10.1 C
London
Thursday, November 14, 2024
Homeಕ್ರಿಕೆಟ್ಮೆಲ್ಬೋರ್ನ್: ಭಾರತ Vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯದಲ್ಲಿ ಘರ್ಜಿಸಿದ ಕೊಹ್ಲಿ ಪತುರುಗುಟ್ಟಿದ...

ಮೆಲ್ಬೋರ್ನ್: ಭಾರತ Vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯದಲ್ಲಿ ಘರ್ಜಿಸಿದ ಕೊಹ್ಲಿ ಪತುರುಗುಟ್ಟಿದ ಪಾಕ್….

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
*ಆರಂಭಿಕ ಕುಸಿತ ಕಂಡ ಭಾರತ ತಂಡ*
ಪಾಕಿಸ್ತಾನ ನೀಡಿದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು.  ನಸೀಂ ಶಾ ಬೌಲಿಂಗ್ ನಲ್ಲಿ ಕೆಎಲ್‌ ರಾಹುಲ್‌ ಹೊರ ಹೊಗುತ್ತಿದ್ದ ಚೆಂಡನ್ನು ಹೊಡೆಯಲು ಹೋಗಿ ಬಾಲ್ ಬ್ಯಾಟಿನ ಅಂಚಿಗೆ ತಗುಲಿ ಬೌಲ್ಡ್  ಆಗಿ ಹೊರನೆಡೆದರು.
ಇನ್ನೂ ಹ್ಯಾರಿಸ್ ರೌಫ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಕಳಪೆ ಹೊಡೆತ ಬಾರಿಸಲು ಹೋಗಿ  ವಿಕೆಟ್ ಒಪ್ಪಿಸಿದರು ಇತ್ತೀಚಿನ ಭಾರತ ತಂಡದ ಭರವಸೆಯ ಯುವ ಆಟಗಾರ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಕೂಡ 10 ಎಸೆತಗಳಲ್ಲಿ 15 ರನ್ ಗಳಿಸಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿಕೆಟ್ ಹಿಂಭಾಗದಲ್ಲಿ ಹೊಡೆಯಲು ಹೋಗಿ ವಿಕೆಟ್ ಕಳೆದುಕೊಂಡರು. ಅದರೆ ಫಸ್ಟ್‌ ಡೌನ್ ಆಟಗಾರನಾಗಿ ಅಂಗಳಕ್ಕೆ ಇಳಿದ ಕೊಹ್ಲಿ ಪಾಕ್ ಬೌಲರ್ ಗಳ ಆರ್ಭಟವನ್ನು ಗಮನಿಸುತ್ತಲೆ ಗೆಲುವಿನ ಲೆಕ್ಕಚಾರ ಹಾಕುತ್ತಿದ್ದರು.
ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾಗಿ ಬಂದಷ್ಟೆ ಬೇಗನೆ ಪೆವಿಲಿಯನ್ ಗೆ ತೆರಳಿದರು
*ಶ್ರೇಷ್ಠ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ*
ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಲು ಮುಂದಾದರು ಎದುರಿಸಿದ ಪ್ರತಿ ಬಾಲಿಗೂ ಸರಿಯಾದ ಉತ್ತರವನ್ನೆ ನೀಡಿ ರನ್ ಕಲೆಹಾಕುವಲ್ಲಿ ಮದಾದರು. ಈ ಹಂತದಲ್ಲಿ ಕೊಹ್ಲಿ ಜೋತೆ ಸೇರಿದ ಮತ್ತೊಬ್ಬ ಭರವಸೆಯ ಆಟಗಾರ ಹಾರ್ದಿಕ್ ಪಾಂಡ್ಯ ಕೂಡ ವಿರಾಟ್ ಕೊಹ್ಲಿಗೆ ಅತ್ಯುತ್ತಮವಾಗಿ ಆಡುವುದರ ಜೋತೆಗೆ ಸಾತ್ ನೀಡಿದರು. ಆದರೂ ಪಾಕಿಸ್ತಾನ ಉತ್ತಮ ಬೌಲಿಂಗ್ ಮೂಲಕ ರನ್‌ ಗಳಿಸದಂತೆ ಕಡಿವಾಣ ಹಾಕಲು ಮುಂದಾಗಿದ್ದರು.
