ಫ್ರೆಂಡ್ಸ್ ಮದ್ದುಗುಡ್ಡೆ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಕುಂದಾಪುರದ ಮದ್ದುಗುಡ್ಡೆ ಅಂಗಣದಲ್ಲಿ 2 ದಿನಗಳ ಕಾಲ ನಡೆದ ಫ್ರೆಂಡ್ಸ್ ಮದ್ದುಗುಡ್ಡೆ ಟ್ರೋಫಿ-2021 ಫ್ರೆಂಡ್ಸ್ ಕುಂದಾಪುರ ತಂಡ ಜಯಿಸಿದೆ.
ಒಟ್ಟು 32 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್ ನ ಫೈನಲ್ ನಲ್ಲಿ
ಅವಿಘ್ನ ಮಯೂರ ತಂಡವನ್ನು ಸೋಲಿಸಿ ಫ್ರೆಂಡ್ಸ್ ಕುಂದಾಪುರ ತಂಡ ಪ್ರಶಸ್ತಿ ಜಯಿಸಿದೆ.
ಪಂದ್ಯಾಟದ ಬೆಸ್ಟ್ ಬ್ಯಾಟ್ಸ್‌ಮನ್ ದಿಲೀಪ್,ಬೆಸ್ಟ್ ಬೌಲರ್ ಅರುಣ್,ಬೆಸ್ಟ್ ಕೀಪರ್ ಪ್ರಕಾಶ್ ಮದ್ದುಗುಡ್ಡೆ, ಫೈನಲ್ ನ ಪಂದ್ಯಶ್ರೇಷ್ಟ ಪ್ರವೀಣ್, ಸರಣಿಯುದ್ದಕ್ಕೂ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಿದ ಹಿರಿಯ ಆಟಗಾರರಾದ ಚಕ್ರವರ್ತಿ ಮನೋಜ್ ನಾಯರ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.