ಜಿ ಎಸ್ ಬಿ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದಂತಹ ಹರಿ ಓಂ ಗಂಗೊಳ್ಳಿ ಸುಮಾರು ಎರಡು ದಶಕಕ್ಕೂ ಮಿಕ್ಕಿ ಜಿ ಎಸ್ ಬಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾ ಬಂದಿದೆ.
ಹರಿ ಓಂ ಗಂಗೊಳ್ಳಿ ಮಾರ್ಚ್ 9 ರಂದು ಗಂಗೊಳ್ಳಿಯ ಎಸ್ ವಿ ಹೈಯರ್ ಪ್ರೈಮರಿ ಸ್ಕೂಲ್ ಮೈದಾನದಲ್ಲಿ ಎರಡು ದಿನಗಳ ತೀವ್ರ ಪೈಪೋಟಿಯೊಂದಿಗೆ ಜಿ ಎಸ್ ಬಿ ಸಮುದಾಯವನ್ನು ಆಕರ್ಷಿಸುವ ಕ್ರಿಕೆಟ್ ಪಂದ್ಯಾವಳಿಯ ಬಹು ನಿರೀಕ್ಷಿತ ಹರಿ ಓಂ ಗಂಗೊಳ್ಳಿ ಜಿ ಎಸ್ ಬಿ ಪ್ರೀಮಿಯರ್ ಲೀಗ್ 2024 ಅನ್ನು ಘೋಷಿಸಲು ರೋಮಾಂಚನಗೊಂಡಿದೆ. ಇದು ಹೊನಲು ಬೆಳಕಿನ 30 ಗಜಗಳ ಫ್ರ್ಯಾಂಚೈಸ್ ಆಧಾರಿತ ಕ್ರಿಕೆಟ್ ಪಂದ್ಯಾಟ ವಾಗಿದ್ದು ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ಹಲವಾರು ಜಿ ಎಸ್ ಬಿ ಕ್ರಿಕೆಟಿಗರು ಪಂದ್ಯಾವಳಿಗೆ ನೋಂದಾಯಿಸಿಕೊಂಡಿದ್ದಾರೆ. ಹರಾಜಿನ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ನೀಡಲಾಗುವುದು.
ಇದು ಹರಿ ಓಂ ಗಂಗೊಳ್ಳಿ ಹಮ್ಮಿಕೊಂಡ ಐದನೇ ಆವೃತ್ತಿಯ ಪಂದ್ಯಾವಳಿ. ಎರಡು ದಿನಗಳ ಈವೆಂಟ್ ಕ್ರೀಡಾ ಮನೋಭಾವ, ಸೌಹಾರ್ದತೆ , ಬಾಂಧವ್ಯ ಬೆಸೆಯುವ ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿದ ಆಕ್ಷನ್-ಪ್ಯಾಕ್ಡ್ ಕ್ರಿಕೆಟ್ ಪಂದ್ಯಗಳನ್ನು ಖಾತರಿಪಡಿಸುತ್ತದೆ. ವಿಜೇತರು ಮತ್ತು ರನ್ನರ್ಸ್‌ಅಪ್‌ಗಳಿಗೆ ಕ್ರಮವಾಗಿ ರೂ 55,555 ಮತ್ತು ರೂ 33,333 ನಗದು ಬಹುಮಾನ ನೀಡಲಾಗುವುದು. ಉತ್ತಮ ಆಟಗಾರರಿಗೆ ಹಲವಾರು ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.
“ನಾವು ಹರಿ ಓಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2024 – ಸೀಸನ್ V ಅನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ. ಕಳೆದ 5 ವರ್ಷಗಳಿಂದಲೂ ಹಲವು ಪಂದ್ಯಾವಳಿಗಳು ನಡೆದಿದ್ದರೂ ನಾವು ಈ ಬಾರಿಯ ಗಂಗೊಳ್ಳಿ ಜಿ ಎಸ್ ಬಿ ಪ್ರೀಮಿಯರ್ ಲೀಗ್ ಅನ್ನು ವಿಭಿನ್ನವಾಗಿ ಮಾಡಲು ಯೋಜಿಸಿದ್ದೇವೆ “ಎಂದು ಆಯೋಜಕರಲ್ಲಿ ಓರ್ವರಾದ ಶ್ರೀ ನಾಗೇಶ್ ಪೈ ಹೇಳಿದರು.