ಕ್ರಿಕೆಟ್ಕೋಲಾರ-ಶ್ರೀನಿವಾಸಪುರದಲ್ಲಿ ಇಂದಿನಿಂದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ-ಉದ್ಯಮಿ ನದೀಮ್ ಅಖ್ತರ್ ಸಾರಥ್ಯದಲ್ಲಿ...

ಕೋಲಾರ-ಶ್ರೀನಿವಾಸಪುರದಲ್ಲಿ ಇಂದಿನಿಂದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ-ಉದ್ಯಮಿ ನದೀಮ್ ಅಖ್ತರ್ ಸಾರಥ್ಯದಲ್ಲಿ M.K.S CUP-2022

-

- Advertisment -spot_img
ಕೋಲಾರ ಶ್ರೀನಿವಾಸಪುರದ ಪ್ರಸಿದ್ಧ ಉದ್ಯಮಿ,ಸಮಾಜ ಸೇವಕರು,ಇತ್ತೀಚೆಗಷ್ಟೇ ಎರಡು ಅಂತರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದ M.K.S ಗ್ರೂಪ್ಸ್ ನ ಮಾಲೀಕರಾದ ನದೀಮ್ ಅಖ್ತರ್ ಸಾರಥ್ಯದಲ್ಲಿ,ಎಸ್.ಎ.ಎಸ್ ಗ್ರೂಪ್ಸ್  ನ ಶಾಮೀರ್ ಇವರ ಉಸ್ತುವಾರಿಯಲ್ಲಿ
ಕೋಲಾರ ಶ್ರೀನಿವಾಸಪುರದಲ್ಲಿ ಜನವರಿ 28,29 ಮತ್ತು 30 ರಂದು ಹೊನಲು ಬೆಳಕಿನ ಅದ್ಧೂರಿಯ ಮೂರನೇ ಆವೃತ್ತಿಯ ಶ್ರೀನಿವಾಸಪುರ ಪ್ರೀಮಿಯರ್ ಲೀಗ್-M.K.S Cup-2022 ಆಯೋಜಿಸಲಾಗಿದೆ.
*ಭಾಗವಹಿಸುವ ತಂಡಗಳು*
*1)ಎಸ್.ಕೆ.ಎಸ್ ಕಿಸಾನ್ ಟೈಗರ್ಸ್*
*2)ಬ್ರ್ಯಾಂಡ್ ಯುವಾ ಫ್ಯಾಶನ್*
*3)ಹೆಚ್‌.ಎಮ್.ಎಸ್ ಕ್ರಿಕೆಟರ್ಸ್ ಚಿನ್ನಸಂದ್ರ*
*4)ಬಿ‌.ಎಸ್.ಆರ್ ಕನ್ಸ್ಟ್ರಕ್ಷನ್ಸ್,*
*5)ಕ್ಲಾಸಿಕ್ ತಿಪಟೂರು*
*6)ಸುಲ್ತಾನ್ ವಾರಿಯರ್ಸ್*
*7)ಎಮ್.ಎಸ್.ಎ ಕ್ರಿಕೆಟರ್ಸ್*
*8)ಗಡಿನಾಡು ಶ್ರೀನಿವಾಸಪುರ*
ಹೀಗೆ ಒಟ್ಟು 8 ಪ್ರತಿಷ್ಠಿತ ಫ್ರಾಂಚೈಸಿಗಳು ಸ್ಪರ್ಧಾಕಣದಲ್ಲಿದ್ದು,ರಾಜ್ಯದ ಪ್ರಸಿದ್ಧ ಆಟಗಾರರು ಭಾಗವಹಿಸಲಿದ್ದಾರೆ. ಚಾಂಪಿಯನ್ ತಂಡ 3,33,333 ರೂ ನಗದು,ರನ್ನರ್ ಅಪ್ 1,77,777ರೂ ನಗದು ಬಹುಮಾನದ ಜೊತೆ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ವಿಶೇಷ ಉಡುಗೊರೆ ಹಾಗೂ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದ ಆಟಗಾರ 1.25 ಲಕ್ಷ ನಗದು ಬಹುಮಾನವನ್ನು ಪಡೆಯಲಿದ್ದಾರೆ.
*ನದೀಮ್ ಅಖ್ತರ್-M.K.S Groups*
ಯುವ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಮಾರ್ಗದರ್ಶನವನ್ನಿತ್ತು ,ಮುಖ್ಯವಾಗಿ ಕೋಲಾರ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಲ್ಲಿ  ಬಹುಮುಖ್ಯ ಪಾತ್ರ ವಹಿಸಿದ ಶ್ರೀ ನದೀಮ್  ಅಖ್ತರ್ ಶ್ರೀ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ನ ಮುಖ್ಯ ರೂವಾರಿ.
ಓರ್ವ ಅತ್ಯುನ್ನತ ಕ್ರಿಕೆಟಿಗನಾಗಿ ಸೈ ಬಾಯ್ಸ್ ಎಂಬ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ 2019 ಹಾಗೂ 2020 ರಲ್ಲಿ ಶ್ರೀನಿವಾಸಪುರದಲ್ಲಿ,2021 ಬೆಂಗಳೂರಿನಲ್ಲಿ ಸಂಘಟಿಸಿದ ಎಸ್.ಪಿ.ಎಲ್ ಎಂಬ ಕ್ರಿಕೆಟ್ ಪಂದ್ಯಾವಳಿ ಕೋಲಾರ ಜಿಲ್ಲೆಯಲ್ಲೇ ಕ್ರಾಂತಿಯನ್ನು ಸೃಷ್ಟಿಸಿತ್ತು.ಕೇವಲ ಕ್ರೀಡಾ ಕ್ಷೇತ್ರವಷ್ಟೇ ಅಲ್ಲದೇ ಸಮಾಜ ಸೇವೆಯಲ್ಲಿಯೂ ತನ್ನನ್ನು ತಾನು ಗುರುತಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಸೇವೆಗೈದ ಸ್ಪೂರ್ತಿಕಿರಣ ಇವರು.ಕೋವಿಡ್ ನಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಗಳನ್ನು ಅರಿತು ,ಜನರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿ ತಮ್ಮ ಕೆಲಸ ಕಾರ್ಯಗಳಿಂದ ಪ್ರೇರಣೆಯಾಗಿ ನಿಲ್ಲುವ  ನದೀಮ್ ಎಂ.ಕೆ.ಎಸ್ ಗ್ರೂಪ್,ಅಖ್ತರ್ ಟ್ರೇಡರ್ಸ್ ಎಂಬ ಉದ್ಯಮವನ್ನು ಸೃಷ್ಟಿಸಿ ರೈತ ಸಹಕಾರಿ ಟ್ರ್ಯಾಕ್ಟರ್ ಗಳು,ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಸೃಷ್ಟಿಸಿದ ಜನನಾಯಕ ಎಂದರೆ ತಪ್ಪಾಗಲಾರದು.
ಇತ್ತೀಚೆಗಷ್ಟೇ ರಾಜ್ ಭವನ ಮುಂಬೈನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲಯನ್ಸ್ ಗೋಲ್ಡ್ ಅವಾರ್ಡ್ ಮತ್ತು ದುಬೈ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದರು.
3 ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಈ ಕ್ರಿಕೆಟ್ ಪಂದ್ಯಾಟದ ನೇರ ಪ್ರಸಾರ S.R.B ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,
ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.ವೀಕ್ಷಕ ವಿಭಾಗದಲ್ಲಿ ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್ ಕೋಟ,ಪ್ರಶಾಂತ್ ಅಂಬಲಪಾಡಿ,ರಾಘವೇಂದ್ರ ಮಟಪಾಡಿ ಜೊತೆಗೆ ಹೊರ ರಾಜ್ಯದ ಕಾಮೆಂಟೇಟರ್ ಓಸಮ್ ಹುಸೇನ್ ಭಾಗವಹಿಸಿದರೆ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಹಾಗೂ ತಂಡ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

