Home ಕ್ರಿಕೆಟ್ ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ “ಚಮಕ್” ಇನಾಮು.

ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ “ಚಮಕ್” ಇನಾಮು.

ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ “ಚಮಕ್” ಇನಾಮು.
ಚಮಕ್ ಕ್ರಿಕೆಟರ್ಸ್ ಅರಸೀಕೆರೆ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರು,ಸಲೀನ ಟ್ರಾನ್ಸ್‌ಪೋರ್ಟ್‌ ನ ಮಾಲೀಕರಾದ ಸಲ್ಲವುದ್ದೀನ್ ಸಲ್ಮಾನ್ ಇವರ ದಕ್ಷ ಸಾರಥ್ಯದಲ್ಲಿ,ಹೆಚ್.ರಿಯಾಜ್ ಅಹಮ್ಮದ್,ಶ್ರೀಧರ್ ಹಾಗೂ ವೆಂಕಟೇಶ್ ಇವರ ಸ್ಮರಣಾರ್ಥವಾಗಿ ಅರಸೀಕೆರೆಯ ರೈಲ್ವೇ ಮೈದಾನದಲ್ಲಿ ಆಯೋಜಿಸಲಾಗಿದ್ದ,ಪ್ರತಿಷ್ಟಿತ  ಚಮಕ್ ಕಪ್-2021 ಉಡುಪಿಯ ಜಾನ್ಸನ್ ರಿಯಲ್ ಫೈಟರ್ಸ್ ತಂಡ ಜಯಿಸಿದೆ.
ರಾಜ್ಯದ ಬಲಿಷ್ಠ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್ ನ ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ,
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫ್ರೆಂಡ್ಸ್ ಬೆಂಗಳೂರು ತಂಡ 6.3 ಓವರ್ ಗಳಲ್ಲಿ 31 ರನ್ ಗಳಿಗೆ ಸರ್ವಪತನ ಕಂಡಿತ್ತು.ಸುಲಭದ ಗುರಿಯನ್ನು ಬೆನ್ನಟ್ಟಿದ ಜಾನ್ಸನ್ ರಿಯಲ್ ಫೈಟರ್ಸ್ ನ ಆಟಗಾರರು 5.5 ಓವರ್ ಗಳಲ್ಲಿ ಗುರಿ ಮುಟ್ಟಿತ್ತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಜಾನ್ಸನ್ ರಿಯಲ್ ಫೈಟರ್ಸ್ ತಂಡ 2 ಲಕ್ಷ,ದ್ವಿತೀಯ ಸ್ಥಾನಿ ಫ್ರೆಂಡ್ಸ್ ಬೆಂಗಳೂರು 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ ಹರಿ,ಬೆಸ್ಟ್ ಬೌಲರ್ ವಿಮಲ್,ಬೆಸ್ಟ್ ಕೀಪರ್ ರಾಜಾ ಸಾಲಿಗ್ರಾಮ ಹಾಗೂ ಸರಣಿಯುದ್ದಕ್ಕೂ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಿದ ಕಿಝರ್ ಹಾಗೂ ಬೌಲಿಂಗ್ ನಲ್ಲಿ ಶ್ರೇಷ್ಟ ನಿರ್ವಹಣೆ ನೀಡಿದ ಚವನ್ ಸಾಲಿಗ್ರಾಮ ಸರಣಿಶ್ರೇಷ್ಟ ಪ್ರಶಸ್ತಿರೂಪದಲ್ಲಿ ದ್ವಿಚಕ್ರ ವಾಹನ ತಮ್ಮದಾಗಿಸಿಕೊಂಡರು.
ಅತ್ಯಂತ ಶಿಸ್ತುಬದ್ಧ ಹಾಗೂ ವ್ಯವಸ್ಥಿತವಾಗಿ ನಡೆದ ಈ ಪಂದ್ಯಾವಳಿಗೆ ಭಾರತ ಅಂತರಾಷ್ಟ್ರೀಯ ತಂಡದ ಮಾಜಿ ಕಪ್ತಾನ‌ ಅಜರುದ್ದೀನ್ ಸಹಿತ ಅನೇಗ ಗಣ್ಯರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ‌
ಶಾಸಕರಾದ ಕೆ‌.ಎಂ.ಶಿವಲಿಂಗೇ ಗೌಡ,ಉದ್ಯಮಿ ಹಾಗೂ ಟೂರ್ನಮೆಂಟ್ ನ ಮುಖ್ಯ ರೂವಾರಿ ಸಲಾವುದ್ದೀನ್ ಸಲ್ಮಾನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.‌ನಟಿ ಪೂಜಾ ಮಿಹಿಂಡಾ,ಉದ್ಯಮಿ ಕಮ್ರಾನ್ ಫಾಸಿಲ್,ಎ.ಇ‌.ಇ.ನಟೇಶ್,
ಗುತ್ತಿಗೆದಾರರಾದ ಗಂಗಾಧರ್,ಕೃಷ್ಣ,ಸುಬ್ರಹ್ಮಣ್ಯ ಬಾಬು,ಕುಮಾರ್,ಸುರೇಶ್,ಮಂಜುನಾಥ್ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಿತ್ತು.ವೀಕ್ಷಕ ವಿವರಣೆ ವಿಭಾಗದಲ್ಲಿ ಶಿವನಾರಾಯಣ್ ಐತಾಳ್ ಕೋಟ,ಪ್ರಶಾಂತ್ ಅಂಬಲಪಾಡಿ ಹಾಗೂ ವಿನಯ್ ಉದ್ಯಾವರ ಸಹಕರಿಸಿದರೆ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಪ್ರೇಕ್ಷಕರನ್ನು ರಂಜಿಸಿದ್ದರು.

