ್ಲಿ ಅಂಕಿ ಅಂಶ ತಜ್ಞ+ಸ್ಕೋರರ್ ಸ್ಟ್ಯಾಟಿಸ್ಟಿಷನ್ ಆಗಿ 50 ವರ್ಷ) ಮಾಡಿದ 2 ನೇ ಅಂಕಿ ಅಂಶ ತಜ್ಞ ಎನಿಸಿಕೊಂಡಿದ್ದಾರೆ.ಮುಂಬಯಿಯ ಸುಧೀರ್ ವೈದ್ಯ ಮೊದಲಿಗರಾಗಿದ್ದಾರೆ.