ಹಾರ್ದಿಕ್ ಪಾಂಡ್ಯ ಕೂಡ ರನ್ ಗಳಿಸಲು ಪರದಾಡುತ್ತಿದ್ದರು. ಕೊಹ್ಲಿ ನಿಧಾನಗತಿಯಲ್ಲೇ 43 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. 43 ಎಸೆತಗಳಲ್ಲಿ 50 ರನ್ ಗಳಿಸಿದ ಕೊಹ್ಲಿ ನಂತರದ 10 ಎಸೆತಗಳಲ್ಲಿ 32 ರನ್ ಗಳಿಸಿದರು, 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಮಿಂಚಿದರು. ಅವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಇದ್ದವು.
*ಅಂತಿಮ ಘಟ್ಟದಲ್ಲಿ ಹ್ಯಾರಿಸ್‌ ರೌಫ್‌ಗೆ ಎರಡು ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿ* 
ಭಾರತಕ್ಕೆ ಕೊನೆಯ 4 ಓವರ್ ಗಳಲ್ಲಿ ಗೆಲುವಿಗೆ 54 ರನ್ ಗಳ ಅಗತ್ಯವಿತ್ತು. ಆದರೆ, 17ನೇ ಓವರ್ ನಲ್ಲಿ ಕೇವಲ 6 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ನಂತರ, 3 ಓವರ್ ಗಳಲ್ಲಿ 48 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರರು ಮಂದಿ ಅಭಿಮಾನಿಗಳ ಮುಖದಲ್ಲಿ ಹತಾಶೆಯ ಛಾಯೆ ಮೂಡಿತ್ತು ಹೇಗೆ ಲೆಕ್ಕಾಚಾರ ಮಾಡಿದರು ಗೆಲುವು ಕಷ್ಟವಾಗಿಯೆ ಗೋಚರಿಸುತ್ತಿತ್ತು. ಅ ಹಂತದಲ್ಲಿ  ಪಾಕ್ ವೇಗಿ ಶಾಹೀನ್ ಅಫ್ರಿದಿಯ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು ಶಾಹೀನ್ ಓವರ್ ನಲ್ಲಿ 3 ಬೌಂಡರಿ ಸಿಡಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು ಪ್ರತಿಯೊಂದು ಬೌಂಡರಿಕೂಡ ಮನಮೋಹಕ ಹೊಡೆತವಾಗಿತ್ತು.
