ಕ್ರಿಕೆಟ್ಅರಸೀಕೆರೆಯ ಬೆಂಕಿ ಚೆಂಡು Bennyಗೆ, ಜಾವಗಲ್ ಶ್ರೀನಾಥ್ ಅವರ ಆಪ್ತಮಿತ್ರನಿಗೆ ಆತ್ಮಹತ್ಯೆ...

ಅರಸೀಕೆರೆಯ ಬೆಂಕಿ ಚೆಂಡು Bennyಗೆ, ಜಾವಗಲ್ ಶ್ರೀನಾಥ್ ಅವರ ಆಪ್ತಮಿತ್ರನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು ಏನಾಗಿತ್ತು..?

-

- Advertisment -spot_img
ಡೇವಿಡ್ ಜಾನ್ಸನ್ ಅವರ ಆತ್ಮಹತ್ಯೆಯ ಸುದ್ದಿ ಕಿವಿಗೆ ಬಿದ್ದ ಕ್ಷಣದಿಂದ ಮನಸ್ಸು ವಿಚಲಿತಗೊಂಡಿದೆ. ಕಾರಣ, ಇವತ್ತು ಉಸಿರು ಚೆಲ್ಲಿರುವುದು ಒಳ್ಳೆಯ ಕ್ರಿಕೆಟಿಗನಷ್ಟೇ ಅಲ್ಲ, ಒಬ್ಬ ಒಳ್ಳೆಯ ಮನುಷ್ಯ.
ಅವರು ನಮ್ಮ ತಲೆಮಾರಿನ ಕ್ರಿಕೆಟಿಗನೂ ಅಲ್ಲ.. ಅವರ ಆಟವನ್ನು ನಾನು ನೋಡಿಯೂ  ಇಲ್ಲ. ನಾವಿನ್ನೂ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದ ದಿನಗಳಲ್ಲಿ ಕರ್ನಾಟಕ ಪರ ಧೂಳೆಬ್ಬಿಸಿದ್ದ ಘಾತಕ ವೇಗದ ಬೌಲರ್ ಡೇವಿಡ್ ಜಾನ್ಸನ್. ಆ ಸುನಾಮಿಯಂಥಾ ವೇಗವನ್ನು ಕಣ್ಣಾರೆ ನೋಡದಿದ್ದರೂ,  ಅರಸೀಕೆರೆಯ ಆ ಬೆಂಕಿ ಚೆಂಡಿನ ಬಗ್ಗೆ ಸಾಕಷ್ಟು ಕಥೆಗಳನ್ನು, ದಂತಕಥೆಗಳನ್ನು ಕೇಳಿ ತಿಳಿದಿದ್ದೇನೆ. ಅವರ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಪಾಪದ ಮನುಷ್ಯ..!
ಕರ್ನಾಟಕದಿಂದ ಭಾರತ ಪರ ಆಡಿದ್ದ ವೇಗಿಗಳಲ್ಲಿ ಇಬ್ಬರು genuine fast bowlerಗಳು ಬಂದದ್ದು ಅರಸೀಕೆರೆಯಿಂದ. ಒಬ್ಬರು ಜಾವಗಲ್ ಶ್ರೀನಾಥ್, ಇನ್ನೊಬ್ಬರು ಡೇವಿಡ್ ಜಾನ್ಸನ್. ಒಂದೇ ಪ್ರದೇಶದಿಂದ ಬಂದವರಾಗಿದ್ದ ಕಾರಣ, ಆಪ್ತಮಿತ್ರರೂ ಆಗಿದ್ದರು.
ಶ್ರೀನಾಥ್ ಅವರಂತೆ ಡೇವಿಡ್ ಜಾನ್ಸನ್ ಕೂಡ fiery paceಗೆ ಹೆಸರಾದವರು. ಅವರ ಬಹುತೇಕ ಎಸೆತಗಳು  150 km/h ಮುಟ್ಟುತ್ತಿದ್ದವು.
17ನೇ ವರ್ಷದಲ್ಲಿ ಫ್ಲಡ್ ಲೈಟ್ ಟೆನಿಸ್ ಬಾಲ್ ಟೂರ್ನಿಯ ಪಂದ್ಯವೊಂದರಲ್ಲಿ 8 ವಿಕೆಟ್’ಗಳನ್ನು ಪಡೆದಾಗ, ಸ್ನೇಹಿತರೊಬ್ಬರು Swastic Union Cricket Club ಸೇರಿಕೊಳ್ಳುವಂತೆ ಹೇಳುತ್ತಾರೆ. ಟೆನಿಸ್ ಬಾಲ್ ಕ್ರಿಕೆಟ್’ನಲ್ಲಿ ಪಳಗಿದ್ದ ಡೇವಿಡ್ ಮೊದಲ ಬಾರಿ ಲೆದರ್ ಬಾಲ್ ಹಿಡಿದದ್ದು ಅಲ್ಲೇ.