5 × 5 =

Latest news

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ Team India ತಂಡವು ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಭಾವವನ್ನು...

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್ **New Mangalore Port Authority (ಎನ್‌ಎಂಪಿಎ)** ತಂಡವು **NIPM Cricket Explosion Corporate Cricket Tournament...

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ ಮಂಗಳೂರು: ಮಾನವ ಸಂಪನ್ಮೂಲ ಕ್ಷೇತ್ರದ ಪ್ರಮುಖ ಸಂಘಟನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM)...
- Advertisement -spot_imgspot_img

ಸಾಲಿಗ್ರಾಮದಲ್ಲಿ “ವಿಶ್ವ ವೃಷ್ಠಿ ಟ್ರೋಫಿ 2026” ಕ್ರಿಕೆಟ್ ಪಂದ್ಯಾಟ – ಮಾರ್ಚ್ 14 ಮತ್ತು 15 ರಂದು ಭರ್ಜರಿ ಆಯೋಜನೆ

ಸಾಲಿಗ್ರಾಮದಲ್ಲಿ “ ವಿಶ್ವ ವೃಷ್ಠಿ ಟ್ರೋಫಿ 2026” ಕ್ರಿಕೆಟ್ ಪಂದ್ಯಾಟ – ಮಾರ್ಚ್ 14 ಮತ್ತು 15 ರಂದು ಭರ್ಜರಿ ಆಯೋಜನೆ ಕ್ರೀಡಾಭಿಮಾನಿಗಳಿಗೆ ರೋಮಾಂಚನ ಮೂಡಿಸುವ ಕ್ರಿಕೆಟ್...

ಅಮ್ಗೆಲೆ ಅಭರಣ GPL ಉತ್ಸವ 2026 – ದಶಕದ ಸಂಭ್ರಮಕ್ಕೆ ಸಜ್ಜಾದ ಕ್ರೀಡಾ ಮಹೋತ್ಸವ

ಅಮ್ಗೆಲೆ ಅಭರಣ GPL ಉತ್ಸವ 2026 – ದಶಕದ ಸಂಭ್ರಮಕ್ಕೆ ಸಜ್ಜಾದ ಕ್ರೀಡಾ ಮಹೋತ್ಸವ ಕ್ರೀಡೆ, ಸಂಸ್ಕೃತಿ ಮತ್ತು ಸಮುದಾಯ ಒಗ್ಗಟ್ಟನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಮಹತ್ವದ...

Must read

- Advertisement -spot_imgspot_img

You might also likeRELATED
Recommended to you