8.8 C
London
Tuesday, April 23, 2024
Homeಕ್ರಿಕೆಟ್ವಿಶ್ವದ ಪತಿಷ್ಠಿತ ಕ್ರಿಕೆಟ್ ಅಂಕಣದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಕೂಡ ಒಂದು, ಚಿನ್ನಸ್ವಾಮಿ ಯಾರು? ಇದಕ್ಕೆ...

ವಿಶ್ವದ ಪತಿಷ್ಠಿತ ಕ್ರಿಕೆಟ್ ಅಂಕಣದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಕೂಡ ಒಂದು, ಚಿನ್ನಸ್ವಾಮಿ ಯಾರು? ಇದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಎಂದು ಹೆಸರಿಡಲು ಕಾರಣವೇನು?

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಭಾರತದಲ್ಲಿ ಕ್ರಿಕೆಟ್ ದಿನದಿಂದ ದಿನಕ್ಕೆ ಜನಪ್ರಿಯತೆ ಹೊಂದುತ್ತಿದೆ , ಇಂದು ಭಾರತೀಯರ ಬದುಕಿನಲ್ಲಿ ಕ್ರಿಕೆಟ್ ಒಂದು ಭಾಗವೇ ಆಗಿರುವುದು ಜಗತ್ತಿಗೆ ತಿಳಿದ ವಿಚಾರ ಭಾರತದಲ್ಲಿ ಕ್ರಿಕೆಟ್ ಅನ್ನು ಕಟ್ಟಿ ಬೆಳೆಸುವುದರ ಹಿಂದೆ ಹಲವು ದಿಗ್ಗಜ ಆಟಗಾರರ ಜೊತೆಗೆ ಕೇಲವು ನಿಸ್ವಾರ್ಥ ಕ್ರಿಕೆಟ್ ಆಡಳಿತಗಾರರ ಪ್ರೇಮಿಗಳ ಪರಿಶ್ರಮ ಕೂಡ ಸಾಕ್ಷಿಯಾಗಿ ನಮ್ಮ ಕಣ್ಣೆದುರಿಗಿದೆ ಅಂದು ಕ್ರಿಕೆಟ್ ಆಟದಲ್ಲಿ ಹೆಚ್ಚು ಹಣ ಇರಲಿಲ್ಲ ಆ ಕಾಲದಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳನ್ನು ನಿರ್ಮಿಸಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದು ದೊಡ್ಡ ಸವಾಲಾಗಿತ್ತು .
ಇಂತಹ ಸಾಕಷ್ಟು ಸವಾಲುಗಳನ್ನು ಹಿಮ್ಮೆಟ್ಟಿ ದಶಕಗಳ ಕಾಲ ಆಡಳಿತಗಾರನಾಗಿ ಭಾರತದಲ್ಲಿ ಕ್ರಿಕೆಟ್ ಅನ್ನು ಪೋಶಿಸಿವುದರೊಟ್ಟಿಗೆ 1974 ರಲ್ಲಿ ಬೆಂಗಳೂರಿಗೆ ಟೆಸ್ಟ್ ಕ್ರಿಕೆಟ್ ಅನ್ನು ತಂದವರೇ ಕರ್ನಾಟಕದ ಹೆಮ್ಮೆಯ ಆಡಳಿತಗಾರ ಎಮ್. ಚಿನ್ನಸ್ವಾಮಿಯವರು ಇವರ ಬಗ್ಗೆ ನಾವುಗಳು ಸಾಕಷ್ಟು ತಿಳಿಯಬೇಕಾಗಿದೆ
*ಕಿರಿವಯಸ್ಸಿನಲ್ಲೆ ಕ್ರಿಕೆಟ್ ನಂಟು ಹೊಂದಿದ್ದ ಚಿನ್ನಸ್ವಾಮಿ*
