10.1 C
London
Tuesday, November 5, 2024
Homeಕ್ರಿಕೆಟ್ಅರಸೀಕೆರೆಯ ಬೆಂಕಿ ಚೆಂಡು Bennyಗೆ, ಜಾವಗಲ್ ಶ್ರೀನಾಥ್ ಅವರ ಆಪ್ತಮಿತ್ರನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು ಏನಾಗಿತ್ತು..?

ಅರಸೀಕೆರೆಯ ಬೆಂಕಿ ಚೆಂಡು Bennyಗೆ, ಜಾವಗಲ್ ಶ್ರೀನಾಥ್ ಅವರ ಆಪ್ತಮಿತ್ರನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು ಏನಾಗಿತ್ತು..?

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಡೇವಿಡ್ ಜಾನ್ಸನ್ ಅವರ ಆತ್ಮಹತ್ಯೆಯ ಸುದ್ದಿ ಕಿವಿಗೆ ಬಿದ್ದ ಕ್ಷಣದಿಂದ ಮನಸ್ಸು ವಿಚಲಿತಗೊಂಡಿದೆ. ಕಾರಣ, ಇವತ್ತು ಉಸಿರು ಚೆಲ್ಲಿರುವುದು ಒಳ್ಳೆಯ ಕ್ರಿಕೆಟಿಗನಷ್ಟೇ ಅಲ್ಲ, ಒಬ್ಬ ಒಳ್ಳೆಯ ಮನುಷ್ಯ.
ಅವರು ನಮ್ಮ ತಲೆಮಾರಿನ ಕ್ರಿಕೆಟಿಗನೂ ಅಲ್ಲ.. ಅವರ ಆಟವನ್ನು ನಾನು ನೋಡಿಯೂ  ಇಲ್ಲ. ನಾವಿನ್ನೂ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದ ದಿನಗಳಲ್ಲಿ ಕರ್ನಾಟಕ ಪರ ಧೂಳೆಬ್ಬಿಸಿದ್ದ ಘಾತಕ ವೇಗದ ಬೌಲರ್ ಡೇವಿಡ್ ಜಾನ್ಸನ್. ಆ ಸುನಾಮಿಯಂಥಾ ವೇಗವನ್ನು ಕಣ್ಣಾರೆ ನೋಡದಿದ್ದರೂ,  ಅರಸೀಕೆರೆಯ ಆ ಬೆಂಕಿ ಚೆಂಡಿನ ಬಗ್ಗೆ ಸಾಕಷ್ಟು ಕಥೆಗಳನ್ನು, ದಂತಕಥೆಗಳನ್ನು ಕೇಳಿ ತಿಳಿದಿದ್ದೇನೆ. ಅವರ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಪಾಪದ ಮನುಷ್ಯ..!
ಕರ್ನಾಟಕದಿಂದ ಭಾರತ ಪರ ಆಡಿದ್ದ ವೇಗಿಗಳಲ್ಲಿ ಇಬ್ಬರು genuine fast bowlerಗಳು ಬಂದದ್ದು ಅರಸೀಕೆರೆಯಿಂದ. ಒಬ್ಬರು ಜಾವಗಲ್ ಶ್ರೀನಾಥ್, ಇನ್ನೊಬ್ಬರು ಡೇವಿಡ್ ಜಾನ್ಸನ್. ಒಂದೇ ಪ್ರದೇಶದಿಂದ ಬಂದವರಾಗಿದ್ದ ಕಾರಣ, ಆಪ್ತಮಿತ್ರರೂ ಆಗಿದ್ದರು.
ಶ್ರೀನಾಥ್ ಅವರಂತೆ ಡೇವಿಡ್ ಜಾನ್ಸನ್ ಕೂಡ fiery paceಗೆ ಹೆಸರಾದವರು. ಅವರ ಬಹುತೇಕ ಎಸೆತಗಳು  150 km/h ಮುಟ್ಟುತ್ತಿದ್ದವು.
