ಕುಂದಾಪುರ-ಮೂಲತಃ ಬೈಂದೂರು ನಾಗೂರಿನ ನಿವಾಸಿ,ಯುವ ಪ್ರತಿಭಾನ್ವಿತ ಕ್ರಿಕೆಟಿಗ ಮಹಮ್ಮದ್ ಪರ್ವೇಜ್(37ವರ್ಷ)ಸೋಮವಾರ ಬೆಳಿಗ್ಗೆ ತಲ್ಲೂರಿನ ಹೇರಿಕುದ್ರು ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು.
ಮಹಮ್ಮದ್ ಪರ್ವೇಜ್ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಉತ್ತಮ ಕ್ರೀಡಾಪಟುವಾಗಿ ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ್ದರು.
ವೇಗದ ಜೊತೆ ಸ್ವಿಂಗ್ ಮಿಶ್ರಿತ ಎಡಗೈ ಬೌಲರ್ ಆಗಿದ್ದ ಪರ್ವೇಜ್ ಆರಂಭಿಕ ದಿನಗಳಲ್ಲಿ
ಎಫ್.ಸಿ.ಸಿ ನಾಗೂರು,8.ಕಾಮ್ ಉಪ್ಪುಂದ,ತೌಹೀದ್ ಫ್ರೆಂಡ್ಸ್ ಹೀಗೆ ನಾಗೂರಿನ ಸ್ಥಳೀಯ ತಂಡಗಳ ಪರವಾಗಿ ಆಡಿ ಶ್ರೇಷ್ಠ ಮಟ್ಟದ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದರು.
ತದ ನಂತರದ ದಿನಗಳಲ್ಲಿ ಟೊರ್ಪೆಡೋಸ್ ಮತ್ತು ಸಾಯಿ ಸವ್ಯಸಾಚಿ ತಂಡಗಳ ಪರವಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಾನಾಡಿದ ತಂಡದ ಗೆಲುವಿಗೆ ಕಾರಣರಾಗಿದ್ದರು.
ಕ್ರೀಡಾ ಜೀವನದುದ್ದಕ್ಕೂ ಶಿಸ್ತು, ಕ್ರೀಡಾಸ್ಪೂರ್ತಿ ಮೆರೆದು ಇಂದು ನಮ್ಮನ್ನಗಲಿದ ಶ್ರೇಷ್ಠ ಕ್ರಿಕೆಟಿಗ ಮಹಮ್ಮದ್ ಪರ್ವೇಜ್ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್, ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ಪರವಾಗಿ ಪ್ರಾರ್ಥಿಸುತ್ತೇವೆ.