1900 ಮಾರ್ಚ್ 29 ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜನಿಸಿದ ಚಿನ್ನಸ್ವಾಮಿ ಅವರು ತಮ್ಮ  ಶಾಲಾಕಲಿಕೆಯನ್ನು ತುಮಕೂರಿನಿಂದ ಆರಂಭಿಸಿ  ನಂತರ ಮೈಸೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ ಮುಂದೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು  1925 ರಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. ಚಿನ್ನಸ್ವಾಮಿ ಅವರು ತಮ್ಮ
ಕಿರಿವಯಸ್ಸಿನಲ್ಲಿ ಅದರಲ್ಲೂ ತಮ್ಮ ಶಾಲಾ ದಿನಗಳಲ್ಲಿ ಪುಟ್ಬಾಲ್ ಮತ್ತು ಕ್ರಿಕೆಟ್ ಆಡಿಕೊಂಡು ಬೆಳೆದವರು ಅದರಲ್ಲೂ ಕ್ರಿಕೆಟ್ ಮೇಲೆ ವಿಶೇಷವಾದ ಒಲವಿತ್ತು ಇವರು ಕ್ರಿಕೆಟ್ ಅನ್ನು  ವೃತ್ತಿಯಾಗಿ ಅಡದಿದ್ದರು ಒಬ್ಬ ಕ್ರಿಕೆಟ್  ಅಭಿಮಾನಿಯಾಗಿ ಸದಾ ಕ್ರಿಕೆಟ್ ಆಟದೊಂದಿಗೆ ಸಂಘಟನೆಯೊಂದಿಗೆ ಕೈ ಜೋಡಿಸಿದವರು ಹೆಸರಾಂತ ಕ್ರಿಕೆಟ್ ಆಟಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಚಿನ್ನಸ್ವಾಮಿ ಅವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜ್ ಮೈದಾನದ ಹತ್ತಿರವಿದ್ದ ಕ್ರಿಷ್ಣ ಬಿಲ್ಡಿಂಗ್‌ ನಲ್ಲಿ ವಕೀಲವೃತ್ತಿಗಾಗಿ ಒಂದು ಕಛೇರಿಯನ್ನು ತೆರೆದಿದ್ದರು ನಂತರ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ನಿತ್ಯ ನೋಡುತ್ತಾ ಕ್ರಿಕೆಟ್ ಬದುಕಿನೊಂದಿಗೆ ಇನ್ನಷ್ಟು ಹತ್ತಿರವಾದರು. ಆ ಸಮಯದಲ್ಲಿ  ಮೈಸೂರು ರಾಜ್ಯ ಕ್ರಿಕೆಟ್  ಸಂಸ್ಥೆಯ ತವರು ಅಂಕಣವಾಗಿದ್ದ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಕ್ರಿಕೆಟ್ ಆಟದ ಆಯೋಜಕರೊಂದಿಗೆ ಕೈ ಜೋಡಿಸಿದ  ಚಿನ್ನಸ್ವಾಮಿಯವರು ವಕೀಲ ವೃತ್ತಿಗಿಂತ ಕ್ರಿಕೆಟ್ ಒತ್ತುಕೊಟ್ಟು ಪ್ರತಿಹಂತದಲ್ಲೂ ಕ್ರಿಕೆಟ್ ಹೆಗಲುಕೊಟ್ಟು ಸಾಕಷ್ಟು ಎತ್ತರಕ್ಕೆ ಬೆಳೆದು 1953 ರಲ್ಲಿ ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ.
