ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಮೊದಲ ಹಂತದ ಯೋಜನೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ, ಈಗಾಗಲೇ ಕಾರ್ಕಳ,ಉಡುಪಿ,ಬೈಂದೂರು,ಕಾಪು ಈ ನಾಲ್ಕು ತಾಲೂಕುಗಳಲ್ಲಿ ಯಶಸ್ವಿಯಾಗಿದ್ದು,ಇದೀಗ ಜನವರಿ 29 ಮತ್ತು 30 ರಂದು ಹೆಬ್ರಿ ತಾಲೂಕಿನಲ್ಲಿ 10 ಓವರ್ ಗಳ 90 ಗಜಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
90 ರ ದಶಕದ ಹೆಬ್ರಿಯ ಪ್ರಸಿದ್ಧ ತಂಡ ಸವ್ಯಸಾಚಿ ಹೆಬ್ರಿಯ ಪರವಾಗಿ ಹಲವಾರು ಪಂದ್ಯಾಟಗಳಲ್ಲಿ ಆಡಿದ ಹಾಗೂ ಹಲವಾರು ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಾಟಗಳನ್ನು ಸಂಘಟಿಸಿದ ಅನುಭವಿ ಸುಕೇಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಈ ಬಾರಿ ಹೆಬ್ರಿಯಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಈ ಮುಂಚೆ ಹೆಬ್ರಿ ತಾಲೂಕಿನ ಒಟ್ಟು 67 ಮಂದಿ ಆಟಗಾರರು ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು,
ಈ ಆಟಗಾರರು ಅಗಸ್ತ್ಯ ಮದಗ,ಚೈತನ್ಯ ವಾರಿಯರ್ಸ್, ಚಕ್ರವರ್ತಿ ಹೆಬ್ರಿ,ಎಸ್.ಎಲ್.ಎನ್ ಹಳೆ ಸೋಮೇಶ್ವರ,ಹೆಬ್ರಿ ಹಾಕ್ಸ್,ಶಿವಪುರ ಫ್ರೆಂಡ್ಸ್ ಈ 6 ತಂಡಗಳ ಪರವಾಗಿ ಆಡಲಿದ್ದಾರೆ.