17ನೇ ವರ್ಷದಲ್ಲಿ ಫ್ಲಡ್ ಲೈಟ್ ಟೆನಿಸ್ ಬಾಲ್ ಟೂರ್ನಿಯ ಪಂದ್ಯವೊಂದರಲ್ಲಿ 8 ವಿಕೆಟ್’ಗಳನ್ನು ಪಡೆದಾಗ, ಸ್ನೇಹಿತರೊಬ್ಬರು Swastic Union Cricket Club ಸೇರಿಕೊಳ್ಳುವಂತೆ ಹೇಳುತ್ತಾರೆ. ಟೆನಿಸ್ ಬಾಲ್ ಕ್ರಿಕೆಟ್’ನಲ್ಲಿ ಪಳಗಿದ್ದ ಡೇವಿಡ್ ಮೊದಲ ಬಾರಿ ಲೆದರ್ ಬಾಲ್ ಹಿಡಿದದ್ದು ಅಲ್ಲೇ.
ಕ್ಲಬ್ ಮ್ಯಾಚ್ ಒಂದರಲ್ಲಿ ರಾಹುಲ್ ದ್ರಾವಿಡ್ ಸಹಿತ ಕರ್ನಾಟಕ ರಣಜಿ ತಂಡದ ದಿಗ್ಗಜರನ್ನೇ ಬೆಚ್ಚಿ ಬೀಳಿಸಿ 8 ವಿಕೆಟ್ ಉಡಾಯಿಸಿದ್ದರು ಡೇವಿಡ್ ಜಾನ್ಸನ್. 1992ರಿಂದ 2002ರವರೆಗೆ 39 ಪ್ರಥಮದರ್ಜೆ ಪಂದ್ಯಗಳು.. 125 ವಿಕೆಟ್’ಗಳು.. ಕೆಳ ಕ್ರಮಾಂಕದಲ್ಲಿ ಆಡಿ ಒಂದು ಶತಕ. ಕರ್ನಾಟಕ ಪರ ಪ್ರತೀ ಪಂದ್ಯವನ್ನೂ ಹೃದಯದಿಂದ ಆಡುತ್ತಿದ್ದ fierce competitor.
1996ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ test debut. ಮೊದಲ ಬಲಿ ಮೈಕಲ್ ಸ್ಲೇಟರ್. 157 km/h ಸ್ಪೀಡ್’ನಲ್ಲಿ ನುಗ್ಗಿ ಬಂದಿದ್ದ ಆ ಎಸೆತಕ್ಕೆ ಆಸೀಸ್ ಓಪನರ್ ದಂಗಾಗಿ ನಿಂತಿದ್ದನಂತೆ..!
ಡೇವಿಡ್ ಜಾನ್ಸನ್ ವೃತ್ತಿಜೀವನದ ಕೊನೆಯ ಪ್ರಥಮದರ್ಜೆ ಪಂದ್ಯವಾಡಿದಾಗ ಅವರ ವಯಸ್ಸು ಕೇವಲ 31. ನಿವೃತ್ತಿಯ ನಂತರ ಕೋಚಿಂಗ್, ಕ್ರಿಕೆಟ್ ಅಕಾಡೆಮಿ ನಡೆಸಿದರೂ ಅದು ಕೈ ಹಿಡಿಯಲಿಲ್ಲ. ಖಿನ್ನತೆಗೆ ಜಾರಿದರು, ದುಶ್ಚಟಗಳು ಬೆನ್ನು ಹತ್ತಿದವು. ಆರೋಗ್ಯ ಪದೇ ಪದೇ ಕೈಕೊಡುತ್ತಿತ್ತು.
ಮೈ ತುಂಬಾ ಸಾಲ ಮಾಡಿಕೊಂಡಿದ್ದರೆಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ. ಏನೇ ಸಮಸ್ಯೆಗಳಿದ್ದರೂ ಆತ್ಮಹತ್ಯೆ ಪರಿಹಾರವಲ್ಲ. ಅವರನ್ನೇ ನಂಬಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಯಾದರೂ ಅವರು ಪ್ರಾಣ ಕಳೆದುಕೊಳ್ಳುವ ನಿರ್ಧಾರವನ್ನು ಬದಲಿಸಬೇಕಿತ್ತು. ನೀವು ತಪ್ಪು ಮಾಡಿ ಬಿಟ್ಟಿರಿ Benny ಸರ್..!
#ripdavidjohson #davidjohnson

Latest stories

LEAVE A REPLY

Please enter your comment!
Please enter your name here

17 − four =