*ಉತ್ತಮ ಆಡಳಿತಗಾರರಾಗಿದ್ದ ಚಿನ್ನಸ್ವಾಮಿ*
ಸುಮಾರು ನಲವತ್ತು ವರ್ಷಗಳ ಕಾಲ ವಕೀಲರಾಗಿ ದುಡಿದ ನಂತರದಲ್ಲಿ  1963 ರಲ್ಲಿ ತಮ್ಮ ಮೂಲ ವಕೀಲ ವೃತ್ತಿಗೆ ಗುಡ್ ಬೈ ಹೇಳಿದ  ಚಿನ್ನಸ್ವಾಮಿಯವರು ಪೂರ್ಣ ಪ್ರಮಾಣದ ಕ್ರಿಕೆಟ್ ಆಡಳಿತಗಾರರಾಗಿ ರೂಪಗೊಂಡರು,
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಡುವಂತಹ  ಸುಸಜ್ಜಿತವಾದ ಕ್ರೀಡಾಂಗಣ ಕಟ್ಟಬೇಕು ಎನ್ನುವುದು ಅವರ ಬಹುಕಾಲದ ಕನಸಾಗಿತ್ತು ಅದಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಲೇ ಬಂದಿದ್ದರು.
 ಅಂದಿನ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷರು  ಹಿರಿಯ ನಾಯಕರಾಗಿದ್ದ ಎಸ್. ನಿಜಲಿಂಗಪ್ಪ ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿ ಬಿಟ್ಟುಬಿಡದೆ ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಅಂಕಣವನ್ನು ನಿರ್ಮಿಸಲು ಮನವೊಲಿಸಿ ಕಡೆಗೂ ಯಶಸ್ವಿಯಾಗಿ ಕ್ರೀಡಾಂಗಣ ನಿರ್ಮಿಸಲು ಬೆಂಗಳೂರಿನ ಹೃದಯ ಭಾಗದಲ್ಲಿ ಜಾಗ ಪಡೆಯುತ್ತಾರೆ ಹಗಲಿರುಳು ಪಟ್ಟ ಶ್ರಮ ತೊಟ್ಟ ಹಟ ಇವರ ಯಶಸ್ಸಿಗೆ ಕಾರಣವಾಗಿತ್ತು. ಸಂಪೂರ್ಣ ಕಲ್ಲು ಬಂಡೆಗಳಿಂದ ಕೂಡಿದ್ದ ಆ ಜಾಗವನ್ನು ಸೇನೆಯ ಸಹಾಯ ಪಡೆದು ಮೊದಲಿಗೆ ಭೂಮಿಯನ್ನು ಸಮತಟ್ಟು  ಮಾಡಿ 1968 ರಲ್ಲಿ ಕ್ರೀಡಾಂಗಣದ ಕಟ್ಟಡದ ( ಫೇವಿಲಿಯನ್ ) ಕೆಲಸ ಆರಂಭಿಸಿದಾಗ  ರಾಜ್ಯ ಕ್ರಿಕೆಟ್ ಸಂಸ್ಥೆಯ ಬೊಕ್ಕಸದಲ್ಲಿ ಕೇವಲ 8 ಲಕ್ಷ ರೂಪಾಯಿ ಮಾತ್ರ ಇದ್ದುದ್ದರಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಬಾರಿ ಹಿನ್ನಡೆಯಾಗಿತ್ತು ಆದರೆ ಛಲ ಬಿಡದ ಚಿನ್ನಸ್ವಾಮಿ ಅವರು ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆಯುವ ವ್ಯಕ್ತಿಯೆ ಅಲ್ಲ