ಕ್ಲಬ್ ಮ್ಯಾಚ್ ಒಂದರಲ್ಲಿ ರಾಹುಲ್ ದ್ರಾವಿಡ್ ಸಹಿತ ಕರ್ನಾಟಕ ರಣಜಿ ತಂಡದ ದಿಗ್ಗಜರನ್ನೇ ಬೆಚ್ಚಿ ಬೀಳಿಸಿ 8 ವಿಕೆಟ್ ಉಡಾಯಿಸಿದ್ದರು ಡೇವಿಡ್ ಜಾನ್ಸನ್. 1992ರಿಂದ 2002ರವರೆಗೆ 39 ಪ್ರಥಮದರ್ಜೆ ಪಂದ್ಯಗಳು.. 125 ವಿಕೆಟ್’ಗಳು.. ಕೆಳ ಕ್ರಮಾಂಕದಲ್ಲಿ ಆಡಿ ಒಂದು ಶತಕ. ಕರ್ನಾಟಕ ಪರ ಪ್ರತೀ ಪಂದ್ಯವನ್ನೂ ಹೃದಯದಿಂದ ಆಡುತ್ತಿದ್ದ fierce competitor.
1996ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ test debut. ಮೊದಲ ಬಲಿ ಮೈಕಲ್ ಸ್ಲೇಟರ್. 157 km/h ಸ್ಪೀಡ್’ನಲ್ಲಿ ನುಗ್ಗಿ ಬಂದಿದ್ದ ಆ ಎಸೆತಕ್ಕೆ ಆಸೀಸ್ ಓಪನರ್ ದಂಗಾಗಿ ನಿಂತಿದ್ದನಂತೆ..!
ಡೇವಿಡ್ ಜಾನ್ಸನ್ ವೃತ್ತಿಜೀವನದ ಕೊನೆಯ ಪ್ರಥಮದರ್ಜೆ ಪಂದ್ಯವಾಡಿದಾಗ ಅವರ ವಯಸ್ಸು ಕೇವಲ 31. ನಿವೃತ್ತಿಯ ನಂತರ ಕೋಚಿಂಗ್, ಕ್ರಿಕೆಟ್ ಅಕಾಡೆಮಿ ನಡೆಸಿದರೂ ಅದು ಕೈ ಹಿಡಿಯಲಿಲ್ಲ. ಖಿನ್ನತೆಗೆ ಜಾರಿದರು, ದುಶ್ಚಟಗಳು ಬೆನ್ನು ಹತ್ತಿದವು. ಆರೋಗ್ಯ ಪದೇ ಪದೇ ಕೈಕೊಡುತ್ತಿತ್ತು.
ಮೈ ತುಂಬಾ ಸಾಲ ಮಾಡಿಕೊಂಡಿದ್ದರೆಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ. ಏನೇ ಸಮಸ್ಯೆಗಳಿದ್ದರೂ ಆತ್ಮಹತ್ಯೆ ಪರಿಹಾರವಲ್ಲ. ಅವರನ್ನೇ ನಂಬಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಯಾದರೂ ಅವರು ಪ್ರಾಣ ಕಳೆದುಕೊಳ್ಳುವ ನಿರ್ಧಾರವನ್ನು ಬದಲಿಸಬೇಕಿತ್ತು. ನೀವು ತಪ್ಪು ಮಾಡಿ ಬಿಟ್ಟಿರಿ Benny ಸರ್..!
#ripdavidjohson #davidjohnson

LEAVE A REPLY

Please enter your comment!
Please enter your name here

19 − 4 =

Latest news

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ...
- Advertisement -spot_imgspot_img

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಬೈಂದೂರಿನ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ (VCC) ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA)...

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

Must read

- Advertisement -spot_imgspot_img

You might also likeRELATED
Recommended to you