18ನೇ ಓವರ್ ನಲ್ಲಿ ಹ್ಯಾರಿಸ್ ರೌಫ್ ಮೊದಲ ನಾಲ್ಕು ಎಸೆತಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದರು  ಹಾರ್ದಿಕ್ ಪಾಂಡ್ಯ ರನ್ ಗಳಿಸಲು ಪರದಾಡುತ್ತಿದ್ದಾಗ ಅದೆ ಓವರ್  ನ ಕೊನೆಯ ಎರಡು ಎಸೆತಗಳಲ್ಲಿ ಕಿಂಗ್ ಕೊಹ್ಲಿ ಅದ್ಭುತವಾಗಿ ಆಡಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಮತ್ತೆ ಭಾರತದ ಗೆಲುವನ್ನು  ಜೀವಂತವಾಗಿರಿಸಿದರು
*ಕೊನೆಯ ಓವರ್ ನಲ್ಲಿ ನಡೆದದ್ದು..?*
ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲುವಿಗಾಗಿ 16 ರನ್ ಬೇಕಿತ್ತು, ಮೊದಲನೇ ಎಸೆತದಲ್ಲೇ ಪಾಂಡ್ಯ ಔಟಾದಾಗ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು   ನಂತರ ಬಂದ ದಿನೇಶ್ ಕಾರ್ತಿಕ್ ಒಂದು ರನ್ ಓಡುವ ಮೂಲಕ ಕೊಹ್ಲಿಗೆ ಸ್ಟ್ರೈಕ್‌ ನೀಡಿದರು. ನಂತರ ಎರಡು ರನ್ ಗಳಿಸಿದ ಕೊಹ್ಲಿ, 19.4ನೇ ಓವರ್‍ ನಲ್ಲಿ ಸಿಕ್ಸರ್ ಬಾರಿಸಿದರು. ಆ ಬಾಲ್  ನೋಬಾಲ್ ಆಗಿತ್ತು ಬೌಲರ್ ನಂತರದ ಎಸೆತವನ್ನು ವೈಡ್ ಹಾಕಿದರು ನಂತರದ ಎಸೆತ ಕೂಡ ಫ್ರೀಹಿಟ್‌ ಆಗಿತ್ತು, ಕೊಹ್ಲಿ ಬ್ಯಾಟ್ ಮಿಸ್ ಆದ ಬಾಲ್ ವಿಕೆಟ್‌ಗೆ ಬಡಿದು ಬೌಂಡರಿ ಗೆರೆಯ ಸಮೀಪಕ್ಕೆ ತಲುಪಿತು  ಆಷ್ಟೋತ್ತಿಗೆ ಕೊಹ್ಲಿ ಮತ್ತು ಕಾರ್ತಿಕ್ ಮೂರು ರನ್ ಗಳಿಸಿದರು. 19.5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟ್ ಆದರು.
ನಂತರ ಭಾರತದ ಗೆಲುವಿಗೆ 1 ಎಸೆತದಲ್ಲಿ 2 ರನ್ ಬೇಕಿತ್ತು  ಬ್ಯಾಟಿಂಗ್ ತುದಿಯಲ್ಲಿ ಅಶ್ವಿನ್ ಇದ್ದರು ಬೌಲರ್ ಮೊಹಮ್ಮದ್ ನವಾಜ್ ಕೊನೆಯ ಎಸೆತವನ್ನು ವೈಡ್ ಎಸೆಯುವ ಮೂಲಕ ಸ್ಕೋರ್ ಸಮವಾಯಿತು. ನಂತರ 1 ಎಸೆತದಲ್ಲಿ ಒಂದು ರನ್ ಬೇಕಿದ್ದಾಗ, ಅಶ್ವಿನ್ ಯಾವುದೇ ತಪ್ಪು ಮಾಡದೆ ಸುಂದರವಾದ ಹೊಡೆತ ಹೊಡೆದು ಒಂದು ರನ್ ಗಳಿಸುವ ಮೂಲಕ ಭಾರತಕ್ಕೆ ವಿಜಯದ ರನ್ ತಂದುಕೊಟ್ಟರು. ತಮ್ಮ ಅದ್ಭುತವಾದ ಬ್ಯಾಟಿಂಗ್‌ಗೆ ಸಹಜವಾಗಿಯೇ ವಿರಾಟ್ ಕೊಹ್ಲಿ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರೆ ವಿಶ್ವದೆಲ್ಲೆಡೆ ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದ ಗೆಲುವಿನ ನಂತರದಲ್ಲಿ ಒಂದು ದಿನ ಮುಂಚಿತವಾಗಿ ದೀಪಾವಳಿ ಆಚರಿಸಿದರು ಎಲ್ಲೆಡೆ ವಿಜಯೋತ್ಸವದ ಕಹಳೆ ಮೊಳಗಿದರೆ ಕಿಂಗ್ ಕೊಹ್ಲಿ ಇತಿಹಾಸ ಬರೆದ ಕಥಾನಾಯಕನಾಗಿ ಮಿಂಚಿದರು…..
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

18 + four =