 ಚಿನ್ನಸ್ವಾಮಿಯವರು ಎದೆಗುಂದದೆ ಹಣ ಸಂಗ್ರಹಿಸಲು ಮುಂದಾಗಿ ಕ್ಲಬ್ ಸದಸ್ಯತ್ವ, ಪ್ರಾಯೋಜಕತ್ವದಂತಹ ಯೋಜನೆಗಳನ್ನು ರೂಪಿಸಿಕೊಂಡು. ಜೋತೆಗೆ ಕೆಲವರಿಂದ ದೇಣಿಗೆಯನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುತ್ತಾರೆ  ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದ ಕ್ರಿಕೆಟ್ ಕ್ರೀಡಾಂಗಣದ ಪ್ರತೀ ಒಂದು ಇಟ್ಟಿಗೆ ಕೂಡ ಚಿನ್ನಸ್ವಾಮಿಯವರ ಹೆಸರು ಹೇಳುತ್ತಿತ್ತು ಅ ಮಟ್ಟದಲ್ಲಿ ಚಿನ್ನಸ್ವಾಮಿ ಅವರ ಶ್ರಮದಾನವಿತ್ತು ಏಕೆಂದರೆ ಪ್ರತೀ ದಿನ ಮಳೆ, ಬಿಸಿಲು ಯಾವುವನ್ನೂ ಲೆಕ್ಕಿಸದೆ ಕೈಯಲ್ಲಿ ಒಂದು ಕೊಡೆ ಹಿಡಿದುಕೊಂಡು ಸಿಮೆಂಟ್ ಮೂಟೆಗಳ ಲೆಕ್ಕದಿಂದ ಹಿಡಿದು, ಮರಳು ಕಾಂಕ್ರೀಟ್ ಬೆರಸಿ ಒಂದೊಂದು ಇಟ್ಟಿಗೆಯನ್ನು ಇಡುವುದನ್ನೂ ಕೂಡ ಮುಂದೆ ನಿಂತು ಸಾಕಷ್ಟು  ಕಾಳಜಿಯಿಂದ ನೋಡಿಕೊಂಡಿದ್ದರು ಕ್ರೀಡಾಂಗಣವನ್ನು ನಿರ್ಮಿಸಿಯೆ ಬಿಟ್ಟರು
ಸುಸಜ್ಜಿತವಾಗಿ ನಿರ್ಮಾಣಗೊಂಡ ಬೆಂಗಳೂರಿನ ಈ ಹೊಸ ಕ್ರೀಡಾಂಗಣದಲ್ಲಿ 1972 ರಲ್ಲಿ ಮೈಸೂರು ಹಾಗೂ ಹೈದರಾಬಾದ್ ನಡುವೆ ಮೊದಲ ರಣಜಿ ಪಂದ್ಯ ಈ ಕ್ರೀಡಾಂಗಣದಲ್ಲಿ ನೆಡೆದರೆ ಚಿನ್ನಸ್ವಾಮಿ ಅವರ ಬದುಕಿನ ಕನಸಾಗಿದ್ದ   ಟೆಸ್ಟ್ ಪಂದ್ಯ ಕೂಡ ಈ ಕ್ರೀಡಾಂಗಣದಲ್ಲಿ ನೆಡೆಯಿತು ಭಾರತ ಮತ್ತು  ವೆಸ್ಟ್ ಇಂಡೀಸ್ ನಡುವೆ 1974 ರಲ್ಲಿ ಈ ಪಂದ್ಯ ನಡೆಯಿತು. ಮೊದಲ ಪಂದ್ಯಕ್ಕೇ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಕನ್ನಡಿಗರ ಕ್ರಿಕೆಟ್ ಪ್ರೀತಿಗೆ ಚಿನ್ನಸ್ವಾಮಿ ನೆತ್ರುತ್ವದಲ್ಲಿ ನಿರ್ಮಿತವಾದ ಕ್ರೀಡಾಂಗಣ ಸಾಕ್ಷಿಯಾಗಿತ್ತು. ಪಂದ್ಯವೊಂದನ್ನು ಆಯೋಜಿಸಿ ಅಂದು ಬೆಂಗಳೂರು ಕೂಡ ಟೆಸ್ಟ್  ಕ್ರಿಕೆಟ್ ನ ಇತಿಹಾಸದ ಪುಟ ಸೇರಿ ಕನ್ನಡಿಗರಿಗೆ ಹೆಮ್ಮೆ ತಂದಿತ್ತು.