LEAVE A REPLY

Please enter your comment!
Please enter your name here

nineteen + twelve =

ಅರಸೀಕೆರೆಯಲ್ಲಿ ಚವನ್ ಸು‌ನಾಮಿ-ಜಾನ್ಸನ್ ರಿಯಲ್ ಫೈಟರ್ಸ್ ಗೆ "ಚಮಕ್" ಇನಾಮು.

ಚಮಕ್ ಕ್ರಿಕೆಟರ್ಸ್ ಅರಸೀಕೆರೆ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರು,ಸಲೀನ ಟ್ರಾನ್ಸ್‌ಪೋರ್ಟ್‌ ನ ಮಾಲೀಕರಾದ ಸಲ್ಲವುದ್ದೀನ್ ಸಲ್ಮಾನ್ ಇವರ ದಕ್ಷ ಸಾರಥ್ಯದಲ್ಲಿ,ಹೆಚ್.ರಿಯಾಜ್ ಅಹಮ್ಮದ್,ಶ್ರೀಧರ್ ಹಾಗೂ ವೆಂಕಟೇಶ್ ಇವರ ಸ್ಮರಣಾರ್ಥವಾಗಿ ಅರಸೀಕೆರೆಯ ರೈಲ್ವೇ ಮೈದಾನದಲ್ಲಿ ಆಯೋಜಿಸಲಾಗಿದ್ದ,ಪ್ರತಿಷ್ಟಿತ  ಚಮಕ್ ಕಪ್-2021 ಉಡುಪಿಯ ಜಾನ್ಸನ್ ರಿಯಲ್ ಫೈಟರ್ಸ್ ತಂಡ ಜಯಿಸಿದೆ. ರಾಜ್ಯದ ಬಲಿಷ್ಠ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್ ನ ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ, ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫ್ರೆಂಡ್ಸ್ ಬೆಂಗಳೂರು ತಂಡ 6.3 ಓವರ್ ಗಳಲ್ಲಿ 31 ರನ್ ಗಳಿಗೆ ಸರ್ವಪತನ ಕಂಡಿತ್ತು.ಸುಲಭದ ಗುರಿಯನ್ನು ಬೆನ್ನಟ್ಟಿದ ಜಾನ್ಸನ್ ರಿಯಲ್ ಫೈಟರ್ಸ್ ನ ಆಟಗಾರರು 5.5 ಓವರ್ ಗಳಲ್ಲಿ ಗುರಿ ಮುಟ್ಟಿತ್ತು. ಪ್ರಥಮ ಪ್ರಶಸ್ತಿ ರೂಪದಲ್ಲಿ ಜಾನ್ಸನ್ ರಿಯಲ್ ಫೈಟರ್ಸ್ ತಂಡ 2 ಲಕ್ಷ,ದ್ವಿತೀಯ ಸ್ಥಾನಿ ಫ್ರೆಂಡ್ಸ್ ಬೆಂಗಳೂರು 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು. ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ ಹರಿ,ಬೆಸ್ಟ್ ಬೌಲರ್ ವಿಮಲ್,ಬೆಸ್ಟ್ ಕೀಪರ್

Send this to a friend