ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು.
*ಗೌತಮ್ ಶೆಟ್ಟಿಯವರಿಗೆ ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ-2023*
1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ.ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು” ಹಾಗೂ 95-96 ನೇ ಬ್ಯಾಚ್ ನ ತರಬೇತಿಯ ದಿನಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಮಲ್ಲಯ್ಯ ಶ್ರೀಮಠ ರವರು ವಹಿಸಿದ್ದರು.ಜಯಪ್ಪ ಕೃಷಿಕರು ಲಕ್ಷ್ಮೀಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶ್ರೀಮತಿ ಪಲ್ಲವಿ ಸಿ.ಟಿ ರವಿ ಚಿಕ್ಕಮಗಳೂರು,ಶ್ರೀಯುತ ಹೆಚ್.ಪಿ ಕುಮಾರಸ್ವಾಮಿ ಕಲಾವಿದರು,ಅಪೇಕ್ಷಾ ಮಂಜುನಾಥ್ ಮುಂತಾದ ಗಣ್ಯರು ಭಾಗವಹಿಸಿದ್ದರು…