ಜೊತೆಗೆ ರಾಜ್ಯದಲ್ಲಿ ಕ್ರಿಕೆಟ್ ತಂಡವನ್ನು ಬಲಗೊಳ್ಳಿಸಲು ಪ್ರತಿಭಾನ್ವಿತ ಆಟಗಾರರನ್ನು ಹುಟ್ಟಿ ಹಾಕಲು  ಚಿನ್ನಸ್ವಾಮಿಯವರು ಹೊಸಬಗೆಯ ವಿಶೇಷ ಯೋಜನೆಗಳು, ಕಿರಿಯರ ಮತ್ತು ವಲಯವಾರು ಪಂದ್ಯಾವಳಿಗಳನ್ನು ರೂಪಿಸಿ 1974 ರಲ್ಲಿ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಮೂಲಕ ಫಲ ಕೊಟ್ಟವು ಎಂದರೆ ತಪ್ಪಾಗಲಾರದು.
ದಕ್ಷಿಣ ಭಾರತದ ಕ್ರಿಕೆಟ್ ಸಂಸ್ಥೆಗಳಾದ ಮದ್ರಾಸ್ ಮತ್ತು ಹೈದರಾಬಾದ್ ಸಂಸ್ಥೆಯೊಂದಿಗೆ ಕೈಜೋಡಿಸಿ
  ಒಳ್ಳೆಯ ನಂಟನ್ನು ಬೆಳೆಸಿಕೊಂಡು ಪ್ರಾಮಾಣಿಕ ಆಡಳಿತದಲ್ಲಿ ಎಲ್ಲರ ಮೆಚ್ಚುಗೆ ವಿಶ್ವಾಸ ಗಳಿಸಿ ಬಿಸಿಸಿಐ ನಲ್ಲೂ ಚಿನ್ನಸ್ವಾಮಿ ಪ್ರಭಾವಶಾಲಿಯಾಗಿ  ಬೆಳೆಯುತ್ತಾ ಹೋದರು. 1958 ರಿಂದ 1960 ಬಿಸಿಸಿಐನ ಸಹ ಕಾರ್ಯದರ್ಶಿಯಾಗಿದ್ದ ಚಿನ್ನಸ್ವಾಮಿ ಅವರು 1965 ರಲ್ಲಿ ಪ್ರಧಾನ ಕಾರ್ಯದರ್ಶಿ  ಗದ್ದುಗೆಗೆ ಏರಿದರು. ಆ ಬಳಿಕ 1967/68 ರಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಜಾಂಜಿ ಕೂಡಾ ಆಗಿದ್ದರು. 1965 ರಿಂದ ಸತತ 11 ವರ್ಷಗಳ ಕಾಲ ಬಿಸಿಸಿಐ ನ ಉಪಾಧ್ಯಕ್ಷರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದರು ಕಡೆಗೆ 1977 ರಿಂದ 1980 ರವೆರಗೂ ಬಿಸಿಸಿಐ ನ ಅಧ್ಯಕ್ಷರಾಗಿ ಭಾರತದ ಕ್ರಿಕೆಟ್ ಸಂಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿದು ಎಲ್ಲರ ಮೆಚ್ಚುಗೆ ಗಳಿಸಿದ್ದರು ಈ ಕ್ಷಣದ ವರೆಗೂ ಇಂದಿಗೂ ಭಾರತೀಯ ಕ್ರಿಕೆಟ್ ಸಂಸ್ಥೆಯ ಆಡಳಿತದಲ್ಲಿ ಚಿನ್ನಸ್ವಾಮಿಯವರು ಏರಿದ ಈ ಮಟ್ಟವನ್ನು ಇದುವರೆಗೂ ಯಾವೊಬ್ಬ ಕನ್ನಡಿಗನೂ ಏರಿಲ್ಲ ಎಂದರೆ ನಂಬಲೆ ಬೇಕು.
