Categories
ಕ್ರಿಕೆಟ್

ಭಾರತ ಒಲಿಂಪಿಕ್ಸ್ ವಿಶೇಷ ಚೇತನ ಕ್ರೀಡಾಳುಗಳ ತರಬೇತುದಾರರ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಟೊರ್ಪೆಡೋಸ್ ಗೌತಮ್ ಶೆಟ್ಟಿ.

ಜನವರಿ 6 ರಿಂದ 10 ರ ತನಕ‌ ಮಣಿಪಾಲ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಭಾರತ ವಿಶೇಷ ಚೇತನರ ಒಲಿಂಪಿಕ್ಸ್ ಕ್ರೀಡಾಪಟುಗಳ ಕೋಚ್ ಗಳಿಗಾಗಿ ವಿಶೇಷ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.

ಈ ಸಂದರ್ಭ ಭಾರತ ವಿಶೇಷ ಚೇತನರ ಒಲಿಂಪಿಕ್ಸ್ ಕ್ರಿಕೆಟ್,ವಿವಿಧ ಕ್ರೀಡೆಗಳ ಕೋಚ್ ಗಳ ಆಯ್ಕೆ ಸಮಿತಿಯ ಪ್ರಮುಖ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಈ ತರಬೇತಿ ಶಿಬಿರದಲ್ಲಿ 22 ರಾಜ್ಯಗಳಿಂದ ವಿವಿಧ ಕ್ರೀಡೆಗಳ ತರಬೇತುದಾರರು ಆಗಮಿಸಿದರು.

ಮುಖ್ಯವಾಗಿ ಭಾರತ ವಿಶೇಷ ಚೇತನ ಒಲಿಂಪಿಕ್ ನ ಆಯ್ಕೆ ಸಮಿತಿಯ ಪ್ರಮುಖರು ಹಾಗೂ ಭಾರತ ಕ್ರೀಡಾ ಪ್ರಾಧಿಕಾರದ ಪರಿವೀಕ್ಷಕರು ಚಂದನ್ ಪಣಿಕರ್, ಬೆಂಗಳೂರು ಸ್ಪೆಷಲ್ ಒಲಿಂಪಿಕ್ಸ್ ನ ಭಾರತ ಕ್ರಿಕೆಟ್ ತಂಡ Area director ಕುಮುದಾ ಟಿ.ಎ, ವಲಯ ಕ್ರೀಡಾ ನಿರ್ದೇಶಕರು,ಭಾರತ ತಂಡದ ಕೋಚ್‌  ಅಮರೇಂದ್ರ ತರಬೇತಿ ಶಿಬಿರದ ಪರಿವೀಕ್ಷಣೆಗೆ ಆಗಮಿಸಿದ್ದರು.
‌‌‌‌

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

five − one =