ಚಿನ್ನಸ್ವಾಮಿಯವರು ಬಿಸಿಸಿಐ ನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಂಸ್ಥೆಯ ಬೊಕ್ಕಸದಲ್ಲಿ 1.4 ಕೋಟಿ ರೂಪಾಯಿಗಳು ಇದ್ದವು. ಕೇವಲ ಪಂದ್ಯಗಳ ಟಿಕೆಟ್ ಮಾರಾಟವೊಂದೇ ಆದಾಯದ ಮಾರ್ಗವಾಗಿದ್ದಾಗ ಚಿನ್ನಸ್ವಾಮಿಯವರು ಒಂದು ಕೋಟಿ ರೂಪಾಯಿಗಳನ್ನು ಆರು ಪ್ರತ್ಯೇಕ ಖಾಸಗಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಅವುಗಳಿಂದ ಬಡ್ಡಿ ರೂಪದಲ್ಲಿ ವಾರ್ಷಿಕ 14 ಲಕ್ಷ ರೂಪಾಯಿಗಳು ಸಂಸ್ತೆಗೆ ಹರಿದು ಬರುವಂತೆ ಮಾಡಿದರು. ದೇಸಿ ಕ್ರಿಕೆಟ್ ಆಯೋಜನೆ, ತರಬೇತಿ ಶಿಬಿರಗಳು, ಆಟಗಾರರ ಪ್ರಯಾಣ ಹಾಗೂ ಎಲ್ಲಾ ಬಗೆಯ ಖರ್ಚು-ವೆಚ್ಚಗಳಿಗಾಗಿ ಬಿಸಿಸಿಐಗೆ ಬೇಕಾಗಿದ್ದ ವಾರ್ಷಿಕ 9 ಲಕ್ಷ ರೂಪಾಯಿಗಳನ್ನು ಹೂಡಿಕೆಯಿಂದ ಬಂದ ಹಣದಿಂದ ನಿಭಾಯಿಸಿ ಸಂಸ್ಥೆಯ ಬೊಕ್ಕಸ ತುಂಬಿಸುತ್ತಾ ಹೋದರು. ಚಿನ್ನಸ್ವಾಮಿ ಅವರ ಆಡಳಿತದ ಮೂರೂ ವರ್ಷಗಳಲ್ಲಿ ಬಿಸಿಸಿಐ ಎಂದೂ ಕಾಣದ ಲಾಭ ಕಂಡಿತು. ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಂಟಕಪ್ರಾಯವಾಗಿದ್ದ 1977 ರ ಕೆರ‍್ರಿ ಪ್ಯಾಕರ್ ರೆಬೆಲ್ ಲೀಗ್ ಪ್ರವಾಸದ ವೇಳೆ ಭಾರತದ ಯಾವೊಬ್ಬ ಆಟಗಾರ ಕೂಡ ಹಣದ ಆಮಿಶಕ್ಕೊಳಗಾಗಿ ರಾಷ್ಟ್ರೀಯ ತಂಡ ತೊರೆಯದಂತೆ ನೋಡಿಕೊಳ್ಳುವಲ್ಲಿ ಚಿನ್ನಸ್ವಾಮಿಯವರ ಪಾತ್ರ ದೊಡ್ಡದಾಗಿತ್ತು. ಎಲ್ಲಾ ದೇಶದ ದಿಗ್ಗಜ ಆಟಗಾರರೂ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಬದಿಗೊತ್ತಿ ಕೆರ‍್ರಿ ಪ್ಯಾಕರ್ ಗಾಗಿ ಆಡಲು ಕಣಕ್ಕಿಳಿದರೂ ಭಾರತದ ಒಬ್ಬ ಆಟಗಾರ ಕೂಡ ಪ್ಯಾಕರ್ ತೆಕ್ಕೆಗೆ ಬೀಳದಂತೆ ನೋಡಿಕೊಂಡಿದ್ದರು  ಐಸಿಸಿಯಲ್ಲಿ ಭಾರತದ ಪ್ರತಿನಿಧಿಯಾಗಿ ಕೂಡ ಅವರು 1965, 1973 ಮತ್ತು 1977-1980 ರ ನಡುವೆ ಹಾಜರಿದ್ದು ಭಾರತದ ಬೇಡಿಕೆಗಳನ್ನು ಮುಂದಿಟ್ಟಿದ್ದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